Advertisement
ಕೇಂದ್ರ ಮತ್ತು ರಾಜ್ಯ ಸರಕಾರಿ ಸ್ವಚ್ಚ ಭಾರತ್ ಮಿಷನ್ ಯೋಜನೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಕೋಟಿ ಗಟ್ಟಲೇ ಹಣ ಖರ್ಚು ಮಾಡುತ್ತಿದೆ. ಆದರೆ ಶೌಚಾಲಯ ನಿರ್ಮಾಣ ಮಾಡಿದ ಮೇಲೆ ಜನರು ಅದನ್ನು ಉಪಯೋಗಿಸದೇ ಕಟ್ಟಿಗೆ, ಕುಳ್ಳು ಮತ್ತು ಮನೆಗಳ ಸಾಮಾಗ್ರಿಗಳನ್ನು ಇಡಲು ಉಪಯೋಗಿಸುತ್ತಿರುವುದು ಅನೇಕ ಹಳ್ಳಿಗಳಲ್ಲಿ ಕಂಡುಬರುತ್ತಿದೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ.
Related Articles
Advertisement
ಇದರ ಬಗ್ಗೆ ಗ್ರಾಮಸ್ಥರನ್ನು ವಿಚಾರಿಸಿದರೆ. ಗ್ರಾಮದ ಪ್ರತಿಯೊಬ್ಬರ ಮನೆಗಳ ಮುಂದೆ ವೈಯಕ್ತಿಕ ಶೌಚಾಲಯಗಳಿವೆ. ಸದ್ಯ ಅವುಗಳು ಹಾಳಾಗಿವೆ ಮತ್ತು ನೀರಿನ ಸಮಸ್ಯೆ ಇರುವುದರಿಂದ ಶೌಚಾಲಯಗಳು ಬಳಕೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು. ಸರಕಾರ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ನೀಡುತ್ತದೆ. ಆದರೆ ಸಾರ್ವಜನಿಕರು ಮಾತ್ರ ಇವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುತ್ತಿಲ್ಲ. ಇದರ ಬಗ್ಗೆ ಜಾಗೃತಿ ಮೂಡಿಸಬೇಕಿದೆ.
ಸಿಇಒ ಅವರು ಪ್ರತಿ ಶುಕ್ರವಾರ ಚಿಲುಮೆ ಎಂಬ ಕಾರ್ಯಕ್ರಮ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಸ್ವತ್ಛತೆ ಮತ್ತು ಶೌಚಾಲಯಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಈ ಬಗ್ಗೆ ಕೇವಲ ಅಧಿ ಕಾರಿಗಳ ಕೆಲಸ ಮಾಡಿದರೆ ಸಾಲದು, ಇದಕ್ಕೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ. –ಡಾ| ಜಯರಾಮ್ ಚವ್ಹಾಣ, ಕುಷ್ಟಗಿ ತಾಪಂ ಇಒ –ಮಲ್ಲಿಕಾರ್ಜುನ ಮೆದಿಕೇರಿ