Advertisement
ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಭಾರತ ಗರಿಷ್ಠ 54 ಕ್ರೀಡಾಪಟುಗಳನ್ನು ಕಳುಹಿಸಿರುವುದರಿಂದ ಪದಕಗಳ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದೀ ತೆಂಬುದೊಂದು ಲೆಕ್ಕಾಚಾರ. ಈ ಬಾರಿ 15 ಪದಕಗಳು ಭಾರತಕ್ಕೆ ಒಲಿಯಲಿವೆ, ಇದರಲ್ಲಿ 5 ಚಿನ್ನ ಎಂಬುದಾಗಿ ಚೆಫ್ ಡಿ ಮಿಷನ್ ಗುರುಶರಣ್ ಸಿಂಗ್ ಈಗಾಗಲೇ ಭವಿಷ್ಯ ನುಡಿದಿದ್ದಾರೆ. ಇದು ಅಸಾಧ್ಯವೇನೂ ಅಲ್ಲ.
Related Articles
Advertisement
ಪ್ಯಾರಾಲಿಂಪಿಕ್ಸ್ ಕೂಟದಲ್ಲಿ ಇದೇ ಮೊದಲ ಸಲ ಬ್ಯಾಡ್ಮಿಂಟನ್ ಸ್ಪರ್ಧೆಯನ್ನು ಅಳವಡಿಸಿದ್ದು, ಭಾರತಕ್ಕೆ ಲಾಭವಾಗಿ ಪರಿಣಮಿಸುವ ಸಾಧ್ಯತೆ ಇದೆ. ವಿಶ್ವದ ನಂ.1 ಆಟಗಾರ ಪ್ರಮೋದ್ ಭಗತ್, ನಂ.2 ಕೃಷ್ಣ ನಗರ್, ತರುಣ್ ಧಿಲ್ಲಾನ್, ಪಾರುಲ್ ಪರ್ಮಾರ್, ಪಲಕ್ ಕೊಹ್ಲಿ ಪದಕ ಗೆದ್ದು ತರಬಲ್ಲರೆಂಬ ನಿರೀಕ್ಷೆ ಬಲವಾಗಿದೆ.
ಆರ್ಚರಿ, ಶೂಟಿಂಗ್:
ಮೊನ್ನೆಯ ಒಲಿಂಪಿಕ್ಸ್‌ನಲ್ಲಿ ಶೂಟರ್ ಮತ್ತು ಆರ್ಚರ್ ಕೈಕೊಟ್ಟಿದ್ದರು. ಆದರೆ ಪ್ಯಾರಾಲಿಂಪಿಕ್ಸ್ ನಲ್ಲಿ ಹೀಗಾಗಲಿಕ್ಕಿಲ್ಲ ಎಂಬುದೊಂದು ನಂಬಿಕೆ.
ಆರ್ಚರಿಯಲ್ಲಿ ರಾಕೇಶ್ ಕುಮಾರ್, ಶ್ಯಾಮ ಸುಂದರ್ (ಕಂಪೌಂಡ್), ವಿವೇಕ್ ಚಿಕಾರ, ಹರ್ವಿಂದರ್ ಸಿಂಗ್ (ರಿಕರ್ವ್), ಜ್ಯೋತಿ ಬಲಿಯಾನ್ (ಕಂಪೌಂಡ್, ಮಿಕ್ಸೆಡ್) ನಿಖರ ಗುರಿ ಸಾಧಿಸಿದರೆ ಭಾರತದ ಪದಕ ಸಂಖ್ಯೆಯಲ್ಲಿ ಖಂಡಿತವಾಗಿಯೂ ಹೆಚ್ಚಳವಾಗಲಿದೆ.
ವಿನೋದ್ ಕುಮಾರ್ (ಡಿಸ್ಕಸ್), ಟೇಕ್ ಚಂದ್ (ಜಾವೆಲಿನ್), ಜೈದೀಪ್ ಮತ್ತು ಸಕಿನಾ ಖಾತುನ್ (ಪವರ್‌ಲಿಫ್ಟಿಂಗ್) ಪೋಡಿಯಂ ಏರುವ ಕನಸು ಕಾಣುತ್ತಿದ್ದಾರೆ. ಟಿಟಿ, ಕನೋಯಿಂಗ್, ಸ್ವಿಮ್ಮಿಂಗ್, ಪವರ್‌ಲಿಫ್ಟಿಂಗ್, ಟೇಕ್ವಾಂಡೊ ಸ್ಪರ್ಧೆಗಳಲ್ಲೂ ಭಾರತ ಪಾಲ್ಗೊಳ್ಳಲಿದೆ.
17ನೇ ಕ್ರಮಾಂಕದಲ್ಲಿ ಆಗಮಿಸಲಿದೆ ಭಾರತ : ಮಂಗಳವಾರದ ಉದ್ಘಾಟನಾ ಕಾರ್ಯಕ್ರಮದ ಪಥಸಂಚಲನದಲ್ಲಿ ಭಾರತ 17ನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಲಿದೆ. ಕೇವಲ 5 ಆ್ಯತ್ಲೀಟ್ಸ್ ಮತ್ತು 6 ಮಂದಿ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಮರಿಯಪ್ಪನ್ ತಂಗವೇಲು ತ್ರಿವರ್ಣ ಧ್ವಜದೊಂದಿಗೆ ಸಾಗಲಿದ್ದಾರೆ.
ಇದು 16ನೇ ಪ್ಯಾರಾಲಿಂಪಿಕ್ಸ್ ಆಗಿದ್ದು, 163 ದೇಶಗಳ 4,500ರಷ್ಟು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. 22 ಕ್ರೀಡೆಗಳ ಒಟ್ಟು 540 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.