Advertisement

ಒಂಟಿ ವೃದ್ಧೆಗೆ ಶೌಚಾಲಯ: ಸ್ಥಳೀಯರ ಶ್ರಮದಾನ 

11:29 AM Feb 03, 2018 | Team Udayavani |

ಉಪ್ಪಿನಂಗಡಿ: ಕಡು ಬಡತನದಲ್ಲಿ ಜೀವಿಸುತ್ತಿರುವ ಒಂಟಿ ಮಹಿಳೆಯ ಮನೆಗೆ ಶೌಚಾಲಯ ಇಲ್ಲದಿರುವುದನ್ನು ಮನಗಂಡ ಕಜಾಕ್ಕಾರು ಅಂಬೇಡ್ಕರ್‌ ಸೇವಾ ಸಮಿತಿ ಪದಾಧಿಕಾರಿಗಳು ತಮ್ಮ ಸ್ವಂತ ದುಡಿಮೆಯ ಮೂಲಕ ಶೌಚಾಲಯ ನಿರ್ಮಿಸಿಕೊಟ್ಟು, ಮಾನವೀಯತೆ ಮೆರೆದಿದ್ದಾರೆ.

Advertisement

ಉಪ್ಪಿನಂಗಡಿ ಗ್ರಾ.ಪಂ. ಸಿಬಂದಿ ಮಹಾಲಿಂಗ ಎಂಬವರು ಮನೆ ತೆರಿಗೆ ವಸೂಲಿಗೆಂದು ಬಂದಿದ್ದ ಸಂದರ್ಭದಲ್ಲಿ ಇಲ್ಲಿನ ರಾಮನಗರ ರೋಟರಿ ಭವನದ ಸಮೀಪದಲ್ಲಿ ವಾಸವಿರುವ ಅವ್ವಮ್ಮ ಅವರ ಮನೆಗೆ ಶೌಚಾಲಯ ಇಲ್ಲ ಎಂಬ ವಿಚಾರ ತಿಳಿಯಿತು. ಆದರೆ, ಸರಕಾರದ ಸುತ್ತೋಲೆಯಂತೆ ಶೌಚಾಲಯ ನಿರ್ಮಿಸಲು ಈ ವೃದ್ಧೆ ಅಸಹಾಯಕರಾಗಿದ್ದ ಕಾರಣ ಮಹಾಲಿಂಗ ಅವರು ಸ್ಥಳೀಯ ಸಂಘಟನೆಗಳ ಪದಾಧಿಕಾರಿಗಳಿಗೆ ಈ ವಿಚಾರ ಮನವರಿಕೆ ಮಾಡಿಕೊಟ್ಟರು.

ಅಂಬೇಡ್ಕರ್‌ ಸೇವಾ ಸಮಿತಿ ಪದಾಧಿಕಾರಿಗಳಾಗಿರುವ ಕಜಾಕ್ಕಾರು ನಿವಾಸಿಗಳಾದ ರವಿ, ಸಂತೋಷ್‌, ಸುಂದರ, ಪುನೀತ್‌, ಸತೀಶ್‌, ಸೀನಪ್ಪ, ಮನೋಜ್‌, ಕೃಷ್ಣಪ್ಪ ಹಾಗೂ ಇತರರು ತಕ್ಷಣವೇ ಸ್ಪಂದಿಸಿ, ತಮ್ಮ ಕೆಲಸಗಳಿಗೆ ರಜೆ ಹಾಕಿ, ವೃದ್ಧೆಯ ಮನೆಗೆ ಶೌಚಾಲಯ ಮಾಡಿಸಿಕೊಟ್ಟರು. ಇವರ ಈ ಸೇವೆ ಗ್ರಾಮಸ್ಥರ ಶ್ಲಾಘನೆಗೆ ಪಾತ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next