ಮಂಗಳೂರು: ಬೀದಿ ಬದಿಯಲ್ಲಿ ಅನಧಿಕೃತ ಗೂಡಂಗಡಿಗಳ ತೆರವಿಗಾಗಿ ಪಾಲಿಕೆಯಿಂದ ನಡೆಯುತ್ತಿದ್ದ “ಟೈಗರ್ ಕಾರ್ಯಾಚರಣೆ’ ಶುಕ್ರವಾರವೂ ಮುಂದುವರಿದಿದೆ.
ನಿಯಮಗಳನ್ನು ಮೀರಿ ಅಂಗಡಿ ವಿಸ್ತರಣೆ ಮಾಡಿರುವ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ, ಈ ನಡುವೆ ಕಾರ್ಯಾಚರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇನ್ನಷ್ಟು ಕಾರ್ಯಾಚರಣೆಗೆ ಮುಂದಾದ ಪಾಲಿಕೆ ನಿಯಮ ಮೀರಿ ಫುಟ್ಪಾತ್ ಗೆ ವಿಸ್ತರಿಸಿದ್ದ ಅಂಗಡಿಗಳ ಭಾಗವನ್ನೂ ತೆರವುಗೊಳಿಸುವ ಕಾರ್ಯಕ್ಕೆ ಕೈಹಾಕಿದೆ.
ಅದರಂತೆ ಸ್ಟೇಟ್ ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣ ಬಳಿ ಭಾರಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಪಾಲಿಕೆ ಕಾರ್ಯಾಚರಣೆ ನಡೆಸುತ್ತಿದೆ.
ಕೆಲ ದಿನಗಳ ಹಿಂದೆ ತೆರವು ವಿರೋಧಿಸಿ ಪಾಲಿಕೆ ಆಯುಕ್ತರ ಕಚೇರಿ ಮುಂಭಾಗ ವ್ಯಾಪಾರಸ್ಥ ಸಂಘದ ಪದಾಧಿಕಾರಿಗಳು, ವ್ಯಾಪಾರಸ್ಥರು ಧರಣಿ ನಡೆಸಿದ ವಿದ್ಯಮಾನವೂ ನಡೆದಿತ್ತು.
ಇದನ್ನೂ ಓದಿ: Udupi: ಫ್ಲಾಟ್ ಗೆ ನುಗ್ಗಲು ಯತ್ನಿಸಿದ ನಾಲ್ವರು ಮುಸುಕುಧಾರಿಗಳು, CCTV ಯಲ್ಲಿ ದೃಶ್ಯ ಸೆರೆ