Advertisement

ಇಳುವರಿಯಲ್ಲೂ ದಾಖಲೆ ಬರೆದ ತೊಗರಿ!

04:46 PM Dec 30, 2020 | Team Udayavani |

ಮಸ್ಕಿ: ಸತತ ಮಳೆಯಿಂದ ಅತಿವೃಷ್ಟಿಗೆ ಸಿಲುಕಿದ ತೊಗರಿ ಈ ಬಾರಿ ಫಸಲಿನಲ್ಲೂ ದಾಖಲೆ ಬರೆದಿದೆ.ಬಿತ್ತನೆಯಲ್ಲಿ ಗುರಿ ಮೀರಿ ಸಾಧನೆ ಮಾಡಿದ್ದ ಬೆಳೆ ಈ ಬಾರಿ ರೈತರಿಗೆ ಉತ್ತಮ ಆದಾಯ ಹರಿಸಿದೆ.ತಾಲೂಕು ಮಾತ್ರವಲ್ಲದೇ ರಾಯಚೂರು ಜಿಲ್ಲೆಯಲ್ಲಿ ಖುಷ್ಕಿ ಪ್ರದೇಶದಲ್ಲಿ ತೊಗರಿ ಬೆಳೆ ಈ ಬಾರಿಅತ್ಯಧಿ ಕ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿತ್ತು. ಕೃಷಿ ಇಲಾಖೆ ಅಧೀನದ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಇದ್ದ ಬೀಜಗಳು ಮಾತ್ರವಲ್ಲದೇಖಾಸಗಿಯಾಗಿಯೂ ಬೀಜದ ಪ್ಯಾಕೇಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದ್ದವು.

Advertisement

ಖುಷ್ಕಿ ಪ್ರದೇಶದ ಬಹುಭಾಗ ಈ ಬಾರಿ ತೊಗರಿಬೆಳೆಯನ್ನೇ ಬೆಳೆಯಲಾಗಿತ್ತು. ಪ್ರತಿ ವರ್ಷ ಹತ್ತಿ,ಸೂರ್ಯಪಾನ, ಸಜ್ಜೆಬೆಳೆಯುತ್ತಿದ್ದ ರೈತರು ಈ ಬಾರಿ ಈ ಬೆಳೆಗಳನ್ನು ಬಿಟ್ಟು ಬಹುತೇಕ ಕಡೆಗಳಲ್ಲಿತೊಗರಿ ಬಿತ್ತನೆ ಮಾಡಲಾಗಿತ್ತು. ಹೀಗಾಗಿಬಿತ್ತನೆಯಾದ ತೊಗರಿ ಬಹುತೇಕ ಕಡೆಗಳಲ್ಲಿಅನಾವೃಷ್ಠಿಗೆ ಸಿಲುಕಿತ್ತು. ಆದರೂ ಫಸಲಿನಲ್ಲಿಭರ್ಜರಿ ಇಳುವರಿ ಬಂದಿದ್ದು, ರೈತರ ಮುಖದಲ್ಲಿ ಸಂತಸ ಮೂಡಿಸಿದೆ.

ಎಕರೆಗೆ 4-6 ಕ್ವಿಂಟಲ್‌: ತಾಲೂಕಿನ ಪಾಮನಕಲ್ಲೂರು, ಹಾಲಾಪುರ, ಗುಡದೂರು, ಬಳಗಾನೂರು,ಸಂತೆಕಲ್ಲೂರು ಸೇರಿ ಬಹುತೇಕ ಹೋಬಳಿಯಲ್ಲಿ ತೊಗರಿ ಬೆಳೆಯನ್ನು ಬಿತ್ತನೆ ಮಾಡಲಾಗಿತ್ತು. ಫಸಲು ಹಂತಕ್ಕೆ ಬಂದಿರುವ ತೊಗರೆ ಬೆಳೆಯ ಕಟಾವು ಪ್ರಕ್ರಿಯೆ ಜೋರಾಗಿ ನಡೆದಿದೆ. ಕೂಲಿ ಕಾರ್ಮಿಕರಬದಲಾಗಿ ಈ ಬಾರಿ ಮಷಿನ್‌ಗಳಿಂದಲೇ ತೊಗರಿಕೊಯ್ಲು ಹೆಚ್ಚಾಗಿ ನಡೆದಿದೆ. ಎಕರೆಗೆ 1000ರೂ.ನಂತೆ ತೊಗರಿ ಕೊಯ್ಲು ಮಷಿನ್‌ಗಳಿಗೆ ದರನಿಗದಿ ಮಾಡಲಾಗಿದೆ. ಕಟಾವು ಯಂತ್ರಗಳಿಂದಲೇಕೊಯ್ಲು ಮಾಡಿಸುತ್ತಿರುವ ರೈತರು ಬಂದತೊಗರಿ ಫಸಲನ್ನು ಜಮೀನುಗಳಲ್ಲಿಯೇ ರಾಶಿಮಾಡಿದ ಸ್ಥಳಗಳಲ್ಲಿ ಇಲ್ಲವೇ ಗ್ರಾಮದ ಖಾಲಿ ನಿವೇಶನಗಳಲ್ಲಿ ಕಣ ಮಾಡುತ್ತಿದ್ದಾರೆ. ಬಿಸಿಲಿಗೆ ಹಾಕಿ ಒಣಗಿಸಲಾಗುತ್ತಿದೆ. ಪ್ರತಿ ವರ್ಷ ಸಾಮಾನ್ಯವಾಗಿ 2-3 ಕ್ವಿಂಟಲ್‌ಗೆ ಸೀಮಿತವಾಗುತ್ತಿದ್ದ ಇಳುವರಿ ಈ ಭಾರಿ 5-6 ಕ್ವಿಂಟಲ್‌ಗೆ ಹೆಚ್ಚಳವಾಗಿದ್ದು, ರೈತರ ಸಂತಸ ಇಮ್ಮಡಿಗೊಳಿಸಿದೆ.

ಬೆಲೆ ಚೇತರಿಕೆ ನಿರೀಕ್ಷೆ: ತೊಗರಿ ಬೆಳೆಯ ಇಳುವರಿ ಏನೋ ಈ ಬಾರಿ ಚನ್ನಾಗಿ ಬಂದಿದೆ.ಆದರೆ ಮಾರುಕಟ್ಟೆಯಲ್ಲಿ ಇನ್ನು ಸೂಕ್ತ ದರ ಸಿಗುತ್ತಿಲ್ಲ ಎನ್ನುವ ಚಿಂತೆ ರೈತರಲ್ಲಿದೆ. ಸದ್ಯಖಾಸಗಿ ಮಾರುಕಟ್ಟೆಯಲ್ಲಿ ತೊಗರಿ ಕ್ವಿಂಟಲ್‌ಗೆ 5300-5500 ರೂ.ವರೆಗೆ ಮಾರಾಟವಾಗುತ್ತಿದೆ.ಈ ಬಗೆ ಇನ್ನು ಚೇತರಿಕೆಯಾಗಬೇಕು ಎನ್ನುವುದುರೈತರ ಲೆಕ್ಕಚಾರ. ಆದರೆ ಸರಕಾರ ಇನ್ನು ಖರೀದಿ ಪ್ರಕ್ರಿಯೆ ಆರಂಭಿಸುತ್ತಿಲ್ಲ.

ಸದ್ಯ ತೊಗರಿ ಮಾರಾಟಕ್ಕೆ ಆಸಕ್ತ ಇರುವ ರೈತರ ನೋಂದಣಿ ಪ್ರಕ್ರಿಯೆ ಮಾತ್ರ ಆರಂಭಿಸಿದೆ.ತಾಲೂಕಿನ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ತೊಗರಿ ಖರೀದಿಗಾಗಿ ರೈತರ ಹೆಸರು ನೋಂದಣಿಮಾಡಿಕೊಳ್ಳಲಾಗುತ್ತಿದೆ. ಆದರೆ ಇಲ್ಲಿಯೂ ತೊಗರಿ ಬೆಳೆಯ ನಿರ್ದಿಷ್ಠ ದರ ನಿಗದಿ ಮಾಡಿಲ್ಲ.ಹೀಗಾಗಿ ಇಳುವರಿ ಬಂದರೂ ಮಾರುಕಟ್ಟೆಯಲ್ಲಿನಿರ್ದಿಷ್ಠ, ಸೂಕ್ತ ಬೆಲೆ ಇಲ್ಲ ಎನ್ನುವ ಕೊರಗಿನಲ್ಲಿಯೇ ರೈತರು ಖಾಸಗಿ ಮಾರುಕಟ್ಟೆಯಲ್ಲಿ ಸಿಗುವ ಬೆಲೆಗೆ ತೊಗರಿ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ.

Advertisement

ತೊಗರಿ ಖರೀದಿಗಾಗಿ ಸರಕಾರದ ನಿರ್ದೇಶನದಂತೆ ಈಗಾಗಲೇ ಕೃಷಿ ಪತ್ತಿನ ಸಹಕಾರಿ ಕೇಂದ್ರಗಳಲ್ಲಿ ರೈತರ ಹೆಸರು ನೋಂದಣಿ ಮಾಡಿಕೊಳ್ಳಲು ಆರಂಭಿಸಲಾಗಿದೆ. ಸರಕಾರದ ಆದೇಶ ಬಳಿಕ ಖರೀದಿ ಪ್ರಕ್ರಿಯೆ ನಡೆಸಲಾಗುವುದು. -ಎಂ.ಶಿವಶರಣ, ಕೃಷಿ ಅಧಿಕಾರಿ, ಮಸ್ಕಿ

ಪ್ರತಿ ವರ್ಷಕ್ಕಿಂತ ಈ ಬಾತಿ ತೊಗರಿ ಇಳುವರಿಲ್ಲಿ ಹೆಚ್ಚಾಗಿದೆ. ಎಕರೆಗೆ 4-5 ಕ್ವಿಂಟಲ್‌ ಬಂದಿದೆ. ಇನ್ನು ಚನ್ನಾಗಿರುವ ಜಮೀನುಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಇಳುವರಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ಸರಕಾರ ಖರೀದಿ ಕೇಂದ್ರ ಆರಂಭಿಸಿ ಹೆಚ್ಚಿನ ದರಕ್ಕೆ ಖರೀದಿ ಮಾಡಬೇಕಿದೆ. -ಬಸಪ್ಪ, ರೈತ ಮಸ್ಕಿ

 

 

-ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next