Advertisement

Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆ ಕುದುರುವ ಸಾಧ್ಯತೆ

07:29 AM Mar 04, 2024 | Kavyashree |

ಮೇಷ: ಬಯಕೆಗಳು ಬಹುತೇಕ ಈಡೇರಬಹುದು. ಉದ್ಯೋಗ ಸ್ಥಾನದಲ್ಲಿ ಹೆಚ್ಚು ಪರಿಶ್ರಮ ಅನಿವಾರ್ಯ. ಹೊಸ ಹೂಡಿಕೆಗಳ ವಿಷಯದಲ್ಲಿ ಎಚ್ಚರ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ.

Advertisement

ವೃಷಭ: ಹೊಸ ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ. ಹೊಸ ಕೃಷಿ ಭೂಮಿಯಲ್ಲಿ ಕೆಲಸ ಆರಂಭ. ಸರಕಾರಿ ಅಧಿಕಾರಿಗಳಿಗೆ ದೂರದೂರಿಗೆ ವರ್ಗಾವಣೆಯ ಶಂಕೆ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣದ ಸಾಧ್ಯತೆ.

ಮಿಥುನ: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ. ಉದ್ಯೋಗ ಸ್ಥಾನದಲ್ಲಿ ತರಲೆ. ಹಿತಶತ್ರುಗಳ ಅಡ್ಡಗಾಲು. ಧ್ಯಾನ, ಸ್ವಾಧ್ಯಾಯಗಳಲ್ಲಿ ಮನಸ್ಸು ಲೀನ.ಉದ್ಯಮ ಅಭಿವೃದ್ಧಿಯ ಮೊದಲ ಹಂತ ಪ್ರಗತಿಯಲ್ಲಿ.

ಕರ್ಕಾಟಕ: ದೇವತಾರ್ಚನೆಯಿಂದ ಆನಂದಾನುಭೂತಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ. ಉದ್ಯಮದ ಅಭಿವೃದ್ಧಿಗೆ ಪಾಲುದಾರರ ಸಹಮತ. ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆ ಕುದುರುವ ಸಾಧ್ಯತೆ.

ಸಿಂಹ: ಸಹನೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೀರಿ. ಉದ್ಯಮದ ಎಲ್ಲ ವಿಭಾಗಗಳಲ್ಲೂ ಲಾಭದಾಯಕವಾಗಿ ಮುನ್ನಡೆ. ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಕೃಷ್ಯುತ್ಪನ್ನಗಳ ಮಾರಾಟದಿಂದ ಉತ್ತಮ ಲಾಭ.

Advertisement

ಕನ್ಯಾ: ಎಲ್ಲೆಡೆ ಹಿತಾನುಭವದ ದಿನ. ಮೇಲಿನವರಿಂದ ಮೆಚ್ಚುಗೆಯ ಮಾತುಗಳು. ಆಮಿಷಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಿ. ಸಣ್ಣ ಉದ್ಯಮಗಳಿಗೆ ಒಳ್ಳೆಯ ದಿನ. ಕೃಷಿಭೂಮಿ ಅಭಿವೃದ್ಧಿಗೆ ಕಾಲಮಿತಿಯ ಯೋಜನೆ.

ತುಲಾ: ಭವಿಷ್ಯದ ಕುರಿತು ಅನವಶ್ಯ ಚಿಂತೆ ಬೇಡ. ದೈವಾನುಗ್ರಹ ಉತ್ತಮ. ಉದ್ಯೋಗದಲ್ಲಿ ಸ್ವಲ್ಪ ಸುಧಾರಣೆ. ಉದ್ಯಮಿಗಳ ಸಮಸ್ಯೆ ಪರಿಹಾರ. ಉದ್ಯೋಗಾರ್ಥಿಗಳಿಗೆ ಶೀಘ್ರ ವ್ಯವಸ್ಥೆ. ಮಹಿಳೆಯರ ಸ್ವಾವಲಂಬನೆ ಯೋಜನೆಗಳ ಪ್ರಗತಿ.

ವೃಶ್ಚಿಕ: ಲಾಭ- ನಷ್ಟಗಳೆರಡೂ ವ್ಯವಹಾರದ ಸಾಮಾನ್ಯ ಭಾಗಗಳು. ಉದ್ಯೋಗದಲ್ಲಿ ಭಾರೀ ಉನ್ನತಿಯಾಗದಿದ್ದರೂ ಆವಶ್ಯಕತೆಗೆ ಬೇಕಾದಷ್ಟು ಆದಾಯಕ್ಕೆ ಕೊರತೆಯಾಗದು. ಮಕ್ಕಳ ಉದ್ಯಮ ಅಭಿವೃದ್ಧಿಯ ಪಥದಲ್ಲಿ.

ಧನು: ನಿಧಾನವಾಗಿ ಜೀವನಮಟ್ಟ ಸುಧಾರಣೆ. ಉದ್ಯೋಗದಲ್ಲಿ ಮುನ್ನಡೆಯಲು ಅನುಕೂಲ ಪರಿಸರ. ಸ್ವಂತ ಉದ್ಯಮದ ಕ್ರಮಾಗತ ಪ್ರಗತಿ. ದೀರ್ಘಾವಧಿ ಯೋಜನೆಗಳಲ್ಲಿ ಹೂಡಿಕೆಯಿಂದ ಲಾಭ. ನಿತ್ಯ ಚಟುವಟಿಕೆಗಳಿಂದ ಕಾರ್ಯಸಾಮರ್ಥ್ಯ ವೃದ್ಧಿ.

ಮಕರ: ಒತ್ತಡದ ವಾತಾವರಣದಲ್ಲಿ ಕ್ಲಪ್ತ ಸಮಯದಲ್ಲಿ ಕಾರ್ಯ ಮುಗಿಸಿದ ತೃಪ್ತಿ. ಅಧ್ಯಾತ್ಮ ಸಾಧನೆಯಲ್ಲಿ ಆಸಕ್ತಿ. ವಸ್ತ್ರ, ಉಡುಪು, ಅಲಂಕಾರ ಸಾಮಗ್ರಿ ವ್ಯಾಪಾರಿಗಳಿಗೆ ಅಧಿಕ ಲಾಭ. ಹತ್ತಿರದ ದೇವಾಲಯಕ್ಕೆ ಸಂದರ್ಶನ.

ಕುಂಭ: ಶೀಘ್ರ ಕಾರ್ಯಸಾಧನೆಯ ತೃಪ್ತಿ. ಉದ್ಯೋಗ, ವ್ಯವಹಾರಗಳ ಕುರಿತು ಆತಂಕ. ಮರುದಿನದ ಕಾರ್ಯಗಳಿಗೆ ಸಿದ್ಧತೆ. ಹಿರಿಯರ ಮನೆಯಲ್ಲಿ ಶುಭಕಾರ್ಯ. ಬಂಧು, ಮಿತ್ರರೊಂದಿಗೆ ಸಮಾಗಮ. ಸೇವಾ ಚಟುವಟಿಕೆಗಳಲ್ಲಿ ಪಾಲುಗೊಳ್ಳುವಿರಿ.

ಮೀನ: ಉದ್ಯೋಗದಲ್ಲಿ ಯಶಸ್ಸು. ಸರಕಾರಿ ನೌಕರರಿಗೆ ಕೊಂಚ ಕಿರಿಕಿರಿ. ಹಳೆಯ ಬಂಧುಗಳೊಂದಿಗೆ ಪುನರ್ಮಿಲನ. ಸೋದರಿಯ ಮಕ್ಕಳಿಗೆ, ಉದ್ಯೋಗ, ವಿವಾಹ ಯೋಗ. ಸಾಮಾಜಿಕ ಕಾರ್ಯಕ್ಕೆ ಮನೆಮಂದಿಯ ಉತ್ತೇಜನ. ಎಲ್ಲರ ಆರೋಗ್ಯ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next