Advertisement

ಟೋಕಿಯೊ ಒಲಿಂಪಿಕ್ಸ್‌ : ಸ್ಪರ್ಧೆಗಳಿಗಾಗಿ ಕಾತರಿಸುತ್ತಿವೆ ಸುಂದರ ಒಲಿಂಪಿಕ್ಸ್‌ ಮೈದಾನಗಳು

01:29 AM Jul 21, 2021 | Team Udayavani |

ಜಪಾನ್‌ನ ಟೋಕಿಯೊ ಒಲಿಂಪಿಕ್ಸ್‌ ಆತಿಥ್ಯಕ್ಕೆ ಪೂರ್ಣ ಸಜ್ಜಾಗಿ ನಿಂತಿದೆ. ಕೊರೊನಾ ಒಡ್ಡಿರುವ ತೀವ್ರ ಸವಾಲನ್ನು ಸವಾಲಿನಂತೆಯೇ ಸ್ವೀಕರಿಸಿರುವ ಸಂಘಟಕರು, ಒಲಿಂಪಿಕ್ಸ್‌ ಆಯೋಜಿಸಲು ಸರ್ವರೀತಿಯಲ್ಲಿ ಹೋರಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಟೋಕಿಯೊದಲ್ಲಿ ಒಲಿಂಪಿಕ್ಸ್‌ ನಡೆಯಲಿರುವ ಅದ್ಭುತ, ಸುಂದರ ಮೈದಾನಗಳ ಚಿತ್ರಕಥೆ ಇಲ್ಲಿದೆ.

Advertisement

ನಿಪ್ಪಾನ್‌ ಬುಡೊಕಾನ್‌
1964ರಲ್ಲಿ ಟೋಕಿಯೊದಲ್ಲಿ ಒಲಿಂಪಿಕ್ಸ್‌ ನಡೆದಿತ್ತು. ಆಗ ಜ್ಯೂಡೊ ಕ್ರೀಡೆಯಾಗಿ ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿತ್ತು. ಚಿಯೊಡದಲ್ಲಿರುವ ನಿಪ್ಪಾನ್‌ ಬುಡೊಕಾನ್‌ ಮೈದಾನದಲ್ಲೇ ಆ ಬಾರಿಯೂ ಜ್ಯೂಡೊ ನಡೆದಿತ್ತು. ಈ ಬಾರಿ ಇದೇ ಒಳಾಂಗಣದಲ್ಲಿ ಜ್ಯೂಡೊ ಹಾಗೂ ಕರಾಟೆಯನ್ನು ನಡೆಸಲಾಗುತ್ತದೆ.

ಟೋಕಿಯೊ ಅಕ್ವಾಟಿಕ್‌ ಸೆಂಟರ್‌
ಟೋಕಿಯೊದ ತತ್ಸುಮಿ ನೊ ಮೊರಿ ಸೀಸೈಡ್‌ ಪಾರ್ಕ್‌ನಲ್ಲಿ ಟೋಕಿಯೊ ಅಕ್ವಾಟಿಕ್‌ ಸೆಂಟರ್‌ ಇದೆ. ಅತ್ಯಂತ ಆಕರ್ಷಕವಾಗಿದೆ. ಇಲ್ಲಿ ಕಲಾತ್ಮಕ ಈಜು, ಡೈವಿಂಗ್‌, ಈಜು ಸ್ಪರ್ಧೆಗಳು ನಡೆಯಲಿವೆ.

ಸೈತಾಮ ಸೂಪರ್‌ ಅರೆನಾ
ಜಪಾನ್‌ನ ಸೈತಾಮದಲ್ಲಿರುವ ಚೂ-ಕೊನಲ್ಲಿ ಸೈತಾಮ ಸೂಪರ್‌ ಅರೆನಾ ಇದೆ. ಇಲ್ಲಿ ಪ್ರಮುಖ ಬಾಸ್ಕೆಟ್‌ಬಾಲ್‌ ಕ್ರೀಡೆ ನಡೆಯುತ್ತದೆ. ಜಪಾನ್‌ನ ಅತ್ಯಂತ ದೊಡ್ಡ ಒಳಾಂಗಣ ಕ್ರೀಡಾಂಗಣಗಳಲ್ಲಿ ಇದೂ ಒಂದು.

ಮಕುಹರಿ ಮೆಸ್ಸೆ ಹಾಲ್‌
ಚಿಬಾ ನಗರದಲ್ಲಿರುವ ಮಕುಹರಿ ಮೆಸ್ಸೆ ಹಾಲ್‌ ಇನ್ನೊಂದು ಆಕರ್ಷಣೆ. ಇಲ್ಲಿ ಕುಸ್ತಿ, ಟೇಕ್ವಾಂಡೊ, ಕತ್ತಿವರಸೆ, ಕುರ್ಚಿ ಕತ್ತಿವರಸೆ ಇನ್ನಿತರ ಕ್ರೀಡೆಗಳು ನಡೆಯುತ್ತವೆ.

Advertisement

ನ್ಯಾಶನಲ್‌ ಸ್ಟೇಡಿಯಂ
ಟೋಕಿಯೊದ ಶಿಂಜುಕುದ ಕಸುಮಿಗಾವ್ಕದಲ್ಲಿ ನ್ಯಾಶನಲ್‌ ಸ್ಟೇಡಿಯಂ ಇದೆ. ಇದೇ ಮೈದಾನವನ್ನು ಹಿಂದೆ ನ್ಯೂ ನ್ಯಾಶನಲ್‌ ಸ್ಟೇಡಿಯಂ ಎನ್ನಲಾಗುತ್ತಿತ್ತು. ಇದು ಹಲವು ರೀತಿಯ ಕ್ರೀಡೆಗಳಿಗೆ ಬಳಕೆಯಾಗುವ ಸಾಮರ್ಥ್ಯ ಹೊಂದಿದೆ. ಮುಖ್ಯವಾಗಿ ಫ‌ುಟ್‌ಬಾಲ್‌ ಪಂದ್ಯಗಳಿಗೆ ಬಳಸಲಾಗುತ್ತದೆ. ಇದೇ ಮೈದಾನದಲ್ಲಿ ಒಲಿಂಪಿಕ್ಸ್‌ ಉದ್ಘಾಟನ ಮತ್ತು ಮುಕ್ತಾಯ ಸಮಾರಂಭಗಳು ನಡೆಯಲಿವೆ.

ಯೊಕೊಹಾಮ ಬೇಸ್‌ಬಾಲ್‌ ಸ್ಟೇಡಿಯಂ
ಟೋಕಿಯೊದ ಯೊಕೊಹಾಮ್‌ ಬೇಸ್‌ಬಾಲ್‌ ಸ್ಟೇಡಿಯಂ ಈ ಬಾರಿಯ ಒಲಿಂಪಿಕ್ಸ್‌ನ ಬೃಹತ್‌ ಮೈದಾನಗಳ­ಲ್ಲೊಂದು. ಇಲ್ಲಿ ಬೇಸ್‌ಬಾಲ್‌ ಪಂದ್ಯಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next