Advertisement

Horoscope: ಅವಿವಾಹಿತ ಹುಡುಗರಿಗೆ ಶೀಘ್ರ ವಿವಾಹ ಯೋಗ

07:37 AM Jul 16, 2024 | Suhan S |

ಮೇಷ: ಉದ್ಯೋಗ ಸ್ಥಾನದಲ್ಲಿ ಸಮಾಧಾನದ ವಾತಾವರಣ, ವ್ಯವಹಾರ ಕೌಶಲದಿಂದ ವಿಘ್ನ ನಿವಾರಣೆ. ದವಸ ಧಾನ್ಯ ವ್ಯಾಪಾರಿಗಳಿಗೆ ಲಾಭ. ಲೇವಾದೇವಿ ವ್ಯವಹಾರದಲ್ಲಿ ತೃಪ್ತಿಕರ ಲಾಭ. ವಿದ್ಯಾರ್ಥಿಗಳ ಮುಂದಿನ ವ್ಯಾಸಂಗದ ಕುರಿತು ಚಿಂತನೆ.

Advertisement

ವೃಷಭ: ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ. ಊರಿನ ದೇವಾಲಯಕ್ಕೆ ಭೇಟಿ. ಪ್ರಾಪ್ತವಯಸ್ಕರಿಗೆ ವಿವಾಹ ನಿಶ್ಚಯ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಂತೋಷದ ಅನುಭವ.

ಮಿಥುನ: ಉದ್ಯೋಗದಲ್ಲಿ ಸಾಮಾನ್ಯ ಪ್ರಗತಿ. ಅಪೇಕ್ಷಿತ ಆರ್ಥಿಕ ನೆರವು ಲಭ್ಯ. ವಸ್ತ್ರ, ಉಡುಪು, ವಾಹನ ಉದ್ಯಮಿಗಳಿಗೆ ಅನುಕೂಲ. ಗೃಹೋತ್ಪನ್ನ ತಿನಿಸುಗಳ ಜನಪ್ರಿಯತೆ ವೃದ್ಧಿ. ವ್ಯವಹಾರಸ್ಥರಿಗೆ ಸಣ್ಣ ಪ್ರಯಾಣ ಸಂಭವ.

ಕರ್ಕಾಟಕ: ಉದ್ಯೋಗದಲ್ಲಿ ಸುಧಾರಣೆ. ಎಲ್ಲರ ಆರೋಗ್ಯ ಉತ್ತಮ. ಆಪ್ತರಿಂದ ನಿರೀಕ್ಷಿತ ಸಹಾಯ ಲಭ್ಯ. ವ್ಯವಹಾರ ಸಂಬಂಧ ಅರ್ಧ ದಿನದ ಪ್ರಯಾಣ. ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಸುವ ವಿಷಯದಲ್ಲಿ ಯೋಚನೆ.

ಸಿಂಹ: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ. ಪ್ರಾರ್ಥನೆಯಿಂದ ದೇವತಾನುಗ್ರಹ ಪ್ರಾಪ್ತಿ. ಕಟ್ಟಡ ನಿರ್ಮಾಪಕರಿಗೆ ಕೆಲಸ ಮುಗಿಸುವ ಒತ್ತಡ. ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ವಿದ್ಯಾರ್ಥಿಗಳ ಲೋಕಜ್ಞಾನ ವೃದ್ಧಿಗೆ ಅನುಕೂಲದ ವಾತಾವರಣ.

Advertisement

ಕನ್ಯಾ: ಅವಿವಾಹಿತ ಹುಡುಗರಿಗೆ ಶೀಘ್ರ ವಿವಾಹ ಯೋಗ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಕುಶಲ ಕರ್ಮಿಗಳಿಗೆ ಶೀಘ್ರ ಉದ್ಯೋಗ ಪ್ರಾಪ್ತಿ. ಗೃಹಿಣಿಯರ ಸ್ಯೋದ್ಯೋಗ ಯೋಜನೆ ಪ್ರಗತಿ.

ತುಲಾ: ಉದ್ಯೋಗ ಸ್ಥಾನದಲ್ಲಿ ಅನಾ ಯಾಸವಾಗಿ ಕಾರ್ಯ ನಿರ್ವಹಣೆ. ಕ್ರೀಡೆ, ಸಂಗೀತಾದಿ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಆಸಕ್ತಿ ವೃದ್ಧಿ. ಕೃಷಿ, ಹೈನುಗಾರಿಕೆ, ಜೇನು ಸಾಕಣೆಯಿಂದ ನೆಮ್ಮದಿ.

ವೃಶ್ಚಿಕ: ಹಿತಶತ್ರುಗಳ ಒಳಸಂಚುಗಳು ವಿಫಲ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಗಮ ನಾರ್ಹ ಸುಧಾರಣೆ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ ಸಂಭವ. ನೆರೆಯವರೊಡನೆ ಬಾಂಧವ್ಯ ವೃದ್ಧಿ. ನ್ಯಾಯಾಲಯ ವ್ಯವಹಾರ ವಿಳಂಬ.

ಧನು: ಅನಿರೀಕ್ಷಿತ ಸಹಾಯ ಪ್ರಾಪ್ತಿ. ಕೌಟುಂಬಿಕ ಸಮಸ್ಯೆ ಪರಿಹಾರ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಶಿಕ್ಷಿತರಿಗೆ ಯೋಗ್ಯ ಉದ್ಯೋಗ ಲಭಿಸುವ ಭರವಸೆ. ಸಣ್ಣ ಗೃಹೋದ್ಯಮ ಅಥವಾ ಹೈನುಗಾರಿಕೆ ಆಸಕ್ತರಿಗೆ ಅನುಕೂಲದ ವಾತಾವರಣ.

ಮಕರ: ಸಹೋದ್ಯೋಗಿಗಳಿಂದ ಸಹಕಾರ. ಕುಟುಂಬದ ಸದಸ್ಯರೊಂದಿಗೆ ಪ್ರೀತಿ, ವಾತ್ಸಲ್ಯದ ಸಂಬಂಧ ವೃದ್ಧಿ. ಸಣ್ಣ ಉದ್ಯಮಿಗಳಿಗೆ ಆದಾಯ ವೃದ್ಧಿ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ.ಮಹಿಳೆಯರ ಗೃಹೋದ್ಯಮ ಯೋಜನೆ ಯಶಸ್ಸು.

ಕುಂಭ: ಸದುದ್ದೇಶಕ್ಕೆ ಸಂಚಿತ ಧನ ವಿನಿ ಯೋಗ. ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶನ. ಸಮಾಜದಲ್ಲಿ ಗೌರವ, ಜನಪ್ರಿಯತೆ ವೃದ್ಧಿ. ವೈದ್ಯರ ಭೇಟಿಯಿಂದ ಸಣ್ಣ ತೊಂದರೆ ಪರಿಹಾರ. ಅಪರೂಪದ ಬಂಧುಗಳ ಭೇಟಿಯಿಂದ ಮನೆಮಂದಿಗೆ ಹರ್ಷ.

ಮೀನ: ಉದ್ಯೋಗದಲ್ಲಿ ವಿಶೇಷ ಸಾಧನೆ, ವ್ಯವಹಾರದಲ್ಲಿ ಅಪರಿಮಿತ ಮುನ್ನಡೆ. ಹಣಕಾಸು ವ್ಯವಹಾರ ಸುಧಾರಣೆ. ಸರಕಾರಿ ಇಲಾಖೆಗಳಿಂದ ಅನುಕೂಲದ ಸ್ಪಂದನ. ನೂತನ ವಾಹನ, ನಿವೇಶನ ಖರೀದಿ. ದಂಪತಿಗಳ ನಡುವೆ ಅನುರಾಗ ವೃದ್ಧಿ.

Advertisement

Udayavani is now on Telegram. Click here to join our channel and stay updated with the latest news.

Next