Advertisement

ಭಾರತದ ಮೊದಲ ತಂಡ ಟೋಕಿಯೊದತ್ತ ; 88 ಸದಸ್ಯರಿಗೆ ಬೀಳ್ಕೊಡುಗೆ

11:21 PM Jul 17, 2021 | Team Udayavani |

ಹೊಸದಿಲ್ಲಿ: ದೇಶದ ಕ್ರೀಡಾಭಿಮಾನಿಗಳ ನಿರೀಕ್ಷೆ, ಕನಸನ್ನು ಹೊತ್ತ ಭಾರತದ ಒಲಿಂಪಿಕ್ಸ್‌ ಸದ ಸ್ಯರ ಮೊದಲ ತಂಡ ಶನಿವಾರ ರಾತ್ರಿ ಟೋಕಿಯೊಗೆ ಪ್ರಯಾಣ ಬೆಳೆಸಿತು. ಇಲ್ಲಿನ “ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ದಲ್ಲಿ ಇವರಿಗೆ ಯಶಸ್ಸು ಕೋರಿ ಬೀಳ್ಕೊಡಲಾಯಿತು.

Advertisement

ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌, ಸಹಾಯಕ ಸಚಿವ ನಿಶಿತ್‌ ಪ್ರಾಮಾಣಿಕ್‌, ಐಒಎ ಅಧ್ಯಕ್ಷ ನರೀಂದರ್‌ ಬಾತ್ರಾ, ಕಾರ್ಯದರ್ಶಿ ರಾಜೀವ್‌ ಮೆಹ್ತಾ, ನಿರ್ದೇಶಕ ಸಂದೀಪ್‌ ಪ್ರಧಾನ್‌ ಮೊದಲಾ ದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮೊದಲ ತಂಡದಲ್ಲಿ ಒಟ್ಟು 88 ಸದಸ್ಯರಿದ್ದು, ಇವರಲ್ಲಿ 54 ಮಂದಿ ಆ್ಯತ್ಲೀಟ್‌ಗಳಾಗಿದ್ದಾರೆ.

ಒಟ್ಟು 8 ಕ್ರೀಡಾ ತಂಡಗಳ ಆಟಗಾರರು ವಿಮಾನ ಏರಿದರು. ಆರ್ಚರಿ, ಹಾಕಿ, ಬ್ಯಾಡ್ಮಿಂಟನ್‌, ಟೇಬಲ್‌ ಟೆನಿಸ್‌, ಆರ್ಚರಿ, ಜ್ಯೂಡೋ, ಜಿಮ್ನಾಸ್ಟಿಕ್‌ ಮತ್ತು ವೇಟ್‌ಲಿಫ್ಟಿಂಗ್‌ ಸದಸ್ಯರು ಈ ತಂಡದಲ್ಲಿದ್ದರು. ಇದರಲ್ಲಿ ಅತೀ ದೊಡ್ಡ ಪಡೆ ಹಾಕಿಯದ್ದಾಗಿತ್ತು.

ಭಾರತದ ಒಟ್ಟು 127 ಕ್ರೀಡಾಪಟುಗಳು ಟೋಕಿಯೊ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ. ಇದೊಂದು ದಾಖಲೆ. ರಿಯೋ ಒಲಿಂಪಿಕ್ಸ್‌ನಲ್ಲಿ 117 ಆ್ಯತ್ಲೀಟ್ಸ್‌ ಭಾರತವನ್ನು ಪ್ರತಿನಿಧಿಸಿದ್ದರು.

ಸೋಮವಾರದಿಂದಲೇ ಶೂಟಿಂಗ್‌ ಅಭ್ಯಾಸ
ಯಾವುದೇ ರೀತಿಯ ಕ್ವಾರಂಟೈನ್‌ ಅಥವಾ ಐಸೊಲೇಶನ್‌ ಅಗತ್ಯ ಕಂಡುಬರದ ಹಿನ್ನೆಲೆಯಲ್ಲಿ ಭಾರತದ ಶೂಟರ್ ಸೋಮವಾರದಿಂದಲೇ ಒಲಿಂಪಿಕ್ಸ್‌ ಅಭ್ಯಾಸ ಆರಂಭಿಸಲಿದ್ದಾರೆ ಎಂದು ಎನ್‌ಆರ್‌ಎಐ ಕಾರ್ಯದರ್ಶಿ ರಾಜೀವ್‌ ಭಾಟಿಯಾ ತಿಳಿಸಿದ್ದಾರೆ. ಶನಿವಾರ ಟೋಕಿಯೊ ತಲುಪಿದ ಶೂಟರ್ ಕ್ರೀಡಾಗ್ರಾಮದಲ್ಲಿ ಈಗಾಗಲೇ ವಾಸ್ತವ್ಯ ಹೂಡಿದ್ದಾರೆ.
ಗ್ರೇಟರ್‌ ಟೋಕಿಯೊದಲ್ಲಿರುವ ಸೈತಾಮ ಪ್ರಾಂತ್ಯದ “ಅಸಾಕ ಶೂಟಿಂಗ್‌ ರೇಂಜ್‌’ನಲ್ಲಿ ಸ್ಪರ್ಧೆ ನಡೆಯಲಿದೆ. 1964ರ ಟೋಕಿಯೊ ಒಲಿಂಪಿಕ್ಸ್‌ ವೇಳೆಯೂ ಇಲ್ಲೇ ಶೂಟಿಂಗ್‌ ಸ್ಪರ್ಧೆ ನಡೆದಿತ್ತು.

Advertisement

ಟೋಕಿಯೊದಲ್ಲಿ ಭಾರತದ 15 ಶೂಟರ್ ಸ್ಪರ್ಧೆಗೆ ಇಳಿಯಲಿದ್ದಾರೆ. ಒಲಿಂಪಿಕ್ಸ್‌ ಇತಿಹಾಸದಲ್ಲಿ ಇದು ಭಾರತೀಯ ದಾಖಲೆಯಾಗಿದೆ. ಜು. 24ರಿಂದ ಶೂಟಿಂಗ್‌ ಸ್ಪರ್ಧೆ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next