ನವದೆಹಲಿ: ಟೋಕಿಯೋ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಸಿಕ್ಕಿದೆ. ಭಾರತದ ಮಹಿಳಾ ಶೂಟರ್ ಅವನಿ ಲೇಖರ ಅವರು 10 ಮೀಟರ್ನ ಏರ್ ರೈಫಲ್ ಶೂಟಿಂಗ್ನಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.
ಇನ್ನು ಚೀನಾದ ಕ್ಯುಪಿಂಗ್ ಜಾಂಗ್ ಬೆಳ್ಳಿ ಗೆದ್ದರೆ ಉಕ್ರೇನ್ ದೇಶದ ಇರಿನಾ ಶ್ಚೆಟ್ನಿಕ್ ಕಂಚು ಪಡೆದಿದ್ದಾರೆ.
ಚಕ್ರ ಎಸೆತ ಸ್ಪರ್ಧೆಯಲ್ಲಿ ಯೋಗೇಶ್ ಕಟುನಿಯಾ ಬೆಳ್ಳಿ ಪದಕ ಗೆದ್ದಿದ್ದಾರೆ.
Related Articles
ಭಾನುವಾರ ಆ. 29 ರಾಷ್ಟ್ರೀಯ ಕ್ರೀಡಾ ದಿನ. ಈ ದಿನಕ್ಕೆ ಮೊದಲ ಸಂಭ್ರಮ ತಂದುಕೊಟ್ಟ ವರು ಭವಿನಾ ಪಟೇಲ್. ಟೇಬಲ್ ಟೆನ್ನಿ ಸ್ ನಲ್ಲಿ ಭಾರೀ ಭರ ವಸೆ ಹುಟ್ಟಿ ಸಿದ್ದ ಭವಿನಾ ಚಿನ್ನದ ಮೇಲೆ ಕಣ್ಣಿ ಟ್ಟಿ ದ್ದರು. ಆದರೆ ಫೈನಲ್ ನಲ್ಲಿ ಚೀನದ ಯಿಂಗ್ ಜೂ ವಿರುದ್ಧ 3-0 ಅಂತ ರ ದಲ್ಲಿ ಸೋತು ಬೆಳ್ಳಿ ಗೆದ್ದರು.
ಹೈಜಂಪ್‌ನ ಟಿ47 ವಿಭಾ ಗ ದಲ್ಲಿ ನಿಶಾದ್ ಕುಮಾರ್ ಬೆಳ್ಳಿ ಗೆದ್ದು ಭಾರ ತಕ್ಕೆ ಎರ ಡನೇ ಪದಕ ತಂದು ಕೊ ಟ್ಟರು. ಆರಂಭ ದಿಂದಲೂ ಉತ್ತಮ ಸ್ಪರ್ಧೆ ನೀಡುತ್ತ ಬಂದ ನಿಶಾದ್, ಕಡೆ ವ ರೆಗೂ ದ್ವಿತೀಯ ಸ್ಥಾನಿ ಯಾ ಗಿ ಉಳಿ ದು ಕೊಂಡರು. 2.06 ಮೀ. ಎತ್ತ ರಕ್ಕೆ ಜಿಗಿದು ಏಷ್ಯಾದ ದಾಖ ಲೆ ಯನ್ನೂ ನಿರ್ಮಿಸಿ ದರು.
ಡಿಸ್ಕಸ್ ಥ್ರೋನ ಎಫ್52 ವಿಭಾಗದಲ್ಲಿ ವಿನೋದ್ ಕುಮಾರ್ ಅವರು ಮೂರನೇ ಸ್ಥಾನ ಪಡೆದಿದ್ದಾರೆ. ಆದರೆ ತಾಂತ್ರಿಕ ಕಾರಣಗಳಿಗಾಗಿ ಇವರಿಗೆ ರವಿವಾರ ಪದಕ ಪ್ರದಾನ ಮಾಡಿಲ್ಲ. 19.91 ಮೀ. ದೂರಕ್ಕೆ ಡಿಸ್ಕಸ್ ಎಸೆದ ಅವರು, ಏಷ್ಯಾದ ದಾಖಲೆ ಯನ್ನೂ ನಿರ್ಮಿಸಿದರು.