Advertisement

Horoscope: ಸಹೋದ್ಯೋಗಿಗಳಿಂದ  ಗೌರವ ಪ್ರಾಪ್ತಿಯಾಗಲಿದೆ

07:19 PM Aug 25, 2024 | Team Udayavani |

ಮೇಷ: ಹೊಸ ಸಪ್ತಾಹದಲ್ಲಿ ಹಿಂದಿನ ವಾರದ್ದೇ ಪರಿಸ್ಥಿತಿ. ಪರಿಶ್ರಮಕ್ಕೆ ತಕ್ಕ ಪ್ರತಿಫಲದ ಭರವಸೆ. ಉದ್ಯಮದಲ್ಲಿ ಮಾಮೂಲು ಸ್ಥಿತ್ಯಂತರಗಳು. ಆಪ್ತರಿಂದ ಅಯಾಚಿತ ನೆರವು ಲಭ್ಯ. ಗೃಹಿಣಿಯರ  ಆರೋಗ್ಯದ ಕಡೆಗೆ ಗಮನ ಇರಲಿ.

Advertisement

ವೃಷಭ: ಉದ್ಯೋಗ ಸ್ಥಾನದಲ್ಲಿ ಆಶಾದಾಯಕ ವಾತಾವರಣ. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಕೆಲಸದ ಒತ್ತಡ. ಉದ್ಯಮಗಳಲ್ಲಿ ಉತ್ಪಾದನೆ ವೃದ್ಧಿ. ದೂರದಲ್ಲಿರುವ ನೆಂಟರ ಆಗಮನ. ಧಾರ್ಮಿಕ ಕ್ಷೇತ್ರ ಸಂದರ್ಶನ.

ಮಿಥುನ: ಹಿತಶತ್ರುಗಳ ಬಾಧೆ ಎದುರಿಸಲು ಸಿದ್ಧತೆ. ಉದ್ಯಮದಲ್ಲಿ  ಪ್ರಗತಿ ತೃಪ್ತಿಕರ.  ವ್ಯವಹಾರ ನಿಮಿತ್ತ  ಪ್ರಯಾಣ ಮುಂದೂಡಿಕೆ. ಸಂಗಾತಿಯ ಆರೋಗ್ಯ ಚೇತರಿಕೆ. ಕುಟುಂಬದ ಹಳೆಯ ಹಿತೈಷಿಯ ಭೇಟಿ.

ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ಹೊಸಬರ ನೇಮಕ. ಉದ್ಯಮದ ಉತ್ಪಾದನೆಗಳ ಬೇಡಿಕೆಯಲ್ಲಿ ಹಿನ್ನಡೆ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ. ಲೇವಾದೇವಿ ವ್ಯವಹಾರದಲ್ಲಿ ಲಾಭ.

ಸಿಂಹ: ಹೆಸರಿಗೆ ತಕ್ಕ ಧೈರ್ಯ ಮತ್ತು  ಸಾಹಸ ಪ್ರವೃತ್ತಿಗೆ ಗೆಲುವು. ಹೊಸ ಪಾಲುದಾರರಿಂದ ವ್ಯಾಪಾರ ವೃದ್ಧಿ. ಕಟ್ಟಡ ನಿರ್ಮಾಣ ಕಾಮಗಾರಿ ತ್ವರಿತ ಗತಿಯಲ್ಲಿ. ನೂತನ ವಾಹನ  ಖರೀದಿ. ಮನೆಯಲ್ಲಿ ಮಂಗಲ ಕಾರ್ಯದ ಪ್ರಸ್ತಾವ. ಕುಟುಂಬದಲ್ಲಿ ಸಂತಾನ ವೃದ್ಧಿ.

Advertisement

ಕನ್ಯಾ: ಶಾಂತಿ, ಸಮಾಧಾನದ ಕ್ಷಣಗಳು.  ಆತ್ಮೀಯರಿಂದ ಸಕಾಲಿಕ ಸಹಾಯ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಉದ್ಯೋಗಾಸಕ್ತರಿಗೆ ಉತ್ತಮ ಅವಕಾಶಗಳು. ಕೃಷಿಯಲ್ಲಿ ಒಳ್ಳೆಯ ಪ್ರತಿಫಲ.

ತುಲಾ: ಎಲ್ಲ ಸಮಸ್ಯೆಗಳೂ ಪರಿಹಾರ. ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ ಪ್ರಾಪ್ತಿ. ಅಕಸ್ಮಾತ್‌ ಧನಾಗಮ.  ಗೃಹಾಲಂಕಾರಕ್ಕೆ ಧನ ವ್ಯಯ. ಕುಶಲಕರ್ಮಿಗಳ ಕೃತಿಗಳಿಗೆ ಉತ್ತಮ ಬೇಡಿಕೆ. ಸಂಗೀತ, ಭಜನೆ ಶ್ರವಣದಿಂದ ಸಮಾಧಾನ.

ವೃಶ್ಚಿಕ: ಸಂಪೂರ್ಣ ಸಹಜ ಸ್ಥಿತಿ. ಉದ್ಯೋಗ ಸ್ಥಾನದಲ್ಲಿ ಹಿರಿತನಕ್ಕೆ ಗೌರವ. ಉದ್ಯಮದಲ್ಲಿ   ಹೊಸ  ವಸ್ತುಗಳ ಉತ್ಪಾದನೆ. ನೆಂಟರ ಆಗಮನದಿಂದ ಹಬ್ಬದ ವಾತಾವರಣ. ಗೃಹಿಣಿಯರ ಸ್ವಾವಲಂಬನೆ ಯೋಜನೆ  ಉನ್ನತ ಸ್ಥಿತಿಯಲ್ಲಿ.

ಧನು: ಉದ್ಯೋಗ ಸ್ಥಾನದಲ್ಲಿ ಸಹೋದ್ಯೋಗಿಗಳ ಸದ್ಭಾವನೆಗೆ ಒಳಗಾಗುವಿರಿ.  ಸಣ್ಣ ಪ್ರಮಾಣದ  ಉದ್ಯಮಗಳ ಅಭಿವೃದ್ಧಿ. ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ. ಹೈನುಗಾರಿಕೆ, ಜೇನು ವ್ಯವಸಾಯದಲ್ಲಿ ಆಸಕ್ತಿ. ಮನೆಯವರ ಆರೋಗ್ಯ ಸುಧಾರಣೆ.

ಮಕರ: ಸಹೋದ್ಯೋಗಿಗಳಿಂದ  ಗೌರವ ಪ್ರಾಪ್ತಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಮಾಮೂಲಿನಂತೆ ಲಾಭ. ಭೂಮಿ ಖರೀದಿ- ಮಾರಾಟ ವ್ಯವಹಾರಸ್ಥರಿಗೆ ಲಾಭ. ಕೃಷ್ಯುತ್ಪನ್ನಗಳ ಮಾರಾಟದಿಂದ ಲಾಭ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ.

ಕುಂಭ: ದೀರ್ಘಾವಧಿ ಯೋಜನೆಗಳಲ್ಲಿ ಹಣ ಹೂಡಿಕೆ. ಉದ್ಯಮದಲ್ಲಿ ಕ್ರಮಾಗತ ಪ್ರಗತಿ. ದೂರದಲ್ಲಿರುವ ಬಂಧುಗಳ  ಆಗಮನ. ಸೇವಾ ಕಾರ್ಯಗಳಲ್ಲಿ ಕೈಜೋಡಿಸಲು ಎಲ್ಲರ ಪೂರ್ಣ ಸಹಕಾರ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ.

ಮೀನ: ಹಲವು ಶುಭಫಲಗಳ ದಿನ. ಉದ್ಯೋಗ ಸ್ಥಾನದಲ್ಲಿ ಕೀರ್ತಿ. ಸರಕಾರಿ ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ.  ಹಿರಿಯ ಬಂಧುಗಳ ಭೇಟಿ. ಅನ್ಯಸಮಾಜದ ವ್ಯಕ್ತಿಗಳಿಂದ ಸಕಾಲಿಕ  ಸಹಾಯ. ವ್ಯವಹಾರ ಸಂಬಂಧ ಗಣ್ಯ ವ್ಯಕ್ತಿಯ ಭೇಟಿ.

 

Advertisement

Udayavani is now on Telegram. Click here to join our channel and stay updated with the latest news.