Advertisement

ಟೋಕಿಯೊ ಒಲಿಂಪಿಕ್ಸ್‌: ಕೊರೊನಾ ವೈರಸ್‌ ಭೀತಿ ಇಲ್ಲ

10:11 AM Feb 07, 2020 | Sriram |

ಟೋಕಿಯೊ: ಜಗತ್ತಿನಾದ್ಯಂತ ತಲ್ಲಣವುಂಟು ಮಾಡಿರುವ ಕೊರೊನಾ ವೈರಸ್‌ನ ಕಾಟ ಟೋಕಿಯೊ ಒಲಿಂಪಿಕ್ಸ್‌ ಗೇಮ್ಸ್‌ಗೂ ತಟ್ಟಬಹುದು ಎಂಬ ಸುದ್ದಿಯೊಂದು ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ ಒಲಿಂಪಿಕ್ಸ್‌ ಸಂಘಟಕರು ಇದನ್ನು ಅಲ್ಲಗಳೆದಿದ್ದು, ಒಲಿಂಪಿಕ್ಸ್‌ ನಿಗದಿಯಾಗಿರುವಂತೆ ನಿರಾತಂಕವಾಗಿ ನಡೆಯಲಿದೆ ಎಂದು ಭರವಸೆ ನೀಡಿದ್ದಾರೆ.

Advertisement

“ಚೀನದಲ್ಲಿ ಈಗಾಗಲೇ 560ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡಿರುವ ಹಾಗೂ ಸುಮಾರು 28,000 ಮಂದಿಯನ್ನು ಅಸ್ವಸ್ಥರನ್ನಾಗಿ ಮಾಡಿರುವ ಕೊರೊನಾ ವೈರಸ್‌ ಬಗ್ಗೆ ಆತಂಕವಿರುವುದು ನಿಜ. ಆದರೆ ನಾವು ಪರಿಸ್ಥಿತಿಯನ್ನು ಅವಲೋಕಿಸಲು ಕಾರ್ಯಪಡೆಯೊಂದನ್ನು ರಚಿಸಿದ್ದೇವೆ. ಒಲಿಂಪಿಕ್ಸ್‌ ಕೂಟಕ್ಕೆ ಕೊರೊನಾದಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಕ್ರೀಡಾಕೂಟ ನಿಗದಿಯಾಗಿರುವಂತೆಯೇ ನಡೆಯಲಿದೆ’ ಎಂದು ಸಂಘಟನಾ ಸಮಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟೊಶಿರೊ ಮುಟೊ ಹೇಳಿದ್ದಾರೆ.

ಸೂಕ್ತ ಮುನ್ನೆಚ್ಚರಿಕೆ
“ಭಯ ಎನ್ನುವುದು ವೈರಸ್‌ಗಿಂತಲೂ ವೇಗವಾಗಿ ಹರಡುತ್ತಿದೆ. ಈ ಸಂದರ್ಭದಲ್ಲಿ ನಾವು ಸಮಾಧಾನ ಚಿತ್ತದಿಂದ ಇರುವುದು ಅಗತ್ಯ. ಕೊರೊನಾದಿಂದ ಒಲಿಂಪಿಕ್ಸ್‌ಗೆ ಯಾವುದೇ ತೊಂದರೆಯಾಗುವುದಿಲ್ಲ. ಚೀನದ ಹೊರಗೆ ಕೇವಲ 191 ಕೊರೊನಾ ಪ್ರಕರಣಗಳಷ್ಟೇ ವರದಿಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಇನ್ನೂ ಇದು ವಿಶ್ವವ್ಯಾಪಿ ರೋಗ ಎಂದು ಘೋಷಣೆ ಮಾಡಿಲ್ಲ. ಝಿಕಾ ವೈರಸ್‌ ಭೀತಿಯಿರುವಾಗಲೇ ರಿಯೊ ಒಲಿಂಪಿಕ್ಸ್‌ ಆಯೋಜಿಸಿದ್ದೇವೆ. ತಜ್ಞರ ಸಲಹೆಯಂತೆ ಟೋಕಿಯೊ ಒಲಿಂ
ಪಿಕ್ಸ್‌ಗೂ ಕಾರ್ಯ ಯೋಜನೆ ರೂಪಿಸಿಕೊಳ್ಳುತ್ತೇವೆ’ ಎಂದಿದ್ದಾರೆ ಮುಟೊ.

Advertisement

Udayavani is now on Telegram. Click here to join our channel and stay updated with the latest news.

Next