Advertisement

ಇಂದಿನ ಗ್ರಹಬಲ: ಈ ರಾಶಿಯ ನಿರುದ್ಯೋಗಿಗಳು ಬಂದ ಅವಕಾಶವನ್ನು ಬಳಸಿಕೊಳ್ಳತಕ್ಕದ್ದು

08:03 AM Apr 07, 2021 | Team Udayavani |

07-04-2021

Advertisement

ಮೇಷ: ಎಷ್ಟು ಪ್ರಯತ್ನಪಟ್ಟರೂ ವಿಘ್ನದಿಂದಲೇ ನಿಮಗೆ ಯಶಸ್ಸು ದೊರಕುವುದು. ಕಾರ್ಯರಂಗದಲ್ಲಿ ಅತೀ ಉತ್ಸಾಹದಿಂದ ಕಾರ್ಯ ಕೈಗೊಂಡರೂ ನಿರೀಕ್ಷಿತ ಫ‌ಲವು ಬೇಗನೇ ದೊರಕದು. ಆದಾಯದ ಕೊರತೆ ಇಲ್ಲದಿದ್ದರೂ ಸಮಾಧಾನವಿರದು.

ವೃಷಭ: ಆದಾಯಕ್ಕೆ ಕೊರತೆ ಕಾಣಿಸಿದರೂ ಖರ್ಚು ವೆಚ್ಚ ಕಡಿಮೆಯಾಗದು. ಕ್ರೀಡಾಪಟುಗಳಿಗೆ ಸಂಕಟಗಳು ಎದುರಾಗಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾ ಪ್ರಗತಿ ಕಂಡುಬಂದೀತು. ಸಾಂಸಾರಿಕವಾಗಿ ಹಿರಿಯರ ಆರೋಗ್ಯದಲ್ಲಿ ಜಾಗ್ರತೆಯಾಗಿರಿ.

ಮಿಥುನ: ಪ್ರವಾಸಾದಿಗಳು ಕಂಡುಬಂದೀತು. ಸಾಂಸಾರಿಕವಾಗಿ ಆಪ್ತ ವರ್ಗದಲ್ಲಿ ಮನಸ್ತಾಪ ತಂದೀತು. ತಲೆ ಕೆಡಿಸದಿರಿ. ತನ್ನಿಂತಾನೇ ನಿವಾರಣೆಯಾಗಲಿದೆ. ವರ್ತಕ ವರ್ಗಕ್ಕೆ ಸ್ವಲ್ಪ ಬಿಡುವು ಕಂಡುಬರಲಿದೆ. ತಾಳ್ಮೆ ವಹಿಸುವುದು.

ಕರ್ಕ: ಅನಾವಶ್ಯಕವಾದ ಖರ್ಚುವೆಚ್ಚಗಳು ಕಂಡುಬಂದಾವು. ಆಗಾಗ ಕಾರ್ಯವೈಫ‌ಲ್ಯದ ಅನುಭವ ವಾದರೂ ತಾಳ್ಮೆ ಸಮಾಧಾನದಿಂದ ಮುಂದುವರಿಯುವುದು. ಸ್ವಲ್ಪ ಆರ್ಥಿಕ ಮುಗ್ಗಟ್ಟು ಕಂಡುಬಂದರೂ ನಿಭಾಯಿಸಬಹುದು.

Advertisement

ಸಿಂಹ: ವರಮಾನ ಇಲಾಖೆಯ ನೌಕರ ವರ್ಗಕ್ಕೆ ಹಣದ ಮುಗ್ಗಟ್ಟು ತೀವ್ರವೆನಿಸಲಿದೆ. ಸ್ವತಂತ್ರ ವೃತ್ತಿಯವರಿಗೆ ನಿರಂತರ ಆದಾಯವಿದ್ದರೂ ಋಣಭಾದೆ ತಪ್ಪದು. ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಸಮಾಧಾನದಿಂದಿರಿ.

ಕನ್ಯಾ: ಶೈಕ್ಷಣಿಕ ಕ್ಷೇತ್ರ, ನ್ಯಾಯಾಲಯದ ವೃತ್ತಿಯವರಿಗೆ ವಿಶೇಷ ಲಾಭದಾಯಕ ಆದಾಯವಿರುತ್ತದೆ. ಕೃಷಿ ಕ್ಷೇತ್ರದಲ್ಲಿ ಮುನ್ನಡೆ ತೋರಿಬರುವುದು. ವಿದ್ಯಾರ್ಥಿಗಳ ಪ್ರಯತ್ನಕ್ಕೆ ತಕ್ಕ ಫ‌ಲ ಸಿಗಲಿದೆ. ಮಂಗಲ ಕಾರ್ಯ ಸಿದ್ಧಿ.

