Advertisement
ಸುರತ್ಕಲ್ ಟೋಲ್‌ಗೇಟ್ ಆರಂಭ ವಾದಾಗಿನಿಂದ ಅಲ್ಲಿನ ಅವ್ಯವಸ್ಥೆ, ಬೇಕಾಬಿಟ್ಟಿ ಟೋಲ್ ಸಂಗ್ರಹವನ್ನು ವಿರೋಧಿಸುತ್ತ ಬಂದಿರುವ ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಪ್ರಮುಖರು ಸೋಮವಾರ ಮಂಗಳೂರಿನಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ, ಟೋಲ್ ಗೇಟನ್ನು ಶಾಶ್ವತವಾಗಿ ಮುಚ್ಚಬೇಕು, ಜು. 16 ರಿಂದ ಟೋಲ್ ಸಂಗ್ರಹಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಟೋಲ್ ಸಂಗ್ರಹಕ್ಕೆ ಮುಂದಾದಲ್ಲಿ ಮಂಗಳವಾರ ಪಕ್ಷಾತೀತ ಪ್ರತಿಭಟನೆ ನಡೆಸಲು ಸಮಿತಿ ನಿರ್ಧರಿಸಿದೆ. ಬಿಜೆಪಿ ಬೆಂಬಲ ಸೂಚಿಸಿದೆ.
ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹ ಆರಂಭವಾಗಲಿರುವ ಜು.16ರಂದು ಬೆಳಗ್ಗೆ 7.30ಕ್ಕೆ ಪಕ್ಷಾತೀತವಾಗಿ ಪ್ರಮುಖರು, ನಾಗರಿಕರ ಬೆಂಬಲದೊಂದಿಗೆ ಟೋಲ್ ಗೇಟ್ ಮುಂಭಾಗ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಟೋಲ್ ಸಂಗ್ರಹಕ್ಕೆ ಮುಂದಾದರೆ ಸಾಮೂಹಿಕವಾಗಿ ತಡೆಯಲು ತೀರ್ಮಾನಿಸಲಾಗಿದೆ.
Related Articles
ಇದೇವೇಳೆ ಸುರತ್ಕಲ್ ಟೋಲ್ ಕೇಂದ್ರದಲ್ಲಿ ಜು. 16ರಿಂದ ಸ್ಥಳೀಯರಿಂದ ಟೋಲ್ ಸಂಗ್ರಹಿಸುವ ಹೆದ್ದಾರಿ ಪ್ರಾ ಧಿಕಾರದ ಕ್ರಮವನ್ನು ತಡೆಯುವಂತೆ ಜಿಲ್ಲಾಧಿಕಾರಿಗೆ ಸೂಚಿಸಲು ಉಸ್ತುವಾರಿ ಸಚಿವ ಯು.ಟಿ. ಖಾದರ್ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಮತ್ತು ತಾತ್ಕಾಲಿಕ ನೆಲೆಯಲ್ಲಿರುವ ಅಕ್ರಮ ಟೋಲ್ ಗೇಟ್ ಮುಚ್ಚುವ ನಿಟ್ಟಿನಲ್ಲಿ ಮುಂದುವರಿಯಲು ಸೂಚಿಸಿದ್ದಾರೆ. ಟೋಲ್ ಗೇಟ್ ವಿರೋ ಧಿ ಹೋರಾಟ ಸಮಿತಿ, ಸುರತ್ಕಲ್ ಇವರ ಮನವಿಗೆ ಸ್ಪಂದಿಸಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
Advertisement
ಇಲ್ಲಿರುವುದು ಹೆದ್ದಾರಿಯಲ್ಲ; ಬರೇ ಹೊಂಡಗುಂಡಿಎನ್ಐಟಿಕೆಯಿಂದ ಆಚೆಗಿನ ರಾಷ್ಟ್ರೀಯ ಹೆದ್ದಾರಿ ಭಾಗ ಭಾರೀ ಹೊಂಡ ಗುಂಡಿಗಳಿಂದ ಕೂಡಿದೆ. ಕೊಟ್ಟಾರ ಚೌಕಿ ವರೆಗಿನ ಹೆದ್ದಾರಿಯ ಹಲವೆಡೆ ಹೊಂಡ ಗುಂಡಿ, ಸರ್ವಿಸ್ ರಸ್ತೆ ಇಲ್ಲ ಗಳಿಂದ ಸಂಚಾರ ತ್ರಾಸದಾಯಕವಾಗಿದೆ. ಪ್ರತೀ ವರ್ಷ ಮಾರ್ಚ್ -ಎಪ್ರಿಲ್‌ನಲ್ಲಿ ಮರು ಡಾಮರೀಕರಣ ಮಾಡಿದ ಬಳಿಕ ಒಂದೇ ಮಳೆಗೆ ಸಂಚಾರ ಅಸಾಧ್ಯ ಸ್ಥಿತಿಗೆ ಮರಳುವುದು ಈ ರಸ್ತೆಯ ಸ್ಥಿತಿ. ಇದು ಮಳೆಗಾಲದ ಸ್ಥಿತಿಯಾದರೆ ಬೇಸಗೆಯಲ್ಲೂ ಸುಸ್ಥಿತಿಯಲ್ಲಿರುತ್ತದೆ ಎಂದೇನಿಲ್ಲ. ಆಗ ನೀರಿಲ್ಲದ ಗುಂಡಿ ಗಳಲ್ಲಿ ಇಳಿದೇಳಬೇಕು, ಧೂಳಿಗೆ ಮೈಯೊಡ್ಡಬೇಕು. ಇಲ್ಲಗಳಿಗೆ ಟೋಲ್
ಸರ್ವಿಸ್ ರಸ್ತೆಯಿಲ್ಲ, ರಸ್ತೆ ಬದಿ ಚರಂಡಿ, ಫುಟ್‌ಪಾತ್- ಹೀಗೆ ಇಲ್ಲಗಳೇ. ಮಿಗಿಲಾಗಿ ಸುರತ್ಕಲ್ ಟೋಲ್ ಕೇಂದ್ರದಲ್ಲೇ ಹೆದ್ದಾರಿ ಟೋಲ್ ಗೇಟ್‌ಗಳಲ್ಲಿ ಇರಲೇ ಬೇಕಾದ ಸೌಲಭ್ಯಗಳಿಲ್ಲ. ಕೇಂದ್ರವೇ ತಗಡು ಶೀಟಿನಡಿ ಕಾರ್ಯಾ ಚರಿಸುತ್ತಿರುವುದು ಇಲ್ಲಿನ ದುಃಸ್ಥಿತಿ.