Advertisement
ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಬೆಂಗಳೂರಿನ ಸೆಲ್ಕೋ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಉಚಿತ ಕಸೂತಿ ಮತ್ತು ಕರಕುಶಲತೆ ತರಬೇತಿ ಶಿಬಿರ ಜರಗಿತು ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರ ಸಿದ್ಧ ಉಡುಪಿಗೆ ಕಸೂತಿ ವಿನ್ಯಾಸ ಮಾಡುವುದರಿಂದ ಉತ್ತಮ ಬೇಡಿಕೆ ಮತ್ತು ದರ ಲಭ್ಯವಾಗುತ್ತದೆ. ಆದುದರಿಂದ ಇಲ್ಲಿ ತರಬೇತಿ ಪಡೆದ ಮಹಿಳೆಯರು ಹೊಲಿಗೆ, ಕಸೂತಿ ಕಲಿಯುವುದರ ಜತೆಯಲ್ಲಿ ಹೊಲಿದ ಉಡುಪುಗಳ ಮೌಲ್ಯವರ್ಧನೆಯ ಬಗ್ಗೆ ಚಿಂತಿಸಬೇಕು ಎಂದರು. ಭಾರತೀಯ ವಿಕಾಸ ಟ್ರಸ್ಟ್‌ನ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀ ಬಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಮುಕ್ತಾ ಎಸ್. ಉಪಸ್ಥಿತರಿದ್ದರು. ಬಿ.ವಿ.ಟಿ. ಸಿಬಂದಿ ಗೀತಾ ಆರ್. ರಾವ್ ವಂದಿಸಿದರು.