Advertisement

Daily horoscope: ಈ ರಾಶಿಯ ಗೃಹಿಣಿಯರ ಆದಾಯ  ಹೆಚ್ಚಳವಾಗಲಿದೆ

07:18 AM Mar 24, 2024 | Suhan S |

ಮೇಷ:  ವಿರಾಮದ ದಿನವಾದರೂ  ಹಲವು ಬಗೆಯ ಒತ್ತಡಗಳು. ಗೃಹಕೃತ್ಯಗಳಿಗೆ ಅನಿವಾರ್ಯವಾಗಿ ಸಮಯ ನೀಡಿಕೆ. ಹತ್ತಿರದ ದೇವತಾ ಸಾನ್ನಿಧ್ಯಕ್ಕೆ ಭೇಟಿ. ಹಿರಿಯರಿಗೆ, ಗೃಹಿಣಿಯ ರಿಗೆ, ಮಕ್ಕಳಿಗೆ ಸಮಾಧಾನದ ದಿನ.

Advertisement

ವೃಷಭ: ವಿರಾಮ ಆಚರಣೆಯ ನಡುವೆ  ಹೊಸಬರ ಪರಿಚಯ. ಕುಟುಂಬದ ಹಿರಿಯ ಸದಸ್ಯರ ಭೇಟಿ. ಅನಾಥಾಶ್ರಮ, ವೃದ್ಧಾಶ್ರಮ ಗಳಿಗೆ ಭೇಟಿ. ದೂರದಲ್ಲಿರುವ ಬಂಧುಗಳ ಆಗಮನ.  ದೇವಾತಾ ದರ್ಶನ ಭಾಗ್ಯ.

ಮಿಥುನ:  ಮನೆಯಲ್ಲಿ ವಿರಾಮದ ಭಾವ. ಉದ್ಯೋಗಸ್ಥರಿಗೆ ಬಾಕಿಯುಳಿದಿರುವ ಕೆಲಸಗಳನ್ನು  ನಾಳೆ  ಮುಗಿಸುವ ಚಿಂತೆ. ವ್ಯವಹಾರಸ್ಥರಿಗೆ ನಿರಾಳ ಮನೋಭಾವ.  ಹಿರಿಯರಿಗೆ, ಗೃಹಿಣಿ ಯರಿಗೆ, ಮಕ್ಕಳಿಗೆ ಸಮಾಧಾನದ ವಾತಾವರಣ.

ಕರ್ಕಾಟಕ: ಉದ್ಯೋಗಸ್ಥರಿಗೆ ತಾತ್ಕಾಲಿಕ ನೆಮ್ಮದಿ.ವ್ಯವಹಾರ ಕ್ಷೇತ್ರದ ಮಿತ್ರರೊಂದಿಗೆ ಭೇಟಿ. ಉದ್ಯೋಗಾಸಕ್ತ  ಶಿಕ್ಷಿತರಿಗೆ ಅವಕಾಶಗಳು ಗೋಚರ. ಮಕ್ಕಳಿಗೆ ವ್ಯಾಸಂಗದಲ್ಲಿ ಸೂಕ್ತ ಮಾರ್ಗದರ್ಶನದ ಏರ್ಪಾಡು.

ಸಿಂಹ: ವ್ಯವಹಾರ  ಮತ್ತು ಕಾರ್ಯ ಸುಧಾರಣೆಯ  ಚಿಂತೆ. ನೂತನ ಗೃಹನಿರ್ಮಾಣ ಪ್ರಗತಿಯಲ್ಲಿ. ವೈದ್ಯರು, ಎಂಜಿನಿಯರರು  ಮೊದಲಾದ ವೃತ್ತಿಪರರಿಗೆ   ಕೆಲಸದ ಒತ್ತಡ.ಗೃಹಿಣಿಯರ ಆದಾಯ  ಹೆಚ್ಚಳ. ಮಕ್ಕಳಿಂದ ಪರೀಕ್ಷೆಗೆ ಸಿದ್ಧತೆ.

Advertisement

ಕನ್ಯಾ: ಎಲ್ಲರ ದೇಹಾರೋಗ್ಯ ಉತ್ತಮ. ಆಯ್ದ ವರ್ಗಗಳ ವ್ಯಾಪಾರಿಗಳಿಗೆ ಉತ್ತಮ ಲಾಭ. ಉದ್ಯೋಗ ಅರಸುತ್ತಿರುವವರಿಗೆ ಶುಭ ಸಮಾಚಾರ.  ಹೊಸ ರೀತಿಯ ಉದ್ಯಮದ ಕಲ್ಪನೆ ಸಾಕಾರ.ಗೃಹಿಣಿಯರು ಮತ್ತು ಮಕ್ಕಳಿಗೆ  ಸಂಭ್ರಮದ ದಿನ.

ತುಲಾ:  ದೃಢಸಂಕಲ್ಪದಲ್ಲಿ ಮುಂದುವರಿದರೆ ಜಯ ಖಚಿತ. ದೂರದ ಬಂಧುಗಳ ಕಡೆಯಿಂದ ಶುಭ ಸಮಾಚಾರ. ಲೇವಾದೇವಿ ವ್ಯವಹಾರದಲ್ಲಿ ಹಿನ್ನಡೆ. ಬೌದ್ಧಿಕ ಕಾರ್ಯ ಮಾಡುವವರ ಆರೋಗ್ಯದ ಬಗ್ಗೆ ಎಚ್ಚರ.

ವೃಶ್ಚಿಕ: ನೆಮ್ಮದಿಯ ಜೀವನಕ್ಕೆ ಕೊರತೆ ಯಾಗದು. ಮಹಿಳೆಯರಿಂದ ವಸ್ತ್ರಾಭರಣ ಖರೀದಿ.  ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಲಾಭ. ಹಿರಿಯರ ಆರೋಗ್ಯ ಸುಧಾರಣೆ. ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಸಾಂತ್ವನ.

ಧನು: ಗೃಹಸಂಬಂಧಿ ಕಾರ್ಯಗಳಲ್ಲಿ ತಲ್ಲೀನರಾಗುವಿರಿ. ಉದ್ಯಮಿಗಳಿಗೆ ತಾತ್ಕಾಲಿಕ ವಿರಾಮ. ಸಣ್ಣ ಪ್ರವಾಸದ ಸಾಧ್ಯತೆ. ಗೃಹಾಲಂಕಾರದ ಕೆಲಸಗಾರರಿಗೆ ಕೈತುಂಬಾ ಕೆಲಸ ಹಾಗೂ  ಸಂಪಾದನೆ. ಹಿರಿಯರ, ಮಕ್ಕಳ ಆರೋಗ್ಯ ಉತ್ತಮ.

ಮಕರ: ಸಾವಧಾನದಿಂದ ಮುಂದುವರಿದು ಕಾರ್ಯಸಿದ್ಧಿ. ಪಟ್ಟುಹಿಡಿದು ಕಾರ್ಯ ಸಾಧಿಸಿದ ತೃಪ್ತಿ. ಹಳೆಯ ಒಡನಾಡಿಯಿಂದ ಮತ್ತೂಂದು ಆದಾಯ ಮೂಲದ ಪರಿಚಯ. ಮಕ್ಕಳ ವ್ಯಾಸಂಗದಲ್ಲಿ ಮುನ್ನಡೆ.

ಕುಂಭ: ಹೊಸ ಅವಕಾಶಗಳ ಅನ್ವೇಷಣೆ. ಪರಿಸರ ನೈರ್ಮಲ್ಯ ಯೋಜನೆಗಳ ಅನುಷ್ಠಾನದ ನೇತೃತ್ವ. ಸಮಾಜದಲ್ಲಿ ಗೌರವ ಪ್ರಾಪ್ತಿ. ಮನೆಯಲ್ಲಿ ದೇವತಾರಾಧನೆಯ  ಸಂಭ್ರಮ. ಹಿರಿಯರಿಗೆ ಸ್ವಾವಲಂಬಿ ಬದುಕು.

ಮೀನ: ಕರ್ಮಕಾರಕನಾದ ಶನಿಯಿಂದ ಸತ್ಕರ್ಮಗಳಿಗೆ ಪ್ರೇರಣೆ.  ಗಳಿಕೆಯ ಮಾರ್ಗಗಳು ಸುಲಭದಲ್ಲಿ ಗೋಚರ. ಇಷ್ಟದೇವತಾರ್ಚನೆಯಿಂದ ಸಮಸ್ಯೆಗಳು ದೂರ. ಹಿರಿಯರ ಆರೋಗ್ಯ ಉತ್ತಮ. ಸಂಗಾತಿಯಿಂದ ವ್ಯವಹಾರದಲ್ಲಿ ಸಕ್ರಿಯ ಸಹಕಾರ. ಮಕ್ಕಳ ಶೈಕ್ಷಣಿಕ  ಪ್ರಗತಿ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next