ತುಲಾ: ಮಹಿಳೆಯರಿಗೆ ಸಾಂಸಾರಿಕವಾಗಿ ಸುಖ, ಸಮಾಧಾನವಿರುತ್ತದೆ. ಮಂಗಲ ಕಾರ್ಯದ ಚಿಂತನೆ ಕಾರ್ಯಗತವಾಗಿ ಸಂಭ್ರಮದ ವಾತಾವರಣವಿರುತ್ತದೆ. ವೃತ್ತಿರಂಗ ದಲ್ಲಿ ಸುಧಾರಿಸಿಕೊಂಡು ಹೋಗುವ ವಾತಾವರಣವಿರುತ್ತದೆ.

ವೃಶ್ಚಿಕ: ಅಗತ್ಯ ಕಾರ್ಯಗಳಲ್ಲಿ ವಿಳಂಬ ತೋರಿ ಬರುವುದು. ಗೃಹ ಸುಖ, ಶಾಂತಿ ತಕ್ಕಮಟ್ಟಿಗೆ ಕಂಡುಬರುವುದು. ಹಲವು ರೀತಿಯಲ್ಲಿ ಖರ್ಚುವೆಚ್ಚಗಳು ತೋರಿ ಬಂದರೂ ಆದಾಯದ ಮಾರ್ಗಗಳು ಸರಾಗವಾಗಿ ಗೋಚರಕ್ಕೆ ಬಂದಾವು.

ಧನು: ನಿರುದ್ಯೋಗಿಗಳು ಬಂದ ಅವಕಾಶವನ್ನು ಬಳಸಿಕೊಳ್ಳತಕ್ಕದ್ದು. ಅತೀ ಜಿಪುಣತನ ಬೇಡ. ಹಾಗೆಂದು ಅತೀ ಧಾರಾಳಿತನವು ಒಳ್ಳೆಯದಲ್ಲ. ಗೃಹದಲ್ಲಿ ಬಂಧುಗಳ ಆಗಮನವಿದ್ದೀತು. ನಿರುದ್ಯೋಗಿಗಳಿಗೆ ಉದ್ಯೋಗದ ಕಾಲ.

ಮಕರ: ಅವಿವಾಹಿತರು, ನಿರುದ್ಯೋಗಿಗಳು ಬಂದ ಅವಕಾಶಗಳನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಸಾಂಸಾರಿಕವಾಗಿ ಪತ್ನಿ, ಪುತ್ರರ ಸಹಕಾರ ಕಂಡುಬರಲಿದೆ. ಕಾರ್ಯಕ್ಷೇತ್ರದಲ್ಲಿ ಕಿರಿಕಿರಿ ಇದ್ದರೂ ಭಡ್ತಿಯ ಸೂಚನೆ ಇದ್ದೀತು.

ಕುಂಭ: ಹಿತೈಷಿಗಳ, ಹಿರಿಯರ ಮಾತಿಗೆ ಬೇಸರಿಸದಿರಿ. ಅದು ಮುಂದಕ್ಕೆ ಉಪಯೋಗಕ್ಕೆ ಬಂದೀತು. ನಿಮಗೀಗ ಸ್ವಲ್ಪ ಶಾಂತಿ, ಸಮಾಧಾನವು ಕಂಡುಬರಲಿದೆ. ಪತ್ನಿ, ಮಕ್ಕಳು ನಿಮ್ಮ ಮಾತಿಗೆ ಬೆಲೆ ನೀಡಿಯಾರು. ಶುಭವಿದೆ.

ಮೀನ: ಉದ್ಯೋಗರಂಗದಲ್ಲಿ ನಿಮ್ಮ ದುಡಿಮೆ, ಸಲಹೆ ಸೂಚನೆಗಳಿಗೆ ಭಂಗ ಬಂದೀತು. ವೈವಾಹಿಕ ಭಾಗ್ಯ ಯೋಗ್ಯ ವಯಸ್ಕರಿಗೆ ಮಾತ್ರ ತಂದು ಕೊಡಲಿದೆ. ಸಾಂಸಾರಿಕವಾಗಿ ತಂದೆತಾಯಿಯ ಕಷ್ಟವನ್ನು ಅರ್ಥ ಮಾಡಿಕೊಳ್ಳಿರಿ.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next