Advertisement

ಸ್ಥಳೀಯರಿಗೆ ಮಾತ್ರ ತೆರೆದ ಒಲಿಂಪಿಕ್ಸ್‌ ಬಾಗಿಲು : ಗರಿಷ್ಠ 10 ಸಾವಿರ ವೀಕ್ಷಕರಿಗೆ ಅವಕಾಶ

11:13 PM Jun 21, 2021 | Team Udayavani |

ಟೋಕಿಯೊ : ಕೊನೆಗೂ ಸ್ಥಳೀಯರಿಗೆ ಟೋಕಿಯೊ ಒಲಿಂಪಿಕ್ಸ್‌ ಸ್ಟೇಡಿಯಂ ಬಾಗಿಲು ತೆರೆಯಲಿದೆ. ಪ್ರತೀ ಸ್ಟೇಡಿಯಂನಲ್ಲೂ ಗರಿಷ್ಠ 10 ಸಾವಿರ ಮಂದಿ ಮೀರದಂತೆ, ಸ್ಟೇಡಿಯಂ ಸಾಮರ್ಥ್ಯದ ಅರ್ಧದಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಸೋಮವಾರದ “ಫೈವ್‌ ಪಾರ್ಟಿ ಸಭೆ’ಯಲ್ಲಿ ನಿರ್ಧರಿಸಲಾಯಿತು.

Advertisement

ಸ್ಥಳೀಯ ಸಂಘಟಕರು, ಅಂತಾ ರಾಷ್ಟ್ರೀಯ ಒಲಿಂಪಿಕ್‌ ಕಮಿಟಿ, ಅಂತಾ ರಾಷ್ಟ್ರೀಯ ಪ್ಯಾರಾಲಿಂಪಿಕ್‌ ಕಮಿಟಿ, ಜಪಾನ್‌ ಸರಕಾರ ಮತ್ತು ಟೋಕಿಯೊ ಮೆಟ್ರೊಪಾಲಿಟನ್‌ ಸೇರಿ ನಡೆಸಿದ ಸಭೆ ಇದಾಗಿತ್ತು.

ಈ ಪಂದ್ಯಾವಳಿಯನ್ನು ವೀಕ್ಷಕರ ಗೈರಲ್ಲಿ ನಡೆಸುವುದು ಅತ್ಯಂತ ಸುರಕ್ಷಿತ ಎಂದು ಜಪಾನಿನ ಅಗ್ರಮಾನ್ಯ ವೈದ್ಯಕೀಯ ಸಲಹೆಗಾರ ಡಾ| ಶಿಗೆರು ಒಮು ಕಳೆದ ವಾರವಷ್ಟೇ ಸಲಹೆ ನೀಡಿದ್ದರು.

ವೀಕ್ಷಕರಿಗೆ ಕಠಿನ ನಿಬಂಧನೆ
ಈಗಾಗಲೇ ವಿದೇಶಿ ಪ್ರೇಕ್ಷಕರಿಗೆ ಒಲಿಂಪಿಕ್ಸ್‌ ನಿಷೇಧ ಹೇರಲಾಗಿದೆ. ಸ್ಥಳೀಯ ವೀಕ್ಷಕರಿಗೆ ಕಠಿನ ನಿಬಂಧನೆ ಗಳನ್ನು ಹೇರಲಾಗುವುದು. ಇವರು ಯಾವುದೇ ಕಾರಣಕ್ಕೂ ಕ್ರೀಡಾ ಸಾಧಕ ರನ್ನು ಬೆಂಬಲಿಸಿ ಉದ್ಗಾರ ತೆಗೆಯು ವಂತಿಲ್ಲ, ಚಪ್ಪಾಳೆ ತಟ್ಟುವಂತಿಲ್ಲ, ಶಿಳ್ಳೆ ಹಾಕುವಂತಿಲ್ಲ, ಸ್ಟೇಡಿಯಂಗೆ ಮನೆ ಯಿಂದಲೇ ಆಗಮಿಸಬೇಕು ಹಾಗೂ ಕೂಟ ಮುಗಿದ ಬಳಿಕ ನೇರವಾಗಿ ಮನೆಗೇ ತೆರಳಬೇಕೆನ್ನುವುದು ಇದರಲ್ಲಿ ಪ್ರಮುಖವಾದುದು. ಇನ್ನೂ ಕೆಲವು ನಿಯಮಗಳನ್ನು ಸೇರಿಸಿ ಇದನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು.

ಇದನ್ನೂ ಓದಿ :ಮಿಜೋರಂನಲ್ಲಿ ಹೊಸ ಇರುವೆ ಪ್ರಭೇದ ಪತ್ತೆ : ಎರಡು ಪ್ರಭೇದ ಪತ್ತೆ ಹಚ್ಚಿದ ಬೆಂಗಳೂರು ತಜ್ಞರು

Advertisement

ಜಪಾನ್‌ ಪ್ರಧಾನಿ ಸ್ವಾಗತ
ಸ್ಥಳೀಯರಿಗೆ ಒಲಿಂಪಿಕ್ಸ್‌ ಪ್ರವೇಶ ನೀಡಿದ್ದನ್ನು ಜಪಾನ್‌ ಪ್ರಧಾನಿ ಯೊಶಿಹಿಡೆ ಸುಗ ಸ್ವಾಗತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next