Advertisement

ಶಿಶುವಿನ ಚಿಕಿತ್ಸೆಗೆ ಟೋಕ್ಯೋ ಪದಕ ಹರಾಜು!

08:48 PM Aug 18, 2021 | Team Udayavani |

ವಾರ್ಸಾ (ಪೋಲೆಂಡ್‌): ಇತ್ತೀಚೆಗೆ ಟೋಕ್ಯೋ ಒಲಿಂಪಿಕ್ಸ್‌ ವನಿತಾ ಜಾವೆಲಿನ್‌ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಪೋಲೆಂಡ್‌ನ‌ ಮರಿಯಾ ಆಂಡ್ರೆಸಿಕ್‌ ತಮ್ಮ ಪದಕವನ್ನು ಹರಾಜು ಹಾಕಿದ್ದಾರೆ. ಎಂಟು ತಿಂಗಳ ಮಗುವಿನ ಹೃದಯ ಚಿಕಿತ್ಸೆಗಾಗಿ ಆರ್ಥಿಕ ನೆರವು ಒದಗಿಸುವ ಸಲುವಾಗಿ ಅವರು ಈ ನಿರ್ಧಾರಕ್ಕೆ ಬಂದಿದ್ದರು. ಈ ಪದಕ 125,000 ಡಾಲರ್‌ ಮೊತ್ತಕ್ಕೆ ಹರಾಜಾಯಿತು.

Advertisement

ಇದನ್ನು ಪೋಲೆಂಡಿನ ಖ್ಯಾತ ಝಪ್ಕಾ ಕನ್ವೇನಿಯನ್ಸ್‌ ಸ್ಟೋರ್ ಕಂಪೆನಿ’ ಖರೀದಿಸಿತು. ಆದರೆ ಬಿಡ್‌ ಗೆದ್ದ ಬಳಿಕ ಅದು ಮಾನವೀಯತೆ ಮೆರೆಯಿತು. ಈ ಪದಕವನ್ನು ತಾವೇ ಇರಿಸಿಕೊಳ್ಳುವಂತೆ ಮರಿಯಾ ಆಂಡ್ರೆಸಿಕ್‌ಗೆ ಸೂಚಿಸಿ, ಸ್ಟಾನ್‌ಫೋರ್ಡ್‌ ಯುನಿವರ್ಸಿಟಿ ಹಾಸ್ಪಿಟಲ್‌’ನಲ್ಲಿ ಮಗುವಿನ ಶಸ್ತ್ರಚಿಕಿತ್ಸೆಗೆ ತಾನು ವ್ಯವಸ್ಥೆ ಮಾಡುವುದಾಗಿ ಹೇಳಿತು!

ಇದನ್ನೂ ಓದಿ:ಕಲಾಪದಿಂದ ಪಲಾಯನ ಮಾಡಿದ ಕಾಂಗ್ರೆಸ್‍ನಿಂದ ಜನತೆಯ ದಾರಿ ತಪ್ಪಿಸುವ ವ್ಯರ್ಥ ಪ್ರಯತ್ನ

ರಿಯೋದಲ್ಲಿ 4ನೇ ಸ್ಥಾನ:
ಮರಿಯಾ ಆಂಡ್ರೆಸಿಕ್‌ 64.61 ಮೀ. ದೂರದ ಸಾಧನೆಯೊಂದಿಗೆ ಈ ಬೆಳ್ಳಿ ಪದಕ ಜಯಿಸಿದ್ದರು. ಕಳೆದ ರಿಯೋ ಒಲಿಂಪಿಕ್ಸ್‌ನಲ್ಲಿ ಆಂಡ್ರೆಸಿಕ್‌ 4ನೇ ಸ್ಥಾನ ತಲುಪಿ ನಿರಾಸೆ ಅನುಭವಿಸಿದ್ದರು. ಮೇ ತಿಂಗಳಲ್ಲಿ 71.40 ಮೀ. ಸಾಧನೆಯೊಂದಿಗೆ ವಿಶ್ವದಾಖಲೆ ನಿರ್ಮಿಸಿದರೂ ಟೋಕ್ಯೋ ದಲ್ಲಿ ಈ ಫಾರ್ಮ್ ಕಂಡುಕೊಳ್ಳಲು ವಿಫ‌ಲರಾದರು.

Advertisement

Udayavani is now on Telegram. Click here to join our channel and stay updated with the latest news.

Next