Advertisement

Horoscope: ಈ ರಾಶಿಯ ವ್ಯಾಪಾರಿಗಳಿಗಿಂದು ನಿರೀಕ್ಷೆಗಿಂತ ಅಧಿಕ ಲಾಭ ಉಂಟಾಗಲಿದೆ

07:29 AM Apr 02, 2024 | Suhan S |

ಮೇಷ:  ಉದ್ಯಮದ  ಉತ್ಪನ್ನಗಳ ಮಾರಾಟ ಜಾಲದಲ್ಲಿ ಅವ್ಯವಸ್ಥೆ. ಸಕಾಲದಲ್ಲಿ  ಒದಗಿದ ಆಪ್ತರ ನೆರವು. ವ್ಯವಹಾರದ ನಿಮಿತ್ತ  ಸಣ್ಣ ಪ್ರಯಾಣ. ಊರಿನ ದೇವಾಲಯಕ್ಕೆ ಭೇಟಿ. ಗೃಹಿಣಿಯರ ಸ್ವಾವಲಂಬನೆ ಯೋಜನೆ ಮುನ್ನಡೆ.

Advertisement

 ವೃಷಭ: ನಿರುತ್ಸಾಹದಲ್ಲಿ  ದಿನಾರಂಭ. ಕೆಲಸ ಮಾಡಲು ಅನಾಸಕ್ತಿ. ಒಂದೇ ಉದ್ಯಮದ ಮೇಲೆ ಗಮನ ಹರಿಸಿದರೆ ಜಯ.  ದಿನದ ಉತ್ತರಾರ್ಧದಲ್ಲಿ  ಮಾನಸಿಕ ಚೇತರಿಕೆ. ಹೊಸ ಗ್ರಾಹಕರನ್ನು ಸೆಳೆಯಲು ಪ್ರಯತ್ನ.

ಮಿಥುನ:  ಹೊಸಬರ ಪರಿಚಯದಿಂದ ವ್ಯವಹಾರಕ್ಕೆ ಅನುಕೂಲ ಉದ್ಯೋಗ ಸ್ಥಾನದಲ್ಲಿ ಕ್ರಿಯಾಶೀಲತೆಗೆ ಅವಕಾಶಗಳು. ಸ್ವಂತ ಉದ್ಯಮದಲ್ಲಿ ನೌಕರರ ಸಮಸ್ಯೆ ಪರಿಹಾರ. ಕೃಷಿ ಕ್ಷೇತ್ರಕ್ಕೆ ಪ್ರವೇಶದಿಂದ ಅನುಕೂಲ.

ಕರ್ಕಾಟಕ: ಭಾರೀ ಲವಲವಿಕೆಯಲ್ಲಿ ದಿನಾರಂಭ. ಸಹೋದ್ಯೋಗಿಗಳೊಂದಿಗೆ ಸೌಹಾರ್ದಪೂರ್ಣ ನಡವಳಿಕೆ. ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಹಿರಿಯರು, ಮಹಿಳೆಯರು, ಮಕ್ಕಳಿಗೆ ಸಂಭ್ರಮ.

ಸಿಂಹ: ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಸರಕಾರಿ ಅಧಿಕಾರಿಗಳಿಗೆ ಅಧಿಕ ಕೆಲಸದ ಹೊರೆ. ಭೂ ವ್ಯವಹಾರದಲ್ಲಿ  ಲಾಭ. ಸರಕಾರಿ ಕಾರ್ಯಾಲಯದ ಕೆಲಸ ಸುಗಮ. ವ್ಯವಹಾರದ ನಿಮಿತ್ತ ಸಣ್ಣ ಪ್ರಯಾಣ ಸಂಭವ.

Advertisement

ಕನ್ಯಾ: ಸಾರ್ವಜನಿಕ ಸಂಪರ್ಕದಲ್ಲಿ ಒಳ್ಳೆಯ ಹೆಸರು. ಉದ್ಯಮದ ಉತ್ಪನ್ನಗಳ ಮಾರುಕಟ್ಟೆ ಜಾಲ ವಿಸ್ತರಣೆ. ಆಭರಣ ವ್ಯಾಪಾರಿಗಳಿಗೆ  ನಿರೀಕ್ಷೆಗಿಂತ ಅಧಿಕ ಲಾಭ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ.

ತುಲಾ:  ಪೂರ್ಣ  ದೈವಾನುಗ್ರಹದ ದಿನ. ಸರಕಾರಿ ನೌಕರರಿಗೆ  ಹೆಚ್ಚು ಕೆಲಸದ ಹೊರೆ. ಅಧ್ಯಾಪಕ ವೃತ್ತಿಯವರಿಗೆ ಹೆಚ್ಚಿನ ಜವಾಬ್ದಾರಿ. ಸಣ್ಣ ವ್ಯಾಪಾರಿಗಳಿಗೆ ನಿರೀಕ್ಷೆಗೆ ತಕ್ಕ ಲಾಭ. ಕೃಷ್ಯುತ್ಪನ್ನಗಳ ಮಾರಾಟದಿಂದ ಮಧ್ಯಮ ಲಾಭ.

ವೃಶ್ಚಿಕ: ಕರ್ಮದ ಫ‌ಲವನ್ನು  ಸಂತೋಷದಿಂದ ಸ್ವೀಕರಿಸಿ. ಪ್ರಾಪಂಚಿಕ ಸುಖದಲ್ಲಿ ಕೊರತೆ ಇಲ್ಲ. ಉದ್ಯೋಗದಲ್ಲಿ ಆನಂದ. ಉದ್ಯಮಿಗಳಿಗೆ ನೌಕರ ವರ್ಗದ ಸಹಕಾರ. ನ್ಯಾಯಾಲಯದಲ್ಲಿ ಜಯ. ಮನೆಯಲ್ಲಿ ಸಮಾಧಾನದ ವಾತಾವರಣ.

ಧನು: ಅಲ್ಪಾವಧಿಯಲ್ಲಿ ಲಾಭದ ನಿರೀಕ್ಷೆ ಬೇಡ. ಸಣ್ಣ ಉಳಿತಾಯ ಯೋಜನೆಯಲ್ಲಿ ಲಾಭ. ಉದ್ಯಮ ಕ್ಷೇತ್ರದಲ್ಲಿ ಪೈಪೋಟಿ. ನೂತನ ಆಸ್ತಿ ಖರೀದಿ-ಮಾರಾಟದಲ್ಲಿ ಲಾಭ. ಸಂಸಾರದಲ್ಲಿ ಸಾಮರಸ್ಯದ ವಾತಾವರಣ.

ಮಕರ: ಅನಿರೀಕ್ಷಿತ ಧನಲಾಭ. ಉದ್ಯೋಗ ಕ್ಷೇತ್ರದಲ್ಲಿ ಹೊಸ  ಅವಕಾಶ. ಹಿರಿಯರ ಆವಶ್ಯಕತೆಗಳನ್ನು ಗಮನಿಸಿ. ದೇವತಾರ್ಚನೆಯಲ್ಲಿ ಆಸಕ್ತಿ. ಸಂಗೀತ ಶ್ರವಣದಿಂದ ಮನಸ್ಸಿಗೆ ನೆಮ್ಮದಿ. ಮಹಿಳೆಯರ ಸ್ವೋದ್ಯೋಗ ಮುನ್ನಡೆಯಲ್ಲಿ.

ಕುಂಭ: ಸಂತೃಪ್ತಿ, ಸಮಾಧಾನದ ದಿನ.  ಉದ್ಯೋಗ ರಂಗದಲ್ಲಿ ಕಿರಿಯರಿಗೆ ಮಾರ್ಗದರ್ಶನ.   ಉದ್ಯಮದಲ್ಲಿ ಪ್ರಚಂಡ ಮುನ್ನಡೆ.ವಿದ್ಯುತ್‌ ಉಪಕರಣಗಳು, ಎಲೆಕ್ಟ್ರಾನಿಕ್‌ ಸಾಧನಗಳು ಮೊದಲಾದ ಸಾಮಗ್ರಿಗಳಿಗೆ ಅಧಿಕ ಬೇಡಿಕೆ.

ಮೀನ:  ವ್ಯವಹಾರಗಳಲ್ಲಿ ಉತ್ತಮ ಪ್ರತಿಫ‌ಲ. ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿ. ಸರಕಾರಿ ಅಧಿಕಾರಿಗಳು ಮತ್ತು ನೌಕರರಿಂದ ಸಹಕಾರ. ಸೇವಾ ಮಾದರಿಯ ಉದ್ಯೋಗಸ್ಥರಿಗೆ  ಅಧಿಕ ಯಶಸ್ಸು. ಸಂಗಾತಿ ಮತ್ತು ಮಕ್ಕಳ ಪೂರ್ಣ ಸಹಕಾರ. ಸಮಾಜದಲ್ಲಿ ಗೌರವ ವೃದ್ಧಿ  ಮನೆಯಲ್ಲಿ ನೆಮ್ಮದಿ.

Advertisement

Udayavani is now on Telegram. Click here to join our channel and stay updated with the latest news.

Next