Advertisement

ಸ್ಥಳೀಯರಿಗೆ ಟೋಲ್: ಮುಂದೂಡಿಕೆ ಸಾಧ್ಯತೆ

06:15 AM Jul 23, 2019 | Team Udayavani |

ಸುರತ್ಕಲ್: ಸುರತ್ಕಲ್ ಟೋಲ್ ಕೇಂದ್ರದಲ್ಲಿ ಜು.16ರಿಂದ ಕೆಎ 19 ನೋಂದಾಯಿತ ಖಾಸಗಿ ಕಾರುಗಳು ಒಂದು ಬಾರಿ ಓಡಾಟಕ್ಕೆ ಕನಿಷ್ಠ ದರ ರೂ.25 ಶುಲ್ಕ ಪಾವತಿ ಮಾಡುವುದು ಸದ್ಯದ ಮಟ್ಟಿಗೆ ಮುಂದೂಡಿಕೆಯಾಗುವ ಲಕ್ಷಣಗಳು ಗೋಚರಿಸಿವೆ.

Advertisement

ಭಾರೀ ಮಳೆ ನಿಭಾವಣೆ ಮತ್ತು ಡೆಂಗ್ಯೂ ನಿರ್ಮೂಲನ ಕಾರ್ಯದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲೆಯ ವಿವಿಧ ಇಲಾಖೆಗಳು ತೊಡಗಿಕೊಂಡಿರುವುದು ಒಂದು ಕಾರಣವಾದರೆ, ಇನ್ನೊಂದೆಡೆ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಎನ್‌ಎಚ್ಎಐ ಚೆಯರ್‌ಮನ್‌ ಅವರಿಗೆ ಸ್ಥಳೀಯರಿಗೆ ವಿನಾಯಿತಿ ನೀಡುವಂತೆ ಮತ್ತು ಟೋಲ್ನ್ನು ವಿಲೀನಗೊಳಿಸುವ ಕಾರ್ಯ ಚುರುಕುಗೊಳಿಸುವಂತೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ಹೆದ್ದಾರಿ ಪ್ರಾಧಿಕಾರದ ನಿರ್ಧಾರ ಸ್ಪಷ್ಟವಾಗಲಿದೆ.

ಜು.16ರಂದು ಸ್ಥಳೀಯ ಖಾಸಗಿ ಕಾರುಗಳಿಗೆ ಸುಂಕ ಪಡೆಯಲು ಪೊಲೀಸ್‌ ಭದ್ರತೆ ನೀಡುವಂತೆ ಎನ್‌ಎಚ್ಎಐ ದ.ಕ. ಜಿಲ್ಲಾಧಿಕಾರಿಯವರಿಗೆ ಮುಖ್ಯ ಕಾರ್ಯದರ್ಶಿಯವರ ಮೂಲಕ ಸೂಚಿಸಿತ್ತು. ಏಕಮುಖ ಸಂಚಾರಕ್ಕೆ ರೂ.25, ಪಾಸ್‌ ದರ 265 ರೂ. ನಿಗದಿ ಮಾಡಲಾಗಿತ್ತು. ಸ್ಥಳೀಯ 20 ಕಿ.ಮೀ. ವ್ಯಾಪ್ತಿಯ ಖಾಸಗಿ ಕಾರು ಮಾಲಕರಿಗೆ ಈ ರಿಯಾಯಿತಿ ದರ ಅನ್ವಯವಾಗುತ್ತದೆ.

ಇದರ ವಿರುದ್ಧ ಸ್ಥಳೀಯರ ಹೋರಾಟದ ಫಲವಾಗಿ ಜಿಲ್ಲಾಡಳಿತ ಸ್ಥಳೀಯರಿಗೆ ಜು.23ರ ವರೆಗೆ ವಿನಾಯಿತಿ ನೀಡುವಂತೆ ಸೂಚಿಸಿತ್ತು. ಇದುವರೆಗೆ ಯಾವುದೇ ಸ್ಪಷ್ಟ ಸೂಚನೆ ಬಾರದಿರುವ ಹಿನ್ನೆಲೆಯಲ್ಲಿ ಸುಂಕ ನೀಡುವುದು ಸ್ಥಳೀಯರಿಗೆ ಅನಿವಾರ್ಯವಾಗಲಿದೆಯೋ ಅಥವಾ ರದ್ದಾಗಲಿದೆಯೋ ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next