Advertisement

ಸೈನಿಕ ಶಾಲೆಯಲ್ಲಿ ಇಂದು ಮತ ಎಣಿಕ

01:03 PM May 15, 2018 | |

ವಿಜಯಪುರ: ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನದ ಬಳಿಕ ಮೇ 15ರಂದು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರದ ಸೈನಿಕ ಶಾಲೆಯ 4 ಕೋಣೆಗಳನ್ನು ಮತ ಎಣಿಕೆಗಾಗಿ ವಿಶೇಷವಾಗಿ ಸಿದ್ಧಪಡಿಸಲಾಗಿದ್ದು 85 ಅಭ್ಯರ್ಥಿಗಳ ಹಣೆಬರಹ ಬಯಲಾಗಲಿದೆ.

Advertisement

ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 6,50,972 ಪುರುಷ ಹಾಗೂ 5,96,128 ಮಹಿಳಾ ಮತದಾರರು ಮತ್ತು ಇತರೆ 8 ಮತದಾರರು, 4614 ಅಂಚೆ ಮತದಾನ ಮಾಡಿದ್ದು ಸೇರಿದಂತೆ 12,47,108 ಮತದಾರರು ಮತ ಚಲಾಯಿಸಿದ್ದಾರೆ. ಮೇ 15ರಂದು ಬೆಳಗ್ಗೆ ಕ್ಕೆ ನಗರದ ಅಥಣಿ ರಸ್ತೆಯಲ್ಲಿರುವ ಸೈನಿಕ ಶಾಲೆಯಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಪ್ರತಿ ಕ್ಷೇತ್ರದ ಮತ ಎಣಿಕೆ ಕಾರ್ಯದಲ್ಲಿ ತಲಾ 14 ಮತ ಎಣಿಕೆ ಟೆಬಲ್‌ಗ‌ಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಸ್‌.ಬಿ.ಶೆಟ್ಟೆಣ್ಣವರ ಮಾಹಿತಿ ನೀಡಿದ್ದಾರೆ.

ಮುದ್ದೇಬಿಹಾಳ ಕ್ಷೇತ್ರದ ಮತ ಎಣಿಕೆ ಕಾರ್ಯ ಸೈನಿಕ ಶಾಲೆಯ ಆದಿಲ್‌ಶಾಹಿ ಹೌಸ್‌ ನಂ. 4ರಲ್ಲಿ, ದೇವರಹಿಪ್ಪರಗಿ
ಕ್ಷೇತ್ರದ ಮತ ಎಣಿಕೆ ಕಾರ್ಯ ಆದಿಲ್‌ಶಾಹಿ ಹೌಸ್‌ ನಂ. 3ರಲ್ಲಿ, ಬಸವನಬಾಗೇವಾಡಿ ಕ್ಷೇತ್ರದ ಮತ ಎಣಿಕೆ ವಿಜಯನಗರ ಹೌಸ್‌ ನಂ. 8ರಲ್ಲಿ, ಬಬಲೇಶ್ವರ ಕ್ಷೇತ್ರದ ಮತ ಎಣಿಕೆ ಒಡೆಯರ್‌ ಹೌಸ್‌ ನಂ. 2ರಲ್ಲಿ, ವಿಜಯಪುರ ನಗರ ಕ್ಷೇತ್ರದ ಮತ ಎಣಿಕೆ ಹೊಯ್ಸಳ ಹೌಸ್‌ ನಂ. 6ರಲ್ಲಿ, ನಾಗಠಾಣ ಕ್ಷೇತ್ರದ ಮತ ಎಣಿಕೆ ವಿಜಯನಗರ ಹೌಸ್‌ ನಂ. 7ರಲ್ಲಿ, ಇಂಡಿ ಕ್ಷೇತ್ರದ ಮತ ಎಣಿಕೆ ಹೊಯ್ಸಳ ಹೌಸ್‌ ನಂ. 5 ಹಾಗೂ ಸಿಂದಗಿ ಕ್ಷೇತ್ರದ ಮತ ಎಣಿಕೆ ಕಾರ್ಯ ಒಡೆಯರ ಹೌಸ್‌ ನಂ. 1ರಲ್ಲಿ ನಡೆಯಲಿದೆ.

ಮತ ಎಣಿಕೆ ಸಂದರ್ಭದಲ್ಲಿ ಪ್ರತಿ ಟೆಬಲ್‌ಗೆ ಓರ್ವ ಸೂಪರ್‌ ವೈಸರ್‌ (ಗ್ರೂಪ್‌-ಬಿ ಮತ್ತು ಮೇಲಿನ ಅಧಿಕಾರಿ), ಓರ್ವ
ಸಹಾಯಕ ಸಿಬ್ಬಂದಿ ಹಾಗೂ ಓರ್ವ ಮೈಕ್ರೋ ಆಬರ್ವರ್‌ (ಕೇಂದ್ರ ಸರ್ಕಾರಿ ನೌಕರರು) ನೇಮಕ ಮಾಡಲಾಗಿದೆ. ಕಾಯ್ದಿರಿಸಿದ ಮತ್ತು ಗಣಕಯಂತ್ರ 280 ಸಿಬ್ಬಂದಿಗಳನ್ನು ಮತ ಎಣಿಕೆ ಕಾರ್ಯಕ್ಕೆ ಬಳಸಲಾಗುತ್ತಿದೆ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರತಿ ಅಭ್ಯರ್ಥಿ 14 ಜನ ಎಣಿಕೆ ಏಜೆಂಟ್‌ರನ್ನು ನೇಮಿಸಲಾಗಿದೆ. ಸಂಬಂಧಪಟ್ಟ ಚುನಾವಣಾ ಧಿಕಾರಿಗಳ ಮೂಲಕ ಇವರಿಗೆ ಗುರುತಿನ ಪತ್ರ ವಿತರಿಸಲಾಗಿದೆ. ಸೈನಿಕ ಶಾಲೆ ಗೇಟ್‌ ನಂ. 1ರಿಂದ ಮತ ಎಣಿಕೆ ಏಜೆಂಟ್‌ರು, ಅಭ್ಯರ್ಥಿಗಳು, ಅಭ್ಯರ್ಥಿಯ ಚುನಾವಣಾ ಏಜೆಂಟ್‌ರು ಗುರುತಿನ ಪತ್ರ ತೋರಿಸಿ ಪ್ರವೇಶ ಪಡೆಯಬಹುದಾಗಿದೆ. ಸೈನಿಕ ಶಾಲೆ ಪಾರ್ಕಿಂಗ್‌ ಸ್ಥಳದಲ್ಲಿ ಕ್ಯಾಂಟಿನ್‌ ವ್ಯವಸ್ಥೆ ಸಹ ಮಾಡಲಾಗಿದೆ.

