Advertisement

Horoscope: ಈ ರಾಶಿಯವರಿಗೆ ಹಳೆಯ ಸಾಲ ಅನಿರೀಕ್ಷಿತವಾಗಿ ಕೈಗೆ ಬಂದ ಆನಂದ

07:26 AM Apr 08, 2024 | Suhan S |

ಮೇಷ:  ದಿನವಿಡೀ ಸಂತೋಷದ ಅನುಭವ.  ಸಮಗ್ರ ಸುಧಾರಣೆಯ ಬಗ್ಗೆ ಚಿಂತನೆ. ಉದ್ಯೋಗ ಸ್ಥಾನದಲ್ಲಿ ಸ್ಥಿರ ಅನುಭವ. ಹಿರಿಯ ನಾಗರಿಕರಿಗೆ ನೆಮ್ಮದಿ.   ವ್ಯವಹಾರ ಸಂಬಂಧ ತಿರುಗಾಟ. ಗೃಹಿಣಿಯರಿಗೆ ಉಲ್ಲಾಸ.

Advertisement

ವೃಷಭ: ವಧೂ- ವರಾನ್ವೇಷಿಗಳಿಗೆ ಶುಭವಾರ್ತೆ.   ಹಿರಿಯರ ಮತ್ತು ಮಕ್ಕಳ ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸ. ವ್ಯಾಪಾರಿಗಳು, ಎಂಜಿನಿಯರ್‌, ಲೆಕ್ಕ ಪರಿಶೋಧಕರು ಮೊದಲಾದ  ವೃತ್ತಿಪರರಿಗೆ  ಕೆಲಸ ಮುಗಿಸುವ ತರಾತುರಿ.

ಮಿಥುನ: ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ.  ಸ್ವತಂತ್ರ  ವ್ಯವಹಾರದ ಯೋಚನೆ ಬಿಟ್ಟು ಬಿಡಿ.  ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ. ಸದ್ಗಂಥ ಅಧ್ಯಯನದಲ್ಲಿ ಆಸಕ್ತಿ.

ಕರ್ಕಾಟಕ: ಮಿಶ್ರಫ‌ಲಗಳ ದಿನ. ಹಿರಿಯರ ಯೋಗಕ್ಷೇಮ ವಿಚಾರಿಸುತ್ತಿರಿ. ಮನೆಯಲ್ಲಿ ಉಳಿದ ಎಲ್ಲರ ಆರೋಗ್ಯ ಉತ್ತಮ. ಮಕ್ಕಳ ಭವಿಷ್ಯ ಚಿಂತನೆ. ಅವಿವಾಹಿತರಿಗೆ ತಕ್ಕ ಜೋಡಿ ಸಿಗುವ ಸಾಧ್ಯತೆ. ನ್ಯಾಯಾಲಯ ವ್ಯವಹಾರದಲ್ಲಿ ವಿಳಂಬ.

ಸಿಂಹ: ಎಲ್ಲ  ಕ್ಷೇತ್ರಗಳಲ್ಲೂ ಯಶಸ್ಸಿನ ಅನುಭವ. ಹಳೆಯ ಸಾಲ ಅನಿರೀಕ್ಷಿತವಾಗಿ ಕೈಗೆ ಬಂದ ಆನಂದ. ಅಧಿಕಾರಿಗಳ ಸಕಾಲಿಕ ಸ್ಪಂದನದಿಂದ  ಕಾರ್ಯಗಳು ಶೀಘ್ರವಾಗಿ ಮುಕ್ತಾಯ. ದಾಂಪತ್ಯ ಸುಖ ಉತ್ತಮ.

Advertisement

ಕನ್ಯಾ: ಸೇವಾಕಾರ್ಯಗಳಿಂದ ಜನಪ್ರಿಯತೆ ವೃದ್ಧಿ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಅನುಕೂಲ. ಸಂಸಾರ ಸುಖ ತೃಪ್ತಿಕರ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಲೇವಾದೇವಿ ವ್ಯವಹಾರದಲ್ಲಿ ಹಿನ್ನಡೆ.

ತುಲಾ: ದೇವತಾ ಕಾರ್ಯದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ. ಪರಿಸರ ಸ್ವತ್ಛತೆ ಚಟುವಟಿಕೆಗಳಲ್ಲಿ  ಆಸಕ್ತಿ. ಜೇನು ವ್ಯವಸಾಯ, ತೋಟಗಾರಿಕೆಯಲ್ಲಿ ಆಸಕ್ತರಿಗೆ ಸಂತೃಪ್ತಿ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಲಾಭ.

ವೃಶ್ಚಿಕ: ನೊಂದವರಿಗೆ ಸಾಂತ್ವನ ಹೇಳಿ ಸಮಾಧಾನ ಹೊಂದುವಿರಿ. ವಸ್ತ್ರಾಭರಣ ಖರೀದಿ ಸಂಭವ.ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಮಧ್ಯಮ ಲಾಭ.  ಹಿರಿಯರ  ಆರೋಗ್ಯದ ಮೇಲೆ ಹವಾಮಾನ ವೈಪರೀತ್ಯದ ಪರಿಣಾಮ.

ಧನು:  ಸರಕಾರಿ ಉದ್ಯೋಗಸ್ಥರಿಗೆ ಶುಭ ಸಮಾಚಾರ ನಿರೀಕ್ಷೆ. ಉಳಿತಾಯ  ಯೋಜ ನೆಗಳ ಏಜೆಂಟರಿಗೆ ಆದಾಯ  ವೃದ್ಧಿ. ಅಲ್ಪಾವಧಿ ಹೂಡಿಕೆಗಳು ಹಿತಕರವಲ್ಲ. ಗೃಹಿಣಿಯರ ಸ್ವೋ ದ್ಯೋಗ  ಯೋಜನೆಗಳು ಕ್ಷಿಪ್ರಗತಿಯಲ್ಲಿ ಮುನ್ನಡೆ.

ಮಕರ: ಆದಾಯ ವೃದ್ಧಿಯ ಪ್ರಯ ತ್ನವು ಫ‌ಲಿಸುವ  ಕಾಲ ಸನ್ನಿಹಿತ.  ಕಾರ್ಯ ರಂಗದಲ್ಲಿ  ಸಹನೆಗೆ ದಕ್ಷತೆಯಷ್ಟೇ ಪ್ರಾಧಾನ್ಯ. ಮಕ್ಕಳ ಭವಿಷ್ಯ ಚಿಂತನೆ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ. ಶಸ್ತ್ರವೈದ್ಯರಿಗೆ ಕೀರ್ತಿ.

ಕುಂಭ: ಸೇವಾಕಾರ್ಯಗಳಿಂದ ಜನ ಪ್ರಿಯತೆ  ವೃದ್ಧಿ ಉದ್ಯೋಗದಲ್ಲಿ ಪದೋ ನ್ನತಿ ಅಥವಾ ವೇತನ ಏರಿಕೆಯ ಸಾಧ್ಯತೆ.  ಬಂಧು ಬಳಗದವರಿಂದ ವಿಶೇಷ ಪ್ರೇಮ ಪ್ರಕಟ. ಸ್ಥಿರಾಸ್ತಿ ಖರೀದಿ ಪ್ರಯತ್ನದಲ್ಲಿ ಮುನ್ನಡೆ.

ಮೀನ:  ಸತ್ಕಾರ್ಯಗಳಲ್ಲಿ ಪಾಲುಗೊಳ್ಳುವ ಅವಕಾಶ. ಕಳೆದುಹೋದ ಸುಸಂದರ್ಭ ಮರಳಿ ಬರುವ ಸಾಧ್ಯತೆ. ಕಾರ್ಯ ಯಶಸ್ಸಿಗೆ ಸಂಬಂಧಪಟ್ಟವರ ಸಹಕಾರ. ಪರಿಣತರೊಬ್ಬರ ಹಠಾತ್‌ ಭೇಟಿಯಿಂದ ಲಾಭ. ಹಿರಿಯ ಬಂಧುಗಳಿಗೆ ನೆರವಾಗುವ ಸಂದರ್ಭ. ಎಲ್ಲರ ಆರೋಗ್ಯ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next