Advertisement
ಮೇಷ: ಮಾನಸಿಕವಾಗಿ ಅತೀ ಗಲಿಬಿಲಿ ಕಂಡುಬಂದರೂ ಮೇಲ್ಮುಖವಾಗಿ ನಗೆಯನ್ನು ತೋರಿಸಿಕೊಳ್ಳುವಿರಿ. ಮನಸ್ಸಿನ ಒದ್ದಾಟದಿಂದ ಕೋಪತಾಪಗಳು ಹೆಚ್ಚಾದೀತು. ಆರೋಗ್ಯದ ಮೇಲೆ ಪರಿಣಾಮ ಬೀರೀತು.
Related Articles
Advertisement
ಸಿಂಹ: ಮನಸ್ಸು ಸ್ವಲ್ಪ ಸಮಾಧಾನವನ್ನು ತೋರಿಸೀತು. ಆದರೆ ಉದ್ವೇಗವನ್ನು ಕಡಿಮೆ ಮಾಡಿಕೊಳ್ಳಲು ಧ್ಯಾನದ ಮೊರೆ ಹೋದರೆ ಉತ್ತಮ. ರಾತ್ರಿಯಲ್ಲಿ ನಿಶ್ಚಿಂತೆಯ ನಿದ್ರೆ ಮಾಡಿದರೆ ಆರೋಗ್ಯವನ್ನು ಕಾಪಾಡಿಕೊಂಡರೆ ಉತ್ತಮ.
ಕನ್ಯಾ: ಪಂಚಮ ಶನಿಯ ಬಾಧೆಯಿಂದ ಆರೋಗ್ಯ ಹಾಗೂ ಆರ್ಥಿಕವಾಗಿ ಹಾಗೂ ಸಂಚಾರದಿಂದ ದೇಹಾರೋಗ್ಯವು ಕೆಡಬಹುದು. ಮನಸ್ಸಿನ ತೊಳಲಾಟದಿಂದ ತೊಡಕುಗಳು ಕಂಡುಬಂದಾವು. ಮನೆ ಯಲ್ಲಿ ಕಿರಿಕಿರಿ ಕಂಡುಬರಲಿದೆ.
ತುಲಾ: ರಾಜಕೀಯ ರಂಗದವರಿಗೆ ಸ್ವಲ್ಪ ಉತ್ತಮ ಕಾಲವಿದು. ನಿಮ್ಮ ಜನಪ್ರಿಯತೆಗೆ ಇತರರು ಹೊಟ್ಟೆ ಉರಿಸಿಕೊಂಡಾರು. ಕುಟುಂಬದವರೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡರೆ ಉತ್ತಮ. ಮನಸ್ಸಿಗೆ ಸಮಾಧಾನವಿರುತ್ತದೆ.
ವೃಶ್ಚಿಕ: ಮನೆಯಲ್ಲಿ ನಿಶ್ಚಯ, ಮಂಗಲ ಕಾರ್ಯದ ಸಂಭ್ರಮ ತುಂಬಿ ತುಳುಕುವುದು. ದೇಹವು ಪುಷ್ಟಿಯಾಗಿರುತ್ತದೆ. ಕುಟುಂಬ ವರ್ಗದವರಿಂದ ಒಳ್ಳೆಯ ಮಾತುಗಳು ಕೇಳಿ ಸಮಾಧಾನ, ಸಂತಸವಿರುತ್ತದೆ.
ಧನು: ನೀವು ನಿರೀಕ್ಷಿಸಿದ ಅಭಿವೃದ್ಧಿಯು ಕಂಡುಬರದೆ ಬೇಸರಪಡುವಿರಿ. ಉದ್ವೇಗ, ಬೇಸರದಿಂದ ಮನಸ್ಸು ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿರಬಹುದು. ಮನೆಯಲ್ಲಿ ಪತ್ನಿಯ ಏಳಿಗೆಯ ಬಗ್ಗೆ ಸ್ವಲ್ಪ ಚಿಂತಿತರಾಗುವಿರಿ.
ಮಕರ: ನಿಮ್ಮ ಗೃಹದಲ್ಲಿ ಅಭಿವೃದ್ಧಿಯು ಕಂಡುಬಂದು ಸಮಾಧಾನವಾಗಲಿದೆ. ಖಾಲಿ ಸೈಟು ಯಾ ಮನೆ ಖರೀದಿ ಕಂಡುಬರಲಿದೆ. ಮಕ್ಕಳಿಂದ ಸಂತಸ ಕೂಡಿ ಬರಲಿದೆ. ಮನೆಯ ಹಿರಿಯರಿಗೆ ನಿಮ್ಮ ಏಳಿಗೆಯಿಂದ ಸಂತಸ.
ಕುಂಭ: ಕೃಷಿಕ ವರ್ಗದವರಿಗೆ ಸ್ವಲ್ಪ ಚಿಂತಿತ ಸಮಯವಾಗಿದೆ. ಸ್ಥಳೀಯ ಹಾಗೂ ಕುಟುಂಬಿಕರ ಕಟುನುಡಿಯು ನಿಮಗೆ ಬೇಸರ ತಂದೀತು. ಆರ್ಥಿಕವಾಗಿ ಹಾಗೂ ಮರಾಜಕೀಯವಾಗಿ ಅಭಿವೃದ್ಧಿ ಇರುತ್ತದೆ. ಆರೋಗ್ಯವು ಉತ್ತಮ.
ಮೀನ: ಶುಭ ಮಂಗಲ ಕಾರ್ಯದ ಸಮಯವು ಸಮೀಪವಿದೆ. ಅದರ ಉಪಯೋಗ ಮಾಡಿಕೊಂಡರೆ ಸಂತಸ. ಅತೀ ಹೆಚ್ಚು ಅಶಿಸುವುದು ಬೇಡ. ಮನೆಯಲ್ಲಿ ತಂದೆ-ತಾಯಿಗೆ ಸಂಭ್ರಮ ತಂದೀತು. ಆರ್ಥಿಕವಾಗಿ ಅಭಿವೃದ್ಧಿ.
ಎನ್.ಎಸ್. ಭಟ್