Advertisement

ಕೋವಿಡ್ 19 ಲಾಕ್‌ಡೌನ್‌  ಬಳಿಕ ಟೋಲ್‌ ಹೆಚ್ಚಳ ಬಿಸಿ

10:36 AM Apr 05, 2020 | Sriram |

ಮಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವ ವಾಹನ ಚಾಲಕರಿಗೆ ಕೋವಿಡ್ 19 ಲಾಕ್‌ಡೌನ್‌ ಮುಗಿದ ಅನಂತರ ಟೋಲ್‌ ಹೆಚ್ಚಳದ ಬಿಸಿ ತಟ್ಟಲಿದೆ.

Advertisement

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರತಿವರ್ಷದಂತೆ ಈ ಬಾರಿಯೂ ಟೋಲ್‌ ಹೆಚ್ಚಳ ಮಾಡಿದ್ದು ಇದು ಎ. 1ರಿಂದಲೇ ಜಾರಿಗೆ ಬಂದಿದೆ. ಆದರೆ ಪ್ರಸ್ತುತ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಟೋಲ್‌ಗೇಟ್‌ಗಳಲ್ಲಿ ಶುಲ್ಕ ಸಂಗ್ರಹಿಸುತ್ತಿಲ್ಲ. ಎ. 15ರ ಅನಂತರ ಇದು ವಾಹನ ಚಾಲಕರ ಅನುಭವಕ್ಕೆ ಬರಲಿದೆ.

ಕಾರು, ಜೀಪ್‌, ವ್ಯಾನ್‌ ಅಥವಾ ಇತರ ಲಘು ಲಘು ವಾಹನಗಳ ತಿಂಗಳ ಪಾಸ್‌ನಲ್ಲಿ (20 ಕಿ.ಮೀ. ವ್ಯಾಪ್ತಿ) 10 ರೂ. ಹೆಚ್ಚಳವಾಗಿದೆ. ಇದರ ಜತೆ ಟ್ರಕ್‌ಗಳ ಟೋಲ್‌ ಕೂಡ ಹೆಚ್ಚಳ ಮಾಡಲಾಗಿದೆ. ಕೆಲವು ಮಾದರಿಯ ವಾಹನಗಳಿಗೆ 5 ರೂ.ಗಳಷ್ಟು ಟೋಲ್‌ ಹೆಚ್ಚಿಸಲಾಗಿದೆ.

ಪ್ರತಿ ವರ್ಷ ಕೂಡ ಎ. 1ರಿಂದ ಟೋಲ್‌ ಹೆಚ್ಚಳವಾಗುತ್ತದೆ. ಅದರಂತೆ ಈ ಬಾರಿಯೂ ಹೆಚ್ಚಳ ಮಾಡಲಾಗಿದೆ. ಆದರೆ ಈ ಬಾರಿ ಕೋವಿಡ್ 19  ಲಾಕ್‌ಡೌನ್‌, ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಟೋಲ್‌ ಶುಲ್ಕ ಹೆಚ್ಚಳವಾಗಿರುವುದು ಹೆದ್ದಾರಿ ಬಳಕೆದಾರರ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next