Advertisement
ಮೇಷ: ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಕಾರ್ಯ ನಿರ್ವಹಿಸಿದರೆ ಯಶಸ್ಸು ನಿಮ್ಮದಾಗುವುದು. ಉದ್ಯೋಗದಲ್ಲಿ ಶ್ರಮ ಅಧಿಕ. ಧನಾರ್ಜನೆಗೆ ಕೊರತೆ ಇರದು. ಗೃಹೋಪಕರಣ ವಸ್ತು ಸಂಗ್ರಹದಲ್ಲಿ ಅನುಕೂಲ ಪರಿಸ್ಥಿತಿ.
Related Articles
Advertisement
ಸಿಂಹ: ದೈಹಿಕ, ಮಾನಸಿಕ ಒತ್ತಡವಿದ್ದರೂ ಸಹೋದರಾದಿಗಳಿಂದಲೂ, ಕಾರ್ಮಿಕ ವರ್ಗದವರಿಂದಲೂ ಸಹಾಯ ಲಭಿಸಿ ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಒದಗುವುದು. ಧನಾರ್ಜನೆಗೆ ಕೊರತೆ ಆಗದು.
ಕನ್ಯಾ: ಉತ್ತಮ ಧನಾರ್ಜನೆ ಇದ್ದರೂ ವಿಚಾರಿಸಿ ಕಾರ್ಯ ನಿರ್ವಹಿಸಿ. ದಾಕ್ಷಿಣ್ಯ ಪ್ರವೃತ್ತಿ ಸಲ್ಲದು. ಪಾಲುದಾರಿಕಾ ಕ್ಷೇತ್ರದಲ್ಲಿ ಬದಲಾವಣೆ. ವಿದ್ಯಾರ್ಥಿಗಳು, ದಂಪತಿಗಳು ಶ್ರಮವಹಿಸಿದರೆ ಉತ್ತಮ ಫಲ.
ತುಲಾ ಅವಿವಾಹಿತರಿಗೆ ಸೂಕ್ತ ಸಂಬಂಧ ಒದಗುವ ಸಮಯ. ರಾಜಕೀಯ ಕ್ಷೇತ್ರದವರಿಗೂ, ಸರಕಾರಿ ವರ್ಗದವರಿಗೂ ಅಭ್ಯುದಯ. ಅನಿರೀಕ್ಷಿತ ಧನಾಗಮ. ಅಧಿಕ ವ್ಯಯ. ಪರ್ವತಾದಿ ಬೆಟ್ಟಗಳಲ್ಲಿ ಸಂಚಾರಯೋಗ.
ವೃಶ್ಚಿಕ ನಿರೀಕ್ಷಿತ ಸ್ಥಾನ ಸುಖ. ಮೇಲಾಧಿಕಾರಿಗಳಿಂದ ಸಹಾಯ. ಉತ್ತಮ ಧನ ಸಂಪತ್ತು. ವಿದ್ಯಾರ್ಥಿಗಳಿಗೆ, ಅವಿವಾಹಿತರಿಗೆ ಅನುಕೂಲಕರ ಪರಿಸ್ಥಿತಿ. ಆಹಾರೋದ್ಯಮ, ಹೈನುಗಾರಿಕೆ ವ್ಯವಹಾರಸ್ಥರಿಗೆ ಅಭಿವೃದ್ಧಿ.
ಧನು: ಆರೋಗ್ಯ ಗಮನಿಸಿ. ನಿರೀಕ್ಷಿತ ಸಹಾಯ ಸಿಗದು. ಸ್ವಂತ ಪ್ರಯತ್ನದಲ್ಲಿ ವಿಶ್ವಾಸದಿಂದ ಕಾರ್ಯ ಸಾಧಿಸಿಕೊಳ್ಳಿ. ಮೇಲಾಧಿಕಾರಿಗಳ ಬಳಿ ಸಂಯಮದಿಂದಿರಿ. ಪಾಲುದಾರಿಕೆ ಕ್ಷೇತ್ರದವರು ತಾಳ್ಮೆ ಕಳೆದುಕೊಳ್ಳಬಾರದು.
ಮಕರ: ಮಾತೃ ಸಮಾನರ ಕಾರ್ಯನಿರ್ವಹಿಸಿದ ಸಮಾಧಾನ. ಧನಾರ್ಜನೆಗೆ ಸಮನಾದ ವ್ಯಯ. ನೇರ ಮಾತುಗಾರಿಕೆ ಸಲ್ಲದು. ಅಧ್ಯಯನ ಪ್ರವತ್ತರಿಗೆ ಅನುಕೂಲಕರ ಸಮಯ. ಉದ್ಯೋಗದಲ್ಲಿ ಅಧಿಕ ಜವಾಬ್ದಾರಿ.
ಕುಂಭ: ಬಂದ ಅವಕಾಶವನ್ನು ಉಪಯೋಗಿಸಿಕೊಳ್ಳಿ . ಆತುರತೆ ಸಲ್ಲದು. ಪ್ರಯಾಣದಿಂದ ಸಂತೃಪ್ತಿ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮ. ಆರೋಗ್ಯದಲ್ಲಿ ಗಮನವಿರಲಿ. ವ್ಯಾಪಾರ ವಹಿವಾಟಿನವರಿಗೆ ಉತ್ತಮ ದಿನ
ಮೀನ: ಮಕ್ಕಳ ಆರೋಗ್ಯದ ಕಡೆ ಗಮನಿಸಿ. ಪ್ರಯಾಣದಿಂದ ಲಾಭ. ವಿದ್ಯಾರ್ಥಿಗಳಿಗೆ ಅಧ್ಯಯನ ಶೀಲರಿಗೆ ಪರಿಶ್ರಮದಿಂದ ನಿರೀಕ್ಷಿತ ಸ್ಥಾನ ಸುಖ. ಧನಾರ್ಜನೆ ಉತ್ತಮವಿದ್ದರೂ ವಿಳಂಬವಾಗಿ ದೊರಕುವುದು.