Advertisement
26 ವರ್ಷದ ವಿನೇಶ್ ಫೈನಲ್‌ನಲ್ಲಿ ಕೆನಡಾದ ಡಯಾನಾ ಮೇರಿ ಹೆಲೆನ್ ವೀಕರ್ ಅವರನ್ನು 4-0 ಅಂತರದಿಂದ ಪರಾಭವಗೊಳಿಸಿದರು. ಅವರು ಎಲ್ಲ ಅಂಕಗಳನ್ನೂ ಮೊದಲ ಅವಧಿಯಲ್ಲೇ ಸಂಪಾದಿಸಿದರು. ಆಗಲೇ ವಿನೇಶ್‌ಗೆ ಸ್ವರ್ಣ ಪದಕ ಖಾತ್ರಿಯಾಗಿತ್ತು.
Related Articles
Advertisement
ಇದನ್ನೂ ಓದಿ :ಆಸ್ಟ್ರೇಲಿಯವನ್ನು 7 ವಿಕೆಟ್‌ಗಳಿಂದ ಮಣಿಸಿ ಟಿ20 ಸರಣಿ ಗೆದ್ದ ನ್ಯೂಜಿಲ್ಯಾಂಡ್
ಹೊಸದಿಲ್ಲಿ: ಪಿ.ವಿ. ಸಿಂಧು ಕೂಡ ಚಾಂಪಿಯನ್ ಆಗಿ ಮೂಡಿಬಂದದ್ದಿದ್ದರೆ ಸೋಮ ವಾರದ ಅಂತಾರಾಷ್ಟ್ರೀಯ ಮಹಿಳಾ ದಿನದ ಸಂಭ್ರಮ ಇನ್ನಷ್ಟು ಹೆಚ್ಚುತ್ತಿತ್ತು. ಆದರೆ ಸ್ವಿಸ್ ಓಪನ್ ಫೈನಲ್‌ನಲ್ಲಿ ಅವರು ಸ್ಪೇನಿನ ಬದ್ಧ ಎದುರಾಳಿ ಕ್ಯಾರೊಲಿನಾ ಮರಿನ್ ವಿರುದ್ಧ ನಿರಾಶಾದಾಯಕ ಪ್ರದರ್ಶನ ನೀಡಿ ರನ್ನರ್ ಅಪ್‌ಗೆ ತೃಪ್ತಿಪಟ್ಟರು. ಮರಿನ್ ಬಹಳ ಸುಲಭದಲ್ಲಿ ಭಾರತೀಯಳ ಆಟ ಮುಗಿಸಿದರು. ಗೆಲುವಿನ ಅಂತರ 21-12, 21-5.
2019ರ ವಿಶ್ವಕಪ್ ಗೆಲುವಿನ ಬಳಿಕ ಸಿಂಧು ಕಾಣುತ್ತಿರುವ ಮೊದಲ ಫೈನಲ್ ಇದಾಗಿತ್ತು. ಮರಿನ್ ವಿರುದ್ಧ ರಿಯೋ ಒಲಿಂಪಿಕ್ಸ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವ ಉತ್ತಮ ಅವಕಾಶವೂ ಇತ್ತು. ಆದರೆ ಸಿಂಧು ತೀರಾ ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದರು.
ಬಲಾಡ್ಯ ಆಟಗಾರ್ತಿ ಮರಿನ್ ವಿರುದ್ಧ ಸಿಂಧು ಆಡಿದ 14ನೇ ಪಂದ್ಯ ಇದಾಗಿತ್ತು. ಮರಿನ್ ತಮ್ಮ ಗೆಲುವಿನ ದಾಖಲೆಯನ್ನು 9ಕ್ಕೆ ವಿಸ್ತರಿಸಿದರು. ಇದು ಮರಿನ್ ಗೆದ್ದ ಮೊದಲ ಸ್ವಿಸ್ ಓಪನ್ ಪ್ರಶಸ್ತಿ.