Advertisement
ಸ್ವರಾಜ್ ಮೈದಾನದ ತಾತ್ಕಾಲಿಕ ವ್ಯವಸ್ಥೆಯಲ್ಲಿ ನೂರಕ್ಕೂ ಅಧಿಕ ಅಂಗಡಿ ಕೋಣೆಗಳಿವೆ. ಹಿಂದಿನ ಮಾರುಕಟ್ಟೆಯಲ್ಲಿ ಇದ್ದುದು 60 ಅಂಗಡಿಗಳು. ಅದು ಇಲ್ಲಿಗೆ ಬಂದಾಗ ನೂರರ ಗಡಿ ದಾಟಿದೆ. ಅಲ್ಲಿ ಇಲ್ಲದ ಅಂಗಡಿಗಳೆಲ್ಲ ಇಲ್ಲಿ ಸೇರ್ಪಡೆಗೊಂಡಿವೆ. ಹೋಟೆಲ್, ಕ್ಯಾಂಟೀನ್, ಫಾಸ್ಟ್ ಫುಡ್ ಅಂಗಡಿಗಳು ವಿಪರೀತವಾಗಿವೆ. ಪುರಸಭೆಯ ಲಗಾಮು ಇಲ್ಲದೆ ಠಿಕಾಣಿ ಹೂಡಿದ ಇವು ಭ್ರಷ್ಟ ವ್ಯವಸ್ಥೆಯ ಮುಖಗಳು.
Related Articles
- ಕೆಲವರು ಮಾರುಕಟ್ಟೆಯ ಪಶ್ಚಿಮ ಭಾಗದಲ್ಲಿ ತೆರೆದ ಜಾಗವಿದ್ದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ.
ಇದರಿಂದ ಅಸಹ್ಯಗೊಂಡ ಹತ್ತಿರದ ಅಂಗಡಿಯವರು ಈ ಭಾಗವನ್ನು ಅರೆಬರೆ ಬೇಲಿ ನಿರ್ಮಿಸಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
- ಸ್ವರಾಜ್ಯ ಮೈದಾನದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸುವ ವೇಳೆ, ಉತ್ತರ -ದಕ್ಷಿಣವಾಗಿ ಟ್ರ್ಯಾಕ್ ಹಾಕುವಾಗ ಜಾಗ ಕಡಿಮೆಯಾಗಿ ದಕ್ಷಿಣ ಭಾಗವನ್ನು ಕಾಂಕ್ರೀಟ್ ಹಾಕಿ ವಿಸ್ತರಿಸಲಾಯಿತು. ಇದಕ್ಕೆ ಆಧಾರವಾಗಿ ಸ್ತಂಭಗಳನ್ನೂ ನಿರ್ಮಿಸಲಾಯಿತು.
ಈ ಸ್ತಂಭಗಳ ಬುಡದಲ್ಲಿ ಎಡ ಬಲದಲ್ಲಿರುವವರು ಕಾಣಿಸದಂತೆ, ಒಬ್ಬರು ಆರಾಮವಾಗಿ ಮಲ ವಿಸರ್ಜನೆ ಮಾಡುವಷ್ಟು ಅವಕಾಶವಿದೆ!
Advertisement
ಮೂಡುಬಿದಿರೆಯಲ್ಲಿ ಶುಕ್ರವಾರ ವಾರದ ಸಂತೆ. ಅಂದು ಬೆಳ್ಳಂಬೆಳಗ್ಗೆ ದೂರದೂರುಗಳಿಂದ ನೂರಾರು ಮಾದರಿಯ ವ್ಯಾಪರಿಗಳು ಬರುತ್ತಾರೆ. ತರಕಾರಿ ಮಾರುವವರು, ಬಲೂನು, ಮಂಡಕ್ಕಿ ಸೇರಿದಂತೆ ವೈವಿಧ್ಯಮಯ ವ್ಯಾಪಾರಕ್ಕೆ ಬರುತ್ತಾರೆ. ಕೆಲವೊಮ್ಮೆ ತರಕಾರಿ, ಹಣ್ಣು ಹೇರಿಕೊಂಡು ವಾಹನಗಳಲ್ಲಿ ಬಂದವರು ಬೆಳಗ್ಗಿನ ಹೊತ್ತು ಶೌಚಾಲಯ ಸಿಗದೆ ನಸುಕಿನಲ್ಲಿಯೇ ಅಕ್ಕಪಕ್ಕದಲ್ಲೇ ಎಲ್ಲೋ ಮಲವಿಸರ್ಜನೆ ನಡೆಸಿ ಏನೂ ಅರಿವಿಲ್ಲದವರ ಹಾಗೆ ಹೋಗುತ್ತಾರೆ. ಇವರಲ್ಲಿ ಪುರುಷರು, ಮಹಿಳೆಯರು ಎಂಬ ಭೇದವೂ ಇಲ್ಲ . ಮುಂಜಾನೆ ಸ್ವರಾಜ್ಯ ಮೈದಾನವನ್ನು ಸುತ್ತುವರಿದ ರಸ್ತೆಯಲ್ಲಿ ವಾಕಿಂಗ್ ಹೋಗುವವರು ಇಂಥ ಮುಜುಗರ ಸನ್ನಿವೇಶಗಳನ್ನು ಎದುರಿಸಬೇಕಾಗಿದೆ. ಕೆಲವರು ವಿಡಿಯೊ ಮಾಡಿ ಸಂಬಂಧಿತ ಆಡಳಿತಕ್ಕೆ ಕಳುಹಿಸಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ. ಬಾಗಿಲು ಹಾಕಿದೆ, ತೆರೆಯುವುದಿಲ್ಲ!
