Advertisement

ಭಾರತದ ವನಿತಾ ಆರ್ಚರಿ ತಂಡಕ್ಕಿಲ್ಲ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ

10:07 PM Jun 20, 2021 | Team Udayavani |

ಪ್ಯಾರಿಸ್‌ : ವಿಶ್ವಕಪ್‌ ಚಾಂಪಿಯನ್‌ ಖ್ಯಾತಿಯ ಭಾರತದ ವನಿತಾ ರಿಕರ್ವ್‌ ಆರ್ಚರಿ ತಂಡ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸುವಲ್ಲಿ ವಿಫ‌ಲವಾಗಿದೆ.

Advertisement

ಇಲ್ಲಿ ನಡೆದ ಅಂತಿಮ ಕ್ವಾಲಿಫೈಯರ್‌ ಮುಖಾಮುಖೀಯಲ್ಲಿ ಭಾರತ ತನಗಿಂತ ಕೆಳ ಕ್ರಮಾಂಕದ ಕೊಲಂಬಿಯಾಕ್ಕೆ ಸೋತು ಟೋಕಿಯೊಗೆ ತೆರಳುವ ಅವಕಾಶವನ್ನು ಕಳೆದುಕೊಂಡಿತು.

ದೀಪಿಕಾ ಕುಮಾರಿ, ಅಂಕಿತಾ ಭಕತ್‌ ಹಾಗೂ ಕೋಮಲಿಕಾ ಬಾರಿ ಅವರನ್ನೊಳಗೊಂಡ ತಂಡ ಕೊಲಂಬಿಯಾಕ್ಕೆ 0-6 ಅಂತರದಿಂದ ಶರಣಾಯಿತು. ಇದೇ ತಂಡ ಎರಡು ತಿಂಗಳ ಹಿಂದಷ್ಟೇ ಗ್ವಾಟೆಮಾಲಾದಲ್ಲಿ ನಡೆದ ವರ್ಲ್ಡ್ ಕಪ್‌ ಸ್ಟೇಜ್‌ ಒನ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿತ್ತು.

ವನಿತಾ ವಿಭಾಗದಿಂದ ದೀಪಿಕಾ ಕುಮಾರಿ ಮಾತ್ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ದೀಪಿಕಾಗೆ ಇದು ಸತತ 3ನೇ ಒಲಿಂಪಿಕ್ಸ್‌ ಆಗಿದೆ. ಇನ್ನೊಂದೆಡೆ ಭಾರತದ ಪುರುಷರ ತಂಡ 2019ರಲ್ಲೇ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next