Advertisement
ನಗರ ಸ್ಮಾರ್ಟ್‌ಸಿಟಿಯಾಗಿ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆಯೇ ವಾಹನ ದಟ್ಟಣೆ ಕೂಡ ಹೆಚ್ಚುತ್ತಿದೆ. ನಗರದಲ್ಲಿ ಅದಕ್ಕೆ ಪೂರಕವಾಗಿ ಪಾರ್ಕಿಂಗ್ ಸೌಕರ್ಯ ಬೆಳೆದಿಲ್ಲ. ಮಹಾನಗರ ಪಾಲಿಕೆಯಿಂದ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆಗಳು ಆಗಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ. ನಗರದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆಗಳಿಲ್ಲದೆ ವಾಹನಗಳನ್ನು ರಸ್ತೆಯ ಬದಿಯಲ್ಲೇ ಪಾರ್ಕಿಂಗ್ ಮಾಡುವ ಅನಿವಾರ್ಯತೆ ಎದುರಾಗಿದೆ. ಮೊದಲೇ ಸಂಚಾರ ದಟ್ಟಣೆ ಹೆಚ್ಚುತ್ತಿರುವ ರಸ್ತೆಗಳಲ್ಲಿ ವಾಹನಗಳ ಅಡ್ಡಾದಿಡ್ಡಿ ನಿಲುಗಡೆ ಸಂಚಾರ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದೆ. ಸೂಕ್ತ ಪಾರ್ಕಿಂಗ್ ವ್ಯವಸ್ಥೆಗಳಿಲ್ಲದೆ ವಾಹನಗಳನ್ನು ಎಲ್ಲಿ ನಿಲ್ಲಿಸುವುದು ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಎದ್ದಿದೆ.
ನಗರದಲ್ಲಿನ ಯಾವುದಾದರೂ ಪ್ರದೇಶದಲ್ಲಿ ಸ್ಥಳಾವಕಾಶ ಇದೆ ಎಂದು ವಾಹನ ನಿಲ್ಲಿಸಿದರೆ, ಅಲ್ಲಿಯೂ ಟೋಯಿ ಂಗ್ ಕಾಟ ತಪ್ಪಿದ್ದಲ್ಲ. ಆ ಪ್ರದೇಶದಲ್ಲಿ ಟ್ರಾಫಿಕ್ ಇಲಾಖೆಯಿಂದ ನೋ ಪಾರ್ಕಿಂಗ್ ಜಾಗ ಎಂದು ನಾಮಫಲಕ ಅಳವಡಿಸದಿದ್ದರೂ ಅಲ್ಲಿ ನಿಲ್ಲಿಸುವ ವಾಹನಗಳನ್ನು ಟೋಯಿಂಗ್‌ನಲ್ಲಿ ಕೊಂಡೊಯ್ಯಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಕೊಡಿಯಾಲ್ಗುತ್ತು ನಿವಾಸಿಯಾದ ಲಾರೆನ್ಸ್ ಅವರು ಜೂ. 15ರಂದು ಪಾಂಡೇಶ್ವರ ಬಳಿ ತನ್ನ ಸ್ಕೂಟರ್ ನಿಲ್ಲಿಸಿ ಪುಸ್ತಕದ ಅಂಗಡಿಯೊಂದಕ್ಕೆ ತೆರಳಿದ್ದರು. ನಗರಕ್ಕೆ ಟೋಯಿಂಗ್ ವ್ಯವಸ್ಥೆ ಬರುವುದಕ್ಕೂ ಮುನ್ನ ನೋ-ಪಾರ್ಕಿಂಗ್ ಜಾಗದಲ್ಲಿ ವಾಹನಗಳು ನಿಂತಿದ್ದರೆ ಟ್ರಾಫಿಕ್ ಪೊಲೀಸರು ಟಯರ್‌ಗೆ ಲಾಕ್ ಹಾಕಿ ಕೀ ತೆಗೆದುಕೊಂಡು ಹೋಗುತ್ತಿದ್ದರು. ಲಾಕರ್‌ನಲ್ಲಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ ಇತ್ತು. ಆದರೆ, ಈಗ ಟೋಯಿಂಗ್ ಬಂದ ಬಳಿಕ ವಾಹನ ಕೊಂಡೊಯ್ದ ಜಾಗದಲ್ಲಿ ಮಾಹಿತಿ ಇರುವುದಿಲ್ಲ. ಹೀಗಾಗಿ ವಾಹನ ಹುಡುಕುವುದೇ ಸವಾಲಾಗಿದೆ ಎನ್ನುತ್ತಾರೆ ವಾಹನ ಮಾಲಕರೊಬ್ಬರು.
Related Articles
ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದಂತ ವಾಹನಗಳನ್ನು ಟೋಯಿಂಗ್ ವಾಹನದಲ್ಲಿ ಕೊಂಡೊಯ್ಯುವಾಗ ವಾಹನಗಳಿಗೆ ಯಾವುದೇ ರೀತಿಯ ಹಾನಿಯಾಗಬಾರದು ಎಂದು ಟ್ರಾಫಿಕ್ ಪೊಲೀಸ್ ಸಿಬಂದಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಈ ಬಗ್ಗೆ ಮತ್ತೂಮ್ಮೆ ಕಟ್ಟುನಿಟ್ಟಿನ ಸೂಚನೆ ನೀಡುತ್ತೇನೆ. ಒಂದುವೇಳೆ ವಾಹನಗಳಿಗೆ ಹಾನಿಯಾದರೆ ಸಂಚಾರ ವಿಭಾಗದ ಎಸಿಪಿಗೆ ಲಿಖೀತ ರೂಪದಲ್ಲಿ ದೂರು ನೀಡಬಹುದು.
Advertisement
– ಸಂದೀಪ್ ಪಾಟೀಲ್, ಮಂಗಳೂರು ಪೊಲೀಸ್ ಆಯುಕ್ತರು
ಗಾಡಿ ಹುಡುಕೋದೇ ಕಷ್ಟ
ನಗರಕ್ಕೆ ಟೋಯಿಂಗ್ ವ್ಯವಸ್ಥೆ ಬರುವುದಕ್ಕೂ ಮುನ್ನ ನೋ-ಪಾರ್ಕಿಂಗ್ ಜಾಗದಲ್ಲಿ ವಾಹನಗಳು ನಿಂತಿದ್ದರೆ ಟ್ರಾಫಿಕ್ ಪೊಲೀಸರು ಟಯರ್‌ಗೆ ಲಾಕ್ ಹಾಕಿ ಕೀ ತೆಗೆದುಕೊಂಡು ಹೋಗುತ್ತಿದ್ದರು. ಲಾಕರ್‌ನಲ್ಲಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ ಇತ್ತು. ಆದರೆ, ಈಗ ಟೋಯಿಂಗ್ ಬಂದ ಬಳಿಕ ವಾಹನ ಕೊಂಡೊಯ್ದ ಜಾಗದಲ್ಲಿ ಮಾಹಿತಿ ಇರುವುದಿಲ್ಲ. ಹೀಗಾಗಿ ವಾಹನ ಹುಡುಕುವುದೇ ಸವಾಲಾಗಿದೆ ಎನ್ನುತ್ತಾರೆ ವಾಹನ ಮಾಲಕರೊಬ್ಬರು.
ಐದು ನಿಮಿಷಗಳಲ್ಲಿ ಬರುವಷ್ಟರಲ್ಲಿ ಅವರ ಸ್ಕೂಟರ್ ಅಲ್ಲಿರಲಿಲ್ಲ. ಸ್ಕೂಟರ್ ಕಳೆದು ಹೋಗಿದೆ ಎಂದು ಆ ದಿನ ಆಟೋ ರಿಕ್ಷಾದಲ್ಲಿ ನಗರದೆಲ್ಲೆಡೆ ಹುಡುಕಿದ್ದಾರೆ. ಕೊನೆಗೆ ಟೋಯಿಂಗ್‌ನಲ್ಲಿ ವಾಹನ ತೆಗೆದುಕೊಂಡು ಹೋಗಿರಬಹುದೆಂಬ ಅನುಮಾನದಿಂದ ಕದ್ರಿ ಪೊಲೀಸ್ ಠಾಣೆಗೆ ತೆರಳಿದಾಗ ಅವರ ವಾಹನ ಅಲ್ಲಿತ್ತು.
ಲಾರೆನ್ಸ್ ಹೇಳುವ ಪ್ರಕಾರ ‘ಟೋಯಿಂಗ್ ಸಿಬಂದಿಯಿಂದಾಗಿ ನನ್ನ ಸ್ಕೂಟರ್‌ನ ಎದುರುಗಡೆ ಸಾð್ಯಚ್ ಆಗಿದ್ದು, ಈ ಬಗ್ಗೆ ಪೊಲೀಸರ ಬಳಿ ಹೇಳಿದಾಗ ಹಾರಿಕೆಯ ಉತ್ತರ ನೀಡಿದ್ದಾರೆ. ಕೊನೆಗೂ ಲಿಖೀತ ರೂಪದಲ್ಲಿ ದೂರು ಬರೆದುಕೊಟ್ಟೆ. ಪೊಲೀಸರಿಂದ ಇನ್ನೂ ಯಾವುದೇ ರೀತಿಯ ಉತ್ತರ ಬರಲಿಲ್ಲ. ನನ್ನ ಸ್ಕೂಟರ್ ಮೊದಲಿದ್ದ ಕಂಡಿಷನ್‌ನಲ್ಲಿಲ್ಲ. ಇದು ನನ್ನದೊಂದು ಸಮಸ್ಯೆಯಲ್ಲ. ಅನೇಕರದ್ದು’ ಎನ್ನುವುದು ಅವರ ಆರೋಪ.
ನವೀನ್ ಭಟ್ ಇಳಂತಿಲ