Advertisement

ಆತಂಕ, ಅನುಮಾನದ ನಡುವೆ ಟೋಕಿಯೊ ಒಲಿಂಪಿಕ್ಸ್‌  !

01:04 AM Mar 26, 2021 | Team Udayavani |

ಜಪಾನ್‌ನಲ್ಲಿ ಕಳೆದ ವರ್ಷವೇ ನಡೆಯಬೇಕಿದ್ದ ಒಲಿಂಪಿಕ್ಸ್‌ ಕೋವಿಡ್‌ ಕಾರಣದಿಂದಾಗಿ ಮುಂದೂಡಲ್ಪಟ್ಟು ಇದೇ ಜುಲೈ 23ರಂದು ಆರಂಭವಾಗಲಿದೆ. ಇಂಥ ಬಿಕ್ಕಟ್ಟಿನ ಸಮಯದಲ್ಲಿ ಒಲಿಂಪಿಕ್ಸ್‌ ನಡೆಸುವುದು ಸರಿಯೇ ಎನ್ನುವ ಟೀಕೆಯಿದ್ದರೂ ಜಪಾನ್‌ ಮಾತ್ರ ಈ ವಿಚಾರವನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿದೆ. ಹಾಗಿದ್ದರೆ ಈ ಬಾರಿಯ ಒಲಿಂಪಿಕ್ಸ್‌ ಹೇಗಿರಲಿದೆ, ಜಪಾನ್‌ ತೆಗೆದುಕೊಳ್ಳುತ್ತಿರುವ ಕ್ರಮಗಳೇನು?

Advertisement

ಜಪಾನಿಯರಿಗೂ ಮನಸ್ಸಿಲ್ಲ  :

ಕೋವಿಡ್‌-19ನಿಂದಾಗಿ ಖುದ್ದು ಜಪಾನಿಯರೂ ಒಲಿಂಪಿಕ್ಸ್‌ ಆಯೋಜನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇಂಥ ಸಂಕಷ್ಟದ ಕಾಲದಲ್ಲಿ ಜನರ ತೆರಿಗೆ ಹಣವನ್ನು ದುಂದುವೆಚ್ಚ ಮಾಡುವುದು ಬೇಡ ಎನ್ನುತ್ತಿದ್ದಾರೆ. ಕಳೆದ ಎಂಟು ತಿಂಗಳುಗಳಿಂದ ನಡೆದ ಪ್ರಮುಖ ಆರು ಸಮೀಕ್ಷೆಗಳಲ್ಲಿ ಸುಮಾರು 70 ಪ್ರತಿಶತ ಜಪಾನಿಯರು ಒಲಿಂಪಿಕ್ಸ್‌ ಆಯೋಜನೆಯ ಅಗತ್ಯವನ್ನು ಪ್ರಶ್ನಿಸುತ್ತಿದ್ದಾರೆ.

ಹೆಚ್ಚಾಯಿತು ಬಜೆಟ್‌ :

ಕೋವಿಡ್‌ ಕಾರಣದಿಂದಾಗಿ ಸುರಕ್ಷತ ಕ್ರಮಗಳ ಹೆಚ್ಚಳದ ಅನಿವಾರ್ಯವೂ ಜಪಾನ್‌ಗೆ ಎದುರಾಯಿತು. ಇದರ ಪರಿಣಾಮ 12.6 ಶತಕೋಟಿ ಡಾಲರ್‌ಗಳಷ್ಟಿದ್ದ ಒಲಿಂಪಿಕ್ಸ್‌ ಅಂದಾಜು ವೆಚ್ಚ ಈಗ 15.4 ಪ್ರತಿಶತಕ್ಕೆ ಏರಿದೆ. ಅಂದರೆ 22 ಪ್ರತಿಶತದಷ್ಟು ಏರಿಕೆಯಾಗಿದೆ.

Advertisement

 ಪ್ರಕರಣಗಳ ಮುಚ್ಚಿಡುತ್ತಿದೆಯೇ? :

ಸುಮಾರು 12.63 ಕೋಟಿ ಜನಸಂಖ್ಯೆಯಿರುವ ಜಪಾನ್‌ನಲ್ಲಿ, ಇದುವರೆಗೂ ಕೋವಿಡ್‌ ಪ್ರಕರಣಗಳ ಒಟ್ಟು ಸಂಖ್ಯೆ ಕೇವಲ 4.59 ಲಕ್ಷದಷ್ಟಿದ್ದು, ಇದರಲ್ಲಿ ಈಗಾಗಲೇ 4.36 ಲಕ್ಷ ಜನರು ಚೇತರಿಸಿಕೊಂಡಿದ್ದಾರೆ. ಆದರೆ ಒಲಿಂಪಿಕ್ಸ್‌ ಆಯೋಜನೆಯನ್ನು ಪ್ರತಿಷ್ಠೆಯ ಪ್ರಶ್ನೆಯಾಗಿಸಿಕೊಂಡು ಜಪಾನ್‌ ಸರಕಾರ, ಕೋವಿಡ್‌ನ‌ ನಿಜ ಅಂಕಿ ಸಂಖ್ಯೆಗಳನ್ನು ಮುಚ್ಚಿಡುತ್ತಿದೆ ಎನ್ನುವ ಆರೋಪ ಹಲವು ತಿಂಗಳುಗಳಿಂದಲೂ ಇದೆ. ಅದು ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆಗಳನ್ನು ನಡೆಸುತ್ತಲೇ ಇಲ್ಲ ಎನ್ನುವ ಟೀಕೆಯೂ ವ್ಯಕ್ತವಾಗುತ್ತಿದೆ.

ವಿದೇಶಿ ಪ್ರೇಕ್ಷಕರಿಗಿಲ್ಲ ಅನುಮತಿ :

ಸುಮಾರು 15,400ಕ್ಕೂ  ಒಲಿಂಪಿಕ್ಸ್‌ ಮತ್ತು ಪ್ಯಾರಾ ಒಲಿಂಪಿಕ್ಸ್‌ ಅಥ್ಲೀಟ್‌ಗಳನ್ನು ಹಾಗೂ ಅವರ ಸಂಗಡ ಬರುವ ಸಾವಿರಾರು ಅಧಿಕಾರಿಗಳು, ಕೋಚ್‌ಗಳು, ವಿಐಪಿಗಳನ್ನು ಒಳಬಿಟ್ಟುಕೊಳ್ಳುವುದರಿಂದ ಸಾಂಕ್ರಾಮಿಕ ಹೆಚ್ಚುವ ಅಪಾಯವೂ ಇದೆ. ಇಷ್ಟು ಜನರ ಸಂಭಾಳಿಸಿ, ಸುರಕ್ಷತೆ ಕಾಯ್ದುಕೊಳ್ಳಲಾಗುತ್ತದೆ ಎನ್ನುವುದಕ್ಕೆ ಖಾತ್ರಿಯೇನಿದೆ ಎಂದು ಜಪಾನ್‌ನ ಮಾಧ್ಯಮಗಳೂ ಪ್ರಶ್ನಿಸುತ್ತಿವೆ. ಒಲಿಂಪಿಕ್ಸ್‌ ನೋಡಲು ವಿದೇಶಗಳಿಂದ ಲಕ್ಷಾಂತರ ಜನ ಬಂದರೆ ಗತಿಯೇನು ಎಂಬ ಆತಂಕವಿತ್ತು. ಆದರೆ ಸರಕಾರ ಈ ವಿದೇಶಿ ಪ್ರೇಕ್ಷಕರಿಗೆ ಜಪಾನ್‌ ಪ್ರವೇಶವನ್ನು ನಿರ್ಬಂಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next