Advertisement
ಭಾನುವಾರ, ಸೌದಿ ಆರೋಗ್ಯ ಸಚಿವ ಫಹದ್ ಬಿನ್ ಅಬ್ದುರ್ರಹ್ಮಾನ್ ಅಲ್-ಜಲಾಜೆಲ್ ಅವರು ನೀಡಿರುವ ಮಾಹಿತಿ ಪ್ರಕಾರ ಮೃತಪಟ್ಟ 1,301ರಲ್ಲಿ 83% ಯಾತ್ರಿಕರು ಅನಧಿಕೃತವಾಗಿ ಬಂದವರು ಅಂದರೆ ನೋಂದಣಿ ಮಾಡಿಕೊಳ್ಳದೆ ಬಂದವರಾಗಿದ್ದು ಇಲ್ಲಿ ಅವರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದೆ ಮೃತಪಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
ಬಿಸಿಲಿನ ತಾಪಕ್ಕೆ ಮೆಕ್ಕಾದಲ್ಲಿ ಮೃತಪಟ್ಟವರಲ್ಲಿ 660ಕ್ಕೂ ಹೆಚ್ಚು ಈಜಿಪ್ಟ್ ನಾಗರಿಕರು ಸೇರಿದ್ದಾರೆ ಎಂದು ಕೈರೋದಲ್ಲಿ ಸೌದಿ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಇವರಲ್ಲಿ 31 ಮಂದಿಯನ್ನು ಹೊರತುಪಡಿಸಿ ಎಲ್ಲರೂ ಅನಧಿಕೃತ ಯಾತ್ರಿಗಳು. ಸೌದಿ ಅರೇಬಿಯಾದಲ್ಲಿ ಹಲವಾರು ಅನಧಿಕೃತ ಹಜ್ ಯಾತ್ರಾರ್ಥಿಗಳು ಸಾವನ್ನಪ್ಪಿದ ನಂತರ, ಅನಧಿಕೃತ ಯಾತ್ರಿಕರಿಗೆ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲು ಸಹಾಯ ಮಾಡುತ್ತಿದ್ದ 16 ಟ್ರಾವೆಲ್ ಏಜೆನ್ಸಿಗಳ ಪರವಾನಗಿಯನ್ನು ಈಜಿಪ್ಟ್ ರದ್ದುಗೊಳಿಸಿದೆ. ಅಡಿಕ್ರಿಗಳ ಮಾಹಿತಿ ಪ್ರಕಾರ ಮೆಕ್ಕಾದ ಅಲ್-ಮುಯಿಸ್ಸಾಮ್ ಪ್ರದೇಶದಲ್ಲಿ ಇರುವ ತುರ್ತು ಸಂಕೀರ್ಣದಲ್ಲಿ ಹೆಚ್ಚಿನ ಸಾವು ಸಂಭವಿಸಿವೆ ಎಂದು ಹೇಳಿದ್ದಾರೆ.
Related Articles
Advertisement
ಮೃತರಲ್ಲಿ ಹೆಚ್ಚುನವರು ಕಾಲ್ನಡಿಗೆ ಮಾಡಿದವರು: ಸೌದಿ ಅಧಿಕಾರಿಗಳು ನೋಂದಣಿ ಮಾಡದೇ ಬರುತ್ತಿರುವ ಯಾತ್ರಿಕರ ಮೇಲೆ ಕಠಿಣ ಕ್ರಮ ಕೈಗೊಂಡಿದ್ದರೂ ಇದರ ಹೊರತಾಗಿಯೂ, ಹೆಚ್ಚಿನ ಸಂಖ್ಯೆಯ ಈಜಿಪ್ಟ್ ಯಾತ್ರಿಕರು ಮೆಕ್ಕಾ ಮತ್ತು ಅದರ ಸುತ್ತಮುತ್ತಲಿನ ಪವಿತ್ರ ಸ್ಥಳಗಳನ್ನು ತಲುಪುವಲ್ಲಿ ಯಶಸ್ವಿಯಾದರು. ಈ ಯಾತ್ರಾರ್ಥಿಗಳಲ್ಲಿ ಹೆಚ್ಚಿನವರು ಕಾಲ್ನಡಿಗೆಯಲ್ಲಿ ಮೆಕ್ಕಾವನ್ನು ತಲುಪಿದರು, ಇದರಿಂದಾಗಿ ಅವರು ಬಿಸಿಲಿನ ಶಾಖದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಮೃತರು ಯಾವ ದೇಶಕ್ಕೆ ಸೇರಿದವರು:
ಮಾಧ್ಯಮ ವರದಿಯ ಪ್ರಕಾರ ಮೃತರಲ್ಲಿ ಈಜಿಪ್ಟ್ ನ 660, ಇಂಡೋನೇಷ್ಯಾದ 165, ಭಾರತದ 98 ಯಾತ್ರಿಕರು ಮತ್ತು ಜೋರ್ಡಾನ್, ಟ್ಯುನಿಷಿಯಾ, ಮೊರಾಕೊ, ಅಲ್ಜೀರಿಯಾ ಮತ್ತು ಮಲೇಷ್ಯಾದ ಡಜನ್ಗಟ್ಟಲೆ ಯಾತ್ರಿಕರು ಸೇರಿದ್ದಾರೆ. ಇದನ್ನೂ ಓದಿ: Russia: ಡಾಗೆಸ್ತಾನ್‌ನಲ್ಲಿ ಭಯೋತ್ಪಾದಕರ ದಾಳಿ, ಪಾದ್ರಿ, ಪೊಲೀಸರು ಸೇರಿ 15 ಮಂದಿ ಮೃತ್ಯು