Advertisement

ಒಲಿಂಪಿಕ್ಸ್‌ ಮುಂದೂಡಿಕೆ; 3 ಬಿ. ಡಾಲರ್‌ಗೂ ಹೆಚ್ಚು ಖರ್ಚು

10:15 PM Nov 30, 2020 | mahesh |

ಟೋಕಿಯೊ: ಈ ವರ್ಷ ನಡೆಯಬೇಕಿದ್ದ ಟೋಕಿಯೊ ಒಲಿಂಪಿಕ್ಸ್‌ ಪಂದ್ಯಾವಳಿಯನ್ನು 2021ಕ್ಕೆ ಮುಂದೂಡಿದ್ದರಿಂದ ಜಪಾನಿಗೆ 3 ಬಿಲಿಯನ್‌ ಡಾಲರ್‌ ನಷ್ಟ ಅಥವಾ ಹೆಚ್ಚುವರಿ ಖರ್ಚು ಬೀಳಲಿದೆ ಎಂದು ಅಂದಾಜಿಸಲಾಗಿದೆ. ಜಪಾನಿನ ಕೆಲವು ಪ್ರಮುಖ ದಿನಪತ್ರಿಕೆಗಳು, ನ್ಯಾಶನಲ್‌ ಬ್ರಾಡ್‌ಕಾಸ್ಟರ್‌ ಎನ್‌ಎಚ್‌ಕೆ, ಜಪಾನೀ ನ್ಯೂಸ್‌ ಏಜೆನ್ಸಿ ಕ್ಯೂಡೊ ಸೇರಿಕೊಂಡು ಇಂಥದೊಂದು ವರದಿ ನೀಡಿವೆ.
“ಕೊರೊನಾದಿಂದ ಕೂಟ ಮುಂದೂಡಲ್ಪಟ್ಟ ಪರಿಣಾಮವಾಗಿ ನಮಗೆ 3 ಬಿಲಿಯನ್‌ ಡಾಲರ್‌ ಹೆಚ್ಚುವರಿ ಮೊತ್ತದ ಖರ್ಚು ಬೀಳಲಿದೆ ಎಂದು ವರದಿಯಾಗುತ್ತಿದೆ. ಆದರೆ ನಾವು ಈ ಕುರಿತು ಇನ್ನಷ್ಟೇ ಲೆಕ್ಕ ಹಾಕಬೇಕಿದೆ. ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ ಯಾವುದೇ ವಿವರ ನೀಡಲು ಸದ್ಯ ಸಾಧ್ಯವಿಲ್ಲ’ ಎಂಬು ದಾಗಿ ಟೋಕಿಯೊ ಒಲಿಂಪಿಕ್ಸ್‌ ಸಂಘಟಕರು ತಿಳಿಸಿದ್ದಾರೆ.

Advertisement

ದುಬಾರಿ ಕ್ರೀಡಾಕೂಟ
ಒಂದು ಲೆಕ್ಕಾಚಾರದ ಪ್ರಕಾರ ಒಲಿಂಪಿಕ್ಸ್‌ ಇತಿಹಾಸದಲ್ಲೇ ಟೋಕಿಯೊ ಕೂಟ ಅತ್ಯಂತ ದುಬಾರಿಯಾಗಲಿದೆ. ಅಧಿಕೃತ ಲೆಕ್ಕದಂತೆ ಈ ಪಂದ್ಯಾವಳಿಗೆ 12.6 ಬಿಲಿಯನ್‌ ಡಾಲರ್‌ ವೆಚ್ಚವಾಗಲಿದೆ ಎಂಬುದು ಆರಂಭದ ಮಾಹಿತಿಯಾಗಿತ್ತು. ಆದರೆ ಜಪಾನ್‌ ಸರಕಾರ ಕಳೆದ ವರ್ಷ ನೀಡಿದ ಲೆಕ್ಕದಂತೆ ಇದು ದ್ವಿಗುಣಗೊಳ್ಳಲಿದೆ. ಇದರಲ್ಲಿ 5.6 ಬಿ. ಡಾಲರ್‌ ಸಾರ್ವಜನಿಕರ ಹಣವಾಗಿದೆ. 2013ರಲ್ಲಿ ಬಿಡ್‌ ಸಲ್ಲಿಸುವಾಗ ಟೋಕಿಯೊ ಒಲಿಂಪಿಕ್‌ ಗೇಮ್ಸ್‌ ಸಂಘಟನೆಗೆ 7.3 ಬಿಲಿಯನ್‌ ಡಾಲರ್‌ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next