Advertisement
ಹೀಗಾಗಿ ಮಂಗಳವಾರ “ಅಡಿಲೇಡ್ ಓವಲ್’ನಲ್ಲಿ ನಡೆಯಲಿರುವ 2ನೇ ಮುಖಾಮುಖೀಯಲ್ಲಿ ಗೆಲ್ಲಲೇಬೇಕಾದ ಒತ್ತಡ ಕೊಹ್ಲಿ ಪಡೆಯ ಮೇಲಿದೆ. ಇಲ್ಲವಾದರೆ ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುವ ಯೋಜನೆಯಲ್ಲಿರುವ ಕಾಂಗರೂ ಪಡೆ ಬಹಳ ಬೇಗ ಇದರಲ್ಲಿ ಯಶಸ್ಸು ಸಾಧಿಸಲಿದೆ.
ವಿಶ್ವಕಪ್ ಹಿನ್ನೆಲೆಯಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯದೆದುರಿನ ಸರಣಿ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ. ಆದರೆ ಸಿಡ್ನಿ ಸೋಲು ಈ ಯೋಜನೆಗೆ ಹಿನ್ನಡೆ ಉಂಟುಮಾಡಿರುವುದು ಸುಳ್ಳಲ್ಲ. ಪ್ರಸಕ್ತ ಸರಣಿಯಲ್ಲಿ ಭಾರತ ಅನುಭವಿಸಿದ ಸೋಲುಗಳಲ್ಲಿ ಆರಂಭಿಕರ ವೈಫಲ್ಯ ಪ್ರಮುಖವಾಗಿತ್ತು. ಸಿಡ್ನಿ ಏಕದಿನದಲ್ಲಿ ಇದು ಗಂಭೀರ ರೂಪದಲ್ಲಿ ಕಾಡಿತು. 4 ರನ್ನಿಗೆ 3 ವಿಕೆಟ್ ಪತನವೆಂದರೆ ಅದೊಂದು ಘೋರ ವೈಫಲ್ಯ. ದೊಡ್ಡ ಮೊತ್ತದ ಚೇಸಿಂಗ್ ವೇಳೆ ಇಂಥದೊಂದು ಕುಸಿತ ಸಂಭವಿಸಿದರೆ ಎಷ್ಟೇ ಬಲಿಷ್ಠ ತಂಡಕ್ಕೂ ಚೇತರಿಕೆ ಅಸಾಧ್ಯ. ಆದರೆ ರೋಹಿತ್ ಶರ್ಮ ಇಂಥ ಸ್ಥಿತಿಯಲ್ಲೂ ದಿಟ್ಟ ಹೋರಾಟವೊಂದನ್ನು ನಡೆಸಿ ತಂಡವನ್ನು ಗೆಲುವಿನ ಬಾಗಿಲ ತನಕ ಕೊಂಡೊಯ್ದದ್ದು ನಿಜಕ್ಕೂ ಅಸಾಮಾನ್ಯ ಸಾಧನೆ.
Related Articles
ಅಡಿಲೇಡ್‌ನಲ್ಲೂ ರೋಹಿತ್ ಶರ್ಮ ದೊಡ್ಡ ಇನ್ನಿಂಗ್ಸ್ ಕಟ್ಟುತ್ತಾರೆ ಎಂದಲ್ಲ, ಅವರೊಬ್ಬರನ್ನೇ ನಂಬಿ ಕೂರುವುದೂ ಸರಿಯಲ್ಲ. ಧವನ್, ಕೊಹ್ಲಿ, ರಾಯುಡು ಸಿಡಿದರೆ ಟೀಮ್ ಇಂಡಿಯಾಕ್ಕೆ ಸರಣಿ ಸಮಬಲ ಅಸಾಧ್ಯವಲ್ಲ.
Advertisement
ಡೆತ್ ಓವರ್ ಬೌಲಿಂಗ್ ಚಿಂತೆಬೌಲಿಂಗ್ ವಿಭಾಗದಲ್ಲಿ ಎದುರಾದ ಸಮಸ್ಯೆಯೆಂದರೆ ಡೆತ್ ಓವರ್‌ಗಳಲ್ಲಿ ರನ್ ಸೋರಿಹೋದದ್ದು. ಅಂತಿಮ 10 ಓವರ್‌ಗಳಲ್ಲಿ 90 ರನ್ ನೀಡಿದ್ದು ಚೇಸಿಂಗ್ ವೇಳೆ ದುಬಾರಿಯಾಗಿ ಪರಿಣಮಿಸಿತು. ಭಾರತದ ಯಾವ ಬೌಲರ್ ಕೂಡ ಪರಿಣಾಮಕಾರಿ ದಾಳಿ ಸಂಘಟಿಸಲಿಲ್ಲ. ಭುವನೇಶ್ವರ್, ಶಮಿ, ಖಲೀಲ್, ಕುಲದೀಪ್ ಎಲ್ಲರೂ ವಿಫಲರಾದರು. ಹೀಗಾಗಿ ಲೆಗ್‌ಸ್ಪಿನ್ನರ್ ಚಾಹಲ್ ದ್ವಿತೀಯ ಪಂದ್ಯದಲ್ಲಿ ಆಡಲೂಬಹುದು. ಚಾಹಲ್ ಸೋಮವಾರ ನೆಟ್ಸ್‌ನಲ್ಲಿ ಬಹಳ ಸಮಯ ಕಳೆದಿದ್ದರು. ಆ ಮಟ್ಟಿಗೆ ಭಾರತಕ್ಕಿಂತ ದುರ್ಬಲ ಎಂದೇ ಭಾವಿಸಲಾದ ಆಸ್ಟ್ರೇಲಿಯದ ಬೌಲಿಂಗ್ ಹೆಚ್ಚು ಘಾತಕವಾಗಿ ಗೋಚರಿಸಿತು. ಅನನುಭವಿ ಜೇ ರಿಚರ್ಡ್‌ಸನ್ ಬರೀ 26 ರನ್ನಿಗೆ 4 ವಿಕೆಟ್ ಕಿತ್ತು ಭಾರತಕ್ಕೆ ಸೋಲಿನ ಹಾದಿ ತೋರಿಸಿದ್ದೊಂದು ಹೆಚ್ಚುಗಾರಿಕೆ. ಆಸೀಸ್ ಬ್ಯಾಟಿಂಗ್ ಕೂಡ ದಿಢೀರ್ ಚೇತರಿಕೆ ಕಂಡಿತು. ಟೆಸ್ಟ್ ಸರಣಿಯಲ್ಲಿ ಕೈಕೊಟ್ಟ ಶಾನ್ ಮಾರ್ಷ್, ಖ್ವಾಜಾ, ಹ್ಯಾಂಡ್ಸ್‌ಕಾಂಬ್ ಅವರೆಲ್ಲ ಇಲ್ಲಿ ಕೈ ಹಿಡಿದರು. ಫಿಂಚ್ ಸಿಡಿದರೆ ಆಸ್ಟ್ರೇಲಿಯ ಹೆಚ್ಚು ಘಾತಕವಾಗಿ ಪರಿಣಮಿಸುವುದರಲ್ಲಿ ಅನುಮಾನವಿಲ್ಲ. ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಅಂಬಾಟಿ ರಾಯುಡು, ಮಹೇಂದ್ರ ಸಿಂಗ್ ಧೋನಿ, ಕೇದಾರ್ ಜಾಧವ್/ದಿನೇಶ್ ಕಾರ್ತಿಕ್, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಮೊಹಮ್ಮದ್ ಶಮಿ. ಆಸ್ಟ್ರೇಲಿಯ: ಆರನ್ ಫಿಂಚ್ (ನಾಯಕ), ಅಲೆಕ್ಸ್ ಕ್ಯಾರಿ, ಉಸ್ಮಾನ್ ಖ್ವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್‌ಕಾಂಬ್, ಮಾರ್ಕಸ್ ಸ್ಟೋಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಪೀಟರ್ ಸಿಡ್ಲ್, ಜೇ ರಿಚರ್ಡ್‌ಸನ್, ನಥನ್ ಲಿಯೋನ್, ಜಾಸನ್ ಬೆಹೆÅಂಡಾಫ್ì.
ಆರಂಭ: ಬೆಳಗ್ಗೆ 7.50
ಪ್ರಸಾರ: ಸೋನಿ ಸಿಕ್ಸ್ ಅಡಿಲೇಡ್‌ನಲ್ಲಿ ಭಾರತ-ಆಸ್ಟ್ರೇಲಿಯ
“ಅಡಿಲೇಡ್ ಓವಲ್’ನಲ್ಲಿ ಭಾರತ-ಆಸ್ಟ್ರೇಲಿಯ 5 ಸಲ ಮುಖಾಮುಖೀಯಾಗಿವೆ. ಮೊದಲ 4 ಪಂದ್ಯಗಳಲ್ಲಿ ಆಸ್ಟ್ರೇಲಿಯ ಗೆದ್ದರೆ, 2012ರಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಭಾರತ ಗೆಲುವಿನ ಖಾತೆ ತೆರೆದಿತ್ತು. ಉಳಿದಂತೆ ವಿವಿಧ ಕ್ರಿಕೆಟ್ ಕೂಟಗಳ ವೇಳೆ ಭಾರತ ಇಲ್ಲಿ 8 ಪಂದ್ಯಗಳನ್ನಾಡಿದ್ದು, ಏಳನ್ನು ಗೆದ್ದ ಅಮೋಘ ದಾಖಲೆ ಹೊಂದಿದೆ. ಈ ಸಂದರ್ಭದಲ್ಲಿ ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ಥಾನವನ್ನು 2 ಸಲ ಮಣಿಸಿದೆ. ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ವಿರುದ್ಧ ಒಂದೊಂದು ಜಯ ಸಾಧಿಸಿದೆ. ಶ್ರೀಲಂಕಾ ವಿರುದ್ಧ ಆಡಲಾದ 2012ರ ಪಂದ್ಯ ಟೈ ಆಗಿದೆ. ಅಡಿಲೇಡ್‌ನಲ್ಲಿ ಭಾರತ-ಆಸ್ಟ್ರೇಲಿಯ
ವರ್ಷ ಫಲಿತಾಂಶ
1986 ಆಸ್ಟ್ರೇಲಿಯಕ್ಕೆ 36 ರನ್ ಜಯ
1991 ಆಸ್ಟ್ರೇಲಿಯಕ್ಕೆ 6 ವಿಕೆಟ್ ಜಯ
2000 ಆಸ್ಟ್ರೇಲಿಯಕ್ಕೆ 152 ರನ್ ಜಯ
2008 ಆಸ್ಟ್ರೇಲಿಯಕ್ಕೆ 50 ರನ್ ಜಯ
2012 ಭಾರತಕ್ಕೆ 4 ವಿಕೆಟ್ ಜಯ