ಮೈದಾನದ ಈಶಾನ್ಯ ಭಾಗದಲ್ಲಿ ರಿಂಗ್ರೋಡ್-ಟೆಲೆಕಾಂ ಟವರ್ ಬದಿಯಲ್ಲಿ ಸುಸಜ್ಜಿತ ಶೌಚಾಲಯ ಕಟ್ಟಿ ವರುಷಗಳೇ ಉರುಳಿವೆ. ಬಹುತೇಕ ಕೆಲಸವಾಗಿದೆ. ಇಲ್ಲಿಗೆ ಬರಬೇಕಾದರೂ ತಿರುವು ಇರುವ ರಿಂಗ್ ರೋಡ್ ದಾಟಿ ಬರಬೇಕು. ವಾಹನಗಳ ಓಡಾಟ ನಡೆಯುತ್ತಲೇ ಇರುವಾಗ ಹಾಗೆ ದಾಟುವುದು ಅಪಾಯಕಾರಿಯೂ ಹೌದು. ಆದರೂ ಇದನ್ನು ಬಳಸಲು ರಸ್ತೆ ದಾಟಿ ಬಂದರೆ, ‘ಪಾವತಿಸಿ ಬಳಸಿ’ ಎಂಬ ಫಲಕವಿದೆ. ಆದರೆ, ಪಾವತಿ ತೆಗೆದುಕೊಳ್ಳುವವರಿಲ್ಲ, ಹಾಗಾಗಿ ‘ಬಾಗಿಲನು ತೆರೆದು ಸೇವೆಯನು ಕೊಡ’ದ ಈ ಶೌಚಾಲಯದ ಹೊರಗಡೆಯೇ ಉಚಿತವಾಗಿ ತಮ್ಮ ದೇಹ ಬಾಧೆ ಪೂರೈಸಿಕೊಳ್ಳುತ್ತಾರೆ. ಹಾಗಿದ್ದರೆ ಪರಿಹಾರ ಏನು?
1. ಪ್ರಧಾನ ಮೈದಾನದ ನೈಋತ್ಯ ಮೂಲೆಯಲ್ಲಿ ಅಥವಾ ವಾಯುವ್ಯ ಮೂಲೆಯಲ್ಲಿ ಗುಜರಿ ಸಾಮಾನು ರಾಶಿ ಹಾಕಿರುವಲ್ಲಿ ಒಂದು ಸುಸಜ್ಜಿತ ಶೌಚಾಲಯ ನಿರ್ಮಿಸಬಹುದು.
2. ನಾಲ್ಕು ಸುತ್ತಿನ ವ್ಯಾಪಾರ ವಲಯದ ಎರಡು ಮೂಲೆಗಳಲ್ಲಿ ಶೌಚಾಲಯ ನಿರ್ಮಿಸಿದರೆ ಇಡೀ ಸಂಕೀರ್ಣ ಎಲ್ಲರಿಗೂ ಅದನ್ನು ಬಳಸಬಹುದು. ಅಲ್ಲಿ ನೀರಿನ ವ್ಯವಸ್ಥೆಯೂ ಇದೆ.
3. ಈಗಾಗಲೇ ಕಟ್ಟಿಹಾಕಿರುವ ಶೌಚಾಲಯದ ಬಾಗಿಲನು ತೆರೆದು ಸೇವೆಯನು ಕೊಡಬೇಕು.
4. ಸಿಂಥೆಟಿಕ್ ಟ್ರ್ಯಾಕ್ನ ಬುಡದಲ್ಲಿರುವ ಸ್ತಂಭಗಳಿಗೆ ಕಬ್ಬಿಣದ ಮುಳ್ಳಿನ ಬೇಲಿ ನಿರ್ಮಿಸಿ ಆ ಪರಿಸರ ಬಯಲು ಶೌಚಾಲಯ ವಲಯವಾಗದಂತೆ ನಿಗಾ ವಹಿಸಬೇಕು.
5. ಶೌಚಾಲಯಗಳನ್ನು ನಿರ್ಮಿಸಿದ ಬಳಿಕ ಎಲ್ಲೆಲ್ಲಿ ಶೌಚಾಲಯವಿದೆ ಎನ್ನುವ ಮಾಹಿತಿಯನ್ನು ಕೂಡಾ ನೀಡಬೇಕು. -ಧನಂಜಯ ಮೂಡುಬಿದಿರೆ