ಕಲಬುರಗಿ: ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ಇಲ್ಲದೇ ಕೇಂದ್ರದಬೆಂಬಲ ಬೆಲೆಯೊಂದಿಗೆ ಮಾತ್ರ ತೊಗರಿ ಖರೀದಿ ಪ್ರಕ್ರಿಯೆ ತೊಗರಿ ರಾಶಿ ಸಮಯದಲ್ಲೇಆರಂಭವಾಗಿದ್ದರೂ ರೈತರು ಆಸಕ್ತಿಯಿಂದಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಲುಹಿಂದೇಟು ಹಾಕುತ್ತಿರುವುದು ಕಂಡು ಬರುತ್ತಿದೆ.
ಎರಡು ವಾರಗಳ ಹಿಂದೆಯೇ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆಂದು ಜಿಲ್ಲೆಯಾದ್ಯಂತ 172 ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ಹೆಸರುನೋಂದಣಿಗೆ ಚಾಲನೆ ನೀಡಲಾಗಿದೆ. ಆದರೆ ರೈತರು ಈ ಹಿಂದಿನ ವರ್ಷಗಳಂತೆ ಆಸಕ್ತಿಯಿಂದ ಹೆಸರುನೋಂದಾಯಿಸದಿರುವುದು ರಾಜ್ಯ ಸರ್ಕಾರ ತನ್ನಪಾಲಿನ ಪ್ರೋತ್ಸಾಹ ಧನ ಪ್ರಕಟಿಸದೇ ಇರವುದೇಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.ಅತಿವೃಷ್ಟಿಯಿಂದ ಮೊದಲೇ ಅರ್ಧಕ್ಕಿಂತಹೆಚ್ಚಿನ ಪ್ರಮಾಣದಲ್ಲಿ ತೊಗರಿ ಸಂಪೂರ್ಣಹಾನಿಯಾಗಿದ್ದರಿಂದ ಕಳೆದ ವರ್ಷವೇ ಕ್ವಿಂಟಲ್‌ಗೆ 6100 ರೂ.ದರದಲ್ಲಿ ಖರೀದಿ ಮಾಡಿರುವಾಗ ಕನಿಷ್ಠ 6500ರೂ. ದರಲ್ಲಾದರೂ ಸರ್ಕಾರಖರೀದಿಸುತ್ತದೆ ಎಂದು ರೈತರು ನಂಬಿದ್ದರು.
ಆದರೆ ರಾಜ್ಯ ಸರ್ಕಾರ ನಂಬಿಕೆಗೆ ಬರೆಎಳೆದಿದ್ದರಿಂದ ಆಕ್ರೋಶಗೊಂಡಿರುವ ರೈತರುಹಿಡಿಶಾಪ ಹಾಕುತ್ತಿದ್ದು, ಇದೇ ಕಾರಣಕ್ಕೆ ಹೆಸರುನೋಂದಾಯಿಸದೇ ದೂರ ಉಳಿಯುತ್ತಿದ್ದಾರೆ. ತೊಗರಿ ಖರೀದಿ ಕೇಂದ್ರಗಳಲ್ಲಿ ಹೆಸರುನೋಂದಾಣಿ ಆರಂಭವಾಗಿ 20 ದಿನಗಳುಕಳೆದಿದ್ದರೂ ಜಿಲ್ಲೆಯಾದ್ಯಂತ ಜ. 5ರ ವರೆಗೆ ಕೇವಲ30 ಸಾವಿರ ರೈತರು ಮಾತ್ರ ನೋಂದಾಯಿಸಿದ್ದಾರೆ.ಹಿಂದಿನ ವರ್ಷ ಲಕ್ಷಕ್ಕೂ ಅಧಿಕ ರೈತರು ಹೆಸರುನೋಂದಾಯಿಸಿದ್ದರು. ರೈತರು ಖರೀದಿ ಕೇಂದ್ರಗಳಿಗೆ ಬಂದು ಹೆಸರು ನೋಂದಾಯಿಸದಿರುವ ಹಿನ್ನೆಲೆಯಲ್ಲಿ ನೋಂದಣಿ ಅವಕಾಶವನ್ನು ಜನವರಿಅಂತ್ಯದವರೆಗೂ ವಿಸ್ತರಿಸಲಾಗಿದೆ. ಈ ಮೊದಲು ನೋಂದಣಿಗೆ ಡಿಸೆಂಬರ್ 31 ಕೊನೆ ದಿನ ಎಂದು ಹೇಳಲಾಗಿತ್ತು.
ಉಗ್ರಾಣಗಳಲ್ಲಿನ ಹೆಚ್ಚಳದ ತೊಗರಿಗೆ ಇಲ್ಲ ಲೆಕ್ಕ :
ತೊಗರಿ ಖರೀದಿ ಕೇಂದ್ರಗಳಲ್ಲಿ ಪ್ರತಿ ಚೀಲದಲ್ಲಿ 200 ಕೀಲೋ ಗ್ರಾಮದಿಂದ 250 ಗ್ರಾಮದವರೆಗೂ ತೂಕ ಮಾಡಿ ಲಾರಿಗಳಲ್ಲಿ ಕಳುಹಿಸಲಾಗುತ್ತದೆ. ಏಕೆಂದರೆ ಏರಿಸುವಾಗ-ಇಳಿಸುವಾಗಕೆಲವೊಂದಿಷ್ಟು ಕಾಳುಗಳು ಬಿದ್ದರೆ ಕ್ವಿಂಟಲ್ ತೂಕದಲ್ಲಿ ಕಡಿಮೆಯಾಗದಿರಲೆಂದು 200 ಕೀಲೋಗ್ರಾಂ ಹೆಚ್ಚುವರಿ ಹಾಕಿಯೇ ಚೀಲ ತುಂಬಿಸಲಾಗುತ್ತದೆ. ಆದರೆ ಲಕ್ಷಾಂತರ ಚೀಲಗಳಲ್ಲಿ 200ಕೀಲೋ ಗ್ರಾಮ ಹಿಡಿದರೆ 70ರಿಂದ 100 ಕ್ವಿಂಟಲ್ ಆಗುತ್ತದೆ. ಆದರೆ 6-7 ಲಕ್ಷ ರೂ. ಮೌಲ್ಯದತೊಗರಿ ಎಲ್ಲಿ ಎಂಬುದಕ್ಕೆ ಲೆಕ್ಕವೇ ಇಲ್ಲ. ಕರ್ನಾಟಕ ರಾಜ್ಯ ಉಗ್ರಾಣಗಳ ಮೇಲಿcಚಾರಕರು ಇದಕ್ಕೆ ಹಾರಿಕೆ ಉತ್ತರ ನೀಡಿ ಜಾರಿಗೊಳ್ಳುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಬೆಲೆ ಏರಿಕೆ : ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಸ್ವಲ್ಪ ಹೆಚ್ಚಳವಾಗಿದೆ. ವಾರದ ಹಿಂದೆ ಕ್ವಿಂಟಾಲ್ ಗೆ 5400-5500 ರೂ. ಇದ್ದ ಬೆಲೆ ಈಗ 5800 ರೂ.ಗೆ ಏರಿಕೆಯಾಗಿದೆ. ವಾರದಲ್ಲಿ 6 ಸಾವಿರ ರೂ. ದರ ಆಗುವುದು ನಿಶ್ಚಿತ. ಆದರೆರಾಜ್ಯ ಸರ್ಕಾರ ಕ್ವಿಂಟಲ್‌ಗೆ 500ರೂ. ಘೋಷಿಸಿದಲ್ಲಿ ಮಾರುಕಟ್ಟೆಯಲ್ಲೂದರ ಹೆಚ್ಚಳವಾಗುವ ಸಾಧ್ಯತೆಗಳಿವೆ.ಸರ್ಕಾರ ರೈತ ಹಿತ ಕಾಯುತ್ತದೆಯೋ ಇಲ್ಲವ್ಯಾಪಾರಿಗಳ ಹಿತ ಕಾಯುತ್ತದೆಯೋ ಎನ್ನುವುದನ್ನು ಕಾದು ನೋಡಬೇಕಿದೆ.