ಕೌಂಟಿಂಗ್‌ ವೀಕ್ಷಕರು: ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲೂ ಮತ ಎಣಿಕೆ ವೀಕ್ಷಕರನ್ನು ನೇಮಿಸಲಾಗಿದೆ. ಮುದ್ದೇಬಿಹಾಳ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಶಿರಿಶಚಂದ್ರ ವರ್ಮ, ದೇವರಹಿಪ್ಪರಗಿ ಕ್ಷೇತ್ರಕ್ಕೆ ಅನಿತಾ ಯಾದವ, ಬಸವನಬಾಗೇವಾಡಿ ಕ್ಷೇತ್ರಕ್ಕೆ ಬಿರಸಾಯ ಓರಿಯನ್‌,
ಬಬಲೇಶ್ವರ ಕ್ಷೇತ್ರಕ್ಕೆ ಅಬ್ದುಲ ಸಮದ್‌, ವಿಜಯಪುರ ನಗರ ಕ್ಷೇತ್ರಕ್ಕೆ ಶೈಲಾ, ನಾಗಠಾಣ ಕ್ಷೇತ್ರಕ್ಕೆ ಗೀತಾ ಭಾರತಿ, ಇಂಡಿ ಕ್ಷೇತ್ರಕ್ಕೆ ಯಶವಂತಕುಮಾರ ಹಾಗೂ ಸಿಂದಗಿ ಕ್ಷೇತ್ರಕ್ಕೆ ವಿ. ಚಂದ್ರಶೇಖರನ್‌ ಅವರನ್ನು ನೇಮಿಸಲಾಗಿದೆ.

Advertisement

ಸೈನಿಕ ಶಾಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಫಲಿತಾಂಶ ವಿವರ ಪಡೆಯಲು ಮಾಧ್ಯಮ ಕೇಂದ್ರ ಸ್ಥಾಪಿಸಲಾಗಿದೆ. ಎನ್‌ ಡಿಎ ಹಾಲ್‌ ಹತ್ತಿರ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 7ಕ್ಕೆ ಮುಂಚಿತವಾಗಿ ಕೌಂಟಿಂಗ್‌ ವ್ಯವಸ್ಥೆಗಳ ಬಗ್ಗೆ ಚಿತ್ರೀಕರಣ ಮಾಡಬಹುದಾಗಿದ್ದು 7 ಗಂಟೆ ನಂತರ ಚಿತ್ರಿಕರಣಕ್ಕೆ ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.

ನಿಷೇಧಾಜ್ಞೆ: ನಗರದ ಸೈನಿಕ ಶಾಲೆಯಲ್ಲಿ ಮತ ಎಣಿಕೆ ಕಾರ್ಯವು ಸುವ್ಯವಸ್ಥಿತ ನಡೆಯಲು ಅನುಕುಲವಾಗುವಂತೆ ಮೇ 14ರ ಮಧ್ಯರಾತ್ರಿ 12 ಗಂಟೆಯಿಂದ ಮೇ 15ರ ಮಧ್ಯರಾತ್ರಿ 12 ಗಂಟೆವರೆಗೆ ಮತ ಎಣಿಕೆ ಕೇಂದ್ರದ ಸುತ್ತಮುತ್ತಲಿನ 200 ಮೀ. ಪ್ರದೇಶ ವ್ಯಾಪ್ತಿಯಲ್ಲಿ 144 ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿ ಎಸ್‌.ಬಿ. ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.

ನಿಷೇಧಾಜ್ಞೆ ಸಂದರ್ಭದಲ್ಲಿ ಪ್ರಚೋದನಕಾರಿ ಘೋಷಣೆ ಹಾಕುವುವುದಕ್ಕೆ ನಿಷೇ ಧಿಸಿದೆ. ಸಾರ್ವಜನಿಕ ಸಭೆ, ವಿಜಯೋತ್ಸವ ಮೆರವಣಿಗೆ ಮಾಡುವುದನ್ನು (ಶವ-ಸಂಸ್ಕಾರ, ಮದುವೆ ಮೆರವಣಿಗೆ ಹೊರತುಪಡಿಸಿ), ಆಯುಧ, ಮಾರಕಾಸ್ತ್ರ, ನ್ಪೊಟಕ ವಸ್ತುಗಳನ್ನು ತೆಗೆದುಕೊಂಡು ತಿರುಗಾಡುವುದನ್ನು ಹಾಗೂ ಯಾವುದೇ ರೀತಿಯ ಪಟಾಕಿ, ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿ¨

Advertisement

Udayavani is now on Telegram. Click here to join our channel and stay updated with the latest news.

Next