Advertisement

ಗುಜರಾತ್‌: ಕೊಳವೆ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು

06:06 PM Oct 02, 2018 | udayavani editorial |

ಅಹ್ಮದ್‌ನಗರ : ಒಂದೂವರೆ ವರ್ಷ ಪ್ರಾಯದ ಗಂಡು ಮಗುವೊಂದು ಮನೆಯಂಗಳದಲ್ಲಿ ಆಡುತ್ತಾ ಪಕ್ಕದ ಮನೆಯಂಗಳದಲ್ಲಿದ್ದ  200 ಅಡಿ ಆಳದ ಕೊಳವೆ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಗುಜರಾತ್‌ನ ಸಬರ್‌ಕಾಂತಾ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಮೃತ ಪಟ್ಟ ಮಗು ರಾಹುಲ್‌, ಕೂಲಿ ಕಾರ್ಮಿಕನೊಬ್ಬನ ಪುತ್ರನೆಂದು ತಿಳಿದುಬಂದಿದೆ. ಇಲೋಲ ಗ್ರಾಮದಲ್ಲಿನ ತನ್ನ ಮನೆ ಸಮೀಪದ ಮಕ್‌ಬೂಲ್‌ ರಫೀಕ್‌ ಭಾಯಿ ಎಂಬವರ ಮನೆ ಅಂಗಳದಲ್ಲಿ ಕೊರೆಯಲಾಗಿದ್ದ, ಆದರೆ ಮುಚ್ಚಲ್ಪಡದ ಕೊಳವೆ ಬಾವಿಗೆ ಮಗು ಬಿದ್ದು ದಾರುಣವಾಗಿ ಮೃತಪಟ್ಟಿತೆಂದು ಹಿಮ್ಮತ್‌ನಗರ ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next