Advertisement

Horoscope: ಈ ರಾಶಿಯವರ ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆಯಾಗಲಿದೆ

07:40 AM May 14, 2024 | Suhan S |

ಮೇಷ: ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲದ ಭರವಸೆ. ಉದ್ಯಮದಲ್ಲಿ   ಪೈಪೋಟಿ ದೂರವಾಗುವ ಸಾಧ್ಯತೆ. ಆಪ್ತರಿಂದ ಅಯಾಚಿತ ನೆರವು ಲಭ್ಯ. ಗೃಹಿಣಿಯರ  ಆರೋಗ್ಯದ ಕಡೆಗೆ ಗಮನ ಇರಲಿ.

Advertisement

ವೃಷಭ: ಉದ್ಯೋಗದಲ್ಲಿ ಪದೋನ್ನತಿ.ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಬಿಡುವು ಇರಲಾರದು. ಉದ್ಯಮಗಳಲ್ಲಿ ಉತ್ಪಾದನೆ ಹೆಚ್ಚಳ. ದೂರದಲ್ಲಿರುವ ನೆಂಟರ ಆಗಮನ. ಸಾಹಿತ್ಯ ಅಧ್ಯಯನದಲ್ಲಿ ಆಸಕ್ತಿ. ದೇವತಾ ಸಾನ್ನಿಧ್ಯಕ್ಕೆ  ಭೇಟಿ.

ಮಿಥುನ: ವಿನಾ ಕಾರಣ   ಅಪವಾದಕ್ಕೆ ಗುರಿಯಾಗುವ ಸಾಧ್ಯತೆ. ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ. ಉದ್ಯಮದಲ್ಲಿ  ಪ್ರಗತಿ ತೃಪ್ತಿಕರ. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣದ ಸಾಧ್ಯತೆ. ಸಂಗಾತಿಗೆ ಮನಸ್ಥೈರ್ಯ ತುಂಬಲು ಪ್ರಯತ್ನ.

ಕರ್ಕಾಟಕ:  ಉದ್ಯೋಗ ಸ್ಥಾನದಲ್ಲಿ ಪ್ರತಿಭೆ, ಪರಿಶ್ರಮಕ್ಕೆ ಮನ್ನಣೆ.  ಉದ್ಯಮದ ಉತ್ಪಾದನೆ ಗಳಲ್ಲಿ   ವೈವಿಧ್ಯ ಕಾಯ್ದುಕೊಳ್ಳುವ ಪ್ರಯತ್ನ ಸಫ‌ಲ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ. ಮನೆಮಂದಿಗೂ ಉಲ್ಲಾಸದ ವಾತಾವರಣ.

ಸಿಂಹ: ಉದ್ಯೋಗಸ್ಥರಿಗೆ ಪದೋನ್ನತಿ. ಹೊಸ ಪರಿಚಯಸ್ಥರ ಸಹಾಯದಿಂದ  ವ್ಯಾಪಾರ ವೃದ್ಧಿ. ಕಟ್ಟಡ ನಿರ್ಮಾಣ ಕಾಮಗಾರಿ ತ್ವರಿತ ಗತಿಯಲ್ಲಿ. ನೂತನ ವಾಹನ  ಖರೀದಿಗೆ  ಸಿದ್ಧತೆ. ಮನೆಯಲ್ಲಿ ಮಂಗಲ ಕಾರ್ಯದ ಪ್ರಸ್ತಾವ.

Advertisement

ಕನ್ಯಾ: ಶಾಂತಿ,ಸಮಾಧಾನದ ಕ್ಷಣಗಳು.  ಆತ್ಮೀಯರಿಂದ ಸಕಾಲಿಕ ಸಹಾಯ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಉದ್ಯೋಗಾಸಕ್ತರಿಗೆ ಉತ್ತಮ ಅವಕಾಶಗಳು. ಕೃಷಿ ಕ್ಷೇತ್ರದಲ್ಲಿ ಒಳ್ಳೆಯ  ಪ್ರತಿಫ‌ಲ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.

ತುಲಾ:  ಪರಿಹಾರವಿಲ್ಲದ ಸಮಸ್ಯೆಯೇ ಇಲ್ಲ. ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ ಪ್ರಾಪ್ತಿ. ಅಕಸ್ಮಾತ್‌ ಧನಾಗಮ. ಗೃಹಾಲಂಕಾರಕ್ಕೆ ಧನ ವ್ಯಯ. ಕುಶಲಕರ್ಮಿಗಳ ಕೃತಿಗಳಿಗೆ ಉತ್ತಮ ಬೇಡಿಕೆ. ಸಂಗೀತ, ಕೀರ್ತನೆ, ಶ್ರವಣದಿಂದ ಸಮಾಧಾನ.

ವೃಶ್ಚಿಕ:  ಸಂಕಟಗಳಿಂದ ಬಿಡುಗಡೆ. ಉದ್ಯೋಗ ಸ್ಥಾನದಲ್ಲಿ ಹಿರಿತನಕ್ಕೆ ಗೌರವ. ಉದ್ಯಮಕ್ಕೆ  ಹೊಸ ಪಾಲುದಾರರ ಸೇರ್ಪಡೆ. ಉತ್ಪನ್ನಗಳ ಗುಣಮಟ್ಟಕ್ಕೆ ಜನರಿಂದ ಶ್ಲಾಘನೆ.  ನೆಂಟರ ಆಗಮನದಿಂದ ಹಬ್ಬದ ವಾತಾವರಣ.

ಧನು: ಹಿತೈಷಿಗಳಿಂದ  ಆವಶ್ಯಕತೆಗೆ  ತಕ್ಕಂತೆ ಸಹಾಯ. ಉದ್ಯೋಗ ಸ್ಥಾನದಲ್ಲಿ ಸದಭಿಪ್ರಾಯಕ್ಕೆ ಪಾತ್ರರಾಗುವಿರಿ.  ಸಣ್ಣ ಪ್ರಮಾಣದ  ಉದ್ಯಮಗಳ ಅಭಿವೃದ್ಧಿ. ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ. ಹೈನುಗಾರಿಕೆ, ಜೇನು ವ್ಯವಸಾಯದಲ್ಲಿ ಆಸಕ್ತಿ.

ಮಕರ:  ಉದ್ಯೋಗ ಸ್ಥಾನದಲ್ಲಿ ಗೌರವ. ನಿವೇಶನ ಖರೀದಿ- ಮಾರಾಟ ವ್ಯವಹಾರಸ್ಥ ರಿಗೆ ಲಾಭ. ಕೃಷ್ಯುತ್ಪನ್ನಗಳ ಮಾರಾಟದಿಂದ ಲಾಭ.ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ.

ಕುಂಭ:  ಗಳಿಕೆಯ ಗಣ ಲಾಭದಾಯಕ ಯೋಜನೆಗಳಲ್ಲಿ ಹೂಡಿಕೆ. ಉದ್ಯಮದಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ದೂರದಲ್ಲಿರುವ ಬಂಧುಗಳ ಪೂರ್ವನಿಯೋಜಿತ  ಭೇಟಿ. ಸೇವಾಕಾರ್ಯಗಳಲ್ಲಿ ಕೈಜೋಡಿಸಲು ಎಲ್ಲರ ಪೂರ್ಣ ಸಹಕಾರ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ.

Advertisement

Udayavani is now on Telegram. Click here to join our channel and stay updated with the latest news.

Next