Advertisement

ಇಂದಿನ ಗ್ರಹಬಲ: ಈ ರಾಶಿಯ ನಿರುದ್ಯೋಗಿಗಳಿಗೆ ಇಂದು ಹಲವು ಅವಕಾಶಗಳು ಕೂಡಿ ಬರಲಿದೆ

08:07 AM Mar 01, 2021 | Team Udayavani |

1-03-2021

Advertisement

ಮೇಷ: ದಾಂಪತ್ಯ ಜೀವನದಲ್ಲಿ ಸ್ವಲ್ಪ ತಪ್ಪು ಅಭಿಪ್ರಾಯದಿಂದ ಕಂಟಕಗಳು ಎದುರಾಗಲಿದೆ. ಆದರೂ ಸಮಾಧಾನದಿಂದ ಆಲಿಸಿ ತಿಳಿ ಹೇಳಿದರೆ ಉತ್ತಮ. ಅರ್ಥೈಸಿಕೊಂಡರೆ ಬದುಕು ಹಸನಾಗಲಿದೆ. ಹಠಮಾರಿ ಸ್ವಭಾವ ಬೇಡ.

ವೃಷಭ: ನಿರೀಕ್ಷಿತ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆದರೂ ಕಿರಿಕಿರಿಯು ತಪ್ಪಲಾರದು. ಯಾವುದೇ ವಿಚಾರದಲ್ಲಿ ನಿರಾಶಾಭಾವ ತಾಳದಿರಿ. ಧನಾತ್ಮಕವಾಗಿ ಆಲೋಚಿಸಿರಿ. ಹಣಕಾಸಿನ ಸ್ಥಿತಿಯಲ್ಲಿ ಏರುಪೇರು ಕಂಡು ಬಂದರೆ ಎದೆಗುಂದದಿರಿ.

ಮಿಥುನ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲ ಸದ್ಯದ ಸ್ಥಿತಿಯಲ್ಲಿ ತೃಪ್ತಿದಾಯಕವಾಗಿರದು. ಕೌಟುಂಬಿಕವಾಗಿ ಬಂಧುಬಾಂಧವರ ಸಹಕಾರ ನಿಮಗಿದ್ದರೂ ಅದು ಸಾಲದು. ಆರೋಗ್ಯಕ್ಕಾಗಿ ಉತ್ತಮ ಆಹಾರ, ಸಮಯಪಾಲನೆ ಅಗತ್ಯ.

ಕರ್ಕ: ಉದ್ಯೋಗ ವ್ಯವಹಾರಗಳಿಗೆ ಸಂಬಂಧಿಸಿದ ವಿಚಾರದಲ್ಲಿ ತುಂಬಾ ಎಚ್ಚರ ವಹಿಸಿರಿ. ಕಾರ್ಯರಂಗದಲ್ಲಿ ಛಲ ಬಿಡದೆ. ಪಟ್ಟು ಹಿಡಿದು ಮುನ್ನಡೆಯಿರಿ. ನಿರೀಕ್ಷಿತ ಅಭಿವೃದ್ಧಿಯು ನಿಮಗೆ ನಿಶ್ಚಿತ ರೂಪದಲ್ಲಿ ಕಂಡು ಬರಲಿದೆ.

Advertisement

ಸಿಂಹ: ಸ್ತ್ರೀಯರ ವಿಚಾರದಲ್ಲಿ ಸಮಸ್ಯೆಗಳು ತೋರಿ ಬಾರದಂತೆ ಗಮನಹರಿಸಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷೆಯ ಫ‌ಲ ಸದ್ಯದ ಸ್ಥಿತಿಯಲ್ಲಿ ತೃಪ್ತಿದಾಯಕವಾಗಲಾರದು. ಒಳ್ಳೆಯದು ