Advertisement

Daily Horoscope: ಈ ರಾಶಿ ಅವರಿಗಿಂದು ಕೆಲಸ ಕಾರ್ಯಗಳಲ್ಲಿ ಸಾಹಸ ಪ್ರವೃತ್ತಿಯಿಂದ ಅಭಿವೃದ್ಧಿ

07:23 AM Jun 18, 2023 | Suhan S |

ಮೇಷ: ದೇವತಾನುಗ್ರಹದಿಂದ ಗೃಹದಲ್ಲಿ ಸಂತಸದ ವಾತಾವರಣ. ಆಸ್ತಿ ವಿಚಾರಗಳಲ್ಲಿ ಅಭಿವೃದ್ಧಿ. ನೂತನ ಬಂಧುಮಿತ್ರರ ಸಮಾಗಮ. ಅಧ್ಯಯನ ಪ್ರವೃತ್ತರಿಗೆ ಹೆಚ್ಚಿದ ಶ್ರಮ. ಕೆಲಸ ಕಾರ್ಯಗಳಲ್ಲಿ ಸಾಹಸ ಪ್ರವೃತ್ತಿಯಿಂದ ಅಭಿವೃದ್ಧಿ. ಗುರುಹಿರಿಯರ ಪ್ರೋತ್ಸಾಹ.

Advertisement

ವೃಷಭ: ವಿದೇಶ ಮೂಲದಿಂದ ಧನಾಗಮನ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಪ್ರಯಾಣ ಅಡಚಣೆಗಳ ನಿವಾರಣೆ. ಸ್ಥಾನ ಗೌರವಾದಿ ವಿಚಾರಗಳಲ್ಲಿ ಪ್ರಗತಿ. ದಾರ್ಮಿಕ ಕಾರ್ಯಗಳಿಗೆ ಧನವ್ಯಯ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫ‌ಲ.

ಮಿಥುನ: ವಿದ್ಯಾರ್ಜನೆಯಲ್ಲಿ ತಲ್ಲೀನತೆ. ಗುರುಹಿರಿಯರ ಸಹಕಾರ ಪ್ರೋತ್ಸಾಹದಿಂದ ಸ್ಥಾನ ಗೌರವಾದಿ ವೃದ್ಧಿ. ನಿರಂತರ ಧನಾರ್ಜನೆ. ಉದ್ಯೋಗ ವ್ಯವಹಾರಗಳಲ್ಲಿ ವಾಕ್‌ಚಾತುರ್ಯದಿಂದ ಪ್ರಗತಿ. ದಾಂಪತ್ಯ ಸುಖ ತೃಪ್ತಿದಾಯಕ. ಮಕ್ಕಳಿಂದ ಸಂತೋಷ.

ಕರ್ಕ: ಗೃಹೋಪಕರಣ ವಸ್ತುಗಳಿಗಾಗಿ ಧನವ್ಯಯ. ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ದೂರದ ವ್ಯವಹಾರಗಳಲ್ಲಿ ಪ್ರಗತಿ. ದಾಂಪತ್ಯ ತೃಪ್ತಿಕರ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗುವ ಸಮಯ. ಗುರುಹಿರಿಯರೊಂದಿಗೆ ಸಂಭ್ರಮದ ಕಾಲ ಕಳೆಯುವಿಕೆ.

ಸಿಂಹ: ದೀರ್ಘ‌ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮದಿಂದ ಪ್ರಗತಿ. ಹಣಕಾಸಿನ ವಿಚಾರದಲ್ಲಿ ಸಾಹಸ ಪ್ರವೃತ್ತಿ ಸಲ್ಲದು. ತಾಳ್ಮೆಯ ನಡೆಯಿಂದ ಸಫ‌ಲತೆ. ಗೃಹೋಪ ವಸ್ತುಗಳ ಸಂಗ್ರಹ. ಗುರುಹಿರಿಯರ ಆರೋಗ್ಯ ಗಮನಿಸಿ. ವಿದ್ಯಾರ್ಥಿಗಳಿಗೆ ಅನುಕೂಲ.

Advertisement

ಕನ್ಯಾ: ಆರೋಗ್ಯ ಗಮನಿಸಿ. ಅತಿಯಾದ ದೇಹಾಯಾಸವಿರುವ ಪ್ರವೃತ್ತಿ ಸಲ್ಲದು. ಹೆಚ್ಚಿದ ಜವಾಬ್ದಾರಿ. ಉದ್ಯೋಗ ವ್ಯವಹಾರಗಳಲ್ಲಿ ಗೌರವ ವೃದ್ಧಿ. ಉತ್ತಮ ಧನಾರ್ಜನೆ. ದಾಂಪತ್ಯ ತೃಪ್ತಿದಾಯಕ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಸಫ‌ಲತೆ.

ತುಲಾ: ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ. ಗೃಹೋಪಕರಣ ವಸ್ತುಗಳ ಸಂಗ್ರಹ. ದಾಂಪತ್ಯ ಸುಖ ಉತ್ತಮ. ಅವಿವಾಹಿತರಿಗೆ ವಿವಾಹ ಯೋಗ. ವಿದ್ಯಾರ್ಥಿಗಳಿಗೆ ಸವಲತ್ತುಗಳು ಲಭ್ಯ .ವಾಕ್‌ಚತುರತೆಯಿಂದ ಕೂಡಿದ ಕಾರ್ಯವೈಖರಿ. ಬಂಧುಮಿತ್ರರ ಸಮಾಗಮ.

ವೃಶ್ಚಿಕ: ದೈರ್ಯ ಶೌರ್ಯ ಉದಾರತೆಯಿಂದ ಕೂಡಿದ ಕಾರ್ಯ ವೈಖರಿ. ಜನಮನ್ನಣೆ. ಚುರುಕುತನದ ನಡವಳಿಕೆ. ವಿದ್ಯಾರ್ಥಿಗಳಿಗೆ ಶ್ರೇಯಸ್ಸು. ನಿರೀಕ್ಷಿತ ಧನ ಪ್ರಾಪ್ತಿ. ದಾಂಪತ್ಯ ಅನುರಾಗ ವೃದ್ಧಿ. ಅವಿವಾಹಿತರಿಗೆ ವಿವಾಹ ಭಾಗ್ಯ. ಉತ್ತಮ ಧನಾರ್ಜನೆ.

ಧನು: ಆರೋಗ್ಯ ಗಮನಿಸಿ. ಗುರುಹಿರಿಯರಲ್ಲಿ ಚರ್ಚೆಗೆ ಅವಕಾಶ ನೀಡದಿರಿ. ಪ್ರಯತ್ನಪೂರ್ವಕ ಕಾರ್ಯ ಸಾಧನೆ. ಉತ್ತಮ ಅಭಿವೃದ್ಧಿದಾಯಕ ಧನಾರ್ಜನೆ. ಬಂಧುಮಿತ್ರರ ಸಹಕಾರದಿಂದ ನೆಮ್ಮದಿ. ಅಧ್ಯಯನನಿರತರಿಗೆ ಅನುಕೂಲಕರ ಪರಿಸ್ಥಿತಿ.

ಮಕರ: ಆರೋಗ್ಯ ವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ಸಾಂಸಾರಿಕ ಅಭಿವೃದ್ಧಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಸಫ‌ಲತೆ. ಧನಾರ್ಜನೆಗೆ ಸಮವಾಗಿ ಧನ ವ್ಯಯ.

ಕುಂಭ: ನಿರಂತರ ಧನ ಸಂಚಯನ. ದೀರ್ಘ‌ ಪ್ರಯಾಣ. ಪರಊರ ವ್ಯವಹಾರಗಳಲ್ಲಿ ಅಭಿವೃದ್ಧಿದಾಯಕ ಪ್ರಗತಿ. ಸಂದರ್ಭೋಚಿತ ವಾಕ್‌ ಚತುರತೆಯಿಂದ ಕೂಡಿದ ಕಾರ್ಯವೈಖರಿ. ಸಾಂಸಾರಿಕ ಸುಖ ತೃಪ್ತಿದಾಯಕ. ವಿದ್ಯಾರ್ಥಿಗಳಿಗೆ ಹೆಚ್ಚಿದ ಶ್ರಮ.

ಮೀನ: ಆರೋಗ್ಯ ಗಮನಿಸಿ. ತಾಳ್ಮೆಯಿಂದ ವ್ಯವಹರಿಸಿ. ಆರ್ಥಿಕ ಸ್ಥಿತಿ ಸುದೃಢ. ಗೃಹ ವಾಹನ ಇತ್ಯಾದಿಗಳ ನಿಮಿತ್ತ ಧನವ್ಯಯ. ಸಾಂಸಾರಿಕ ಸುಖ ತೃಪ್ತಿದಾಯಕ. ಪರವೂರ ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಸ್ಥಾನಮಾನ ವೃದ್ಧಿ. ವಿದ್ಯಾರ್ಥಿಗಳಿಗೆ ಹೆಚ್ಚಿದ ಅವಕಾಶಗಳು.

Advertisement

Udayavani is now on Telegram. Click here to join our channel and stay updated with the latest news.

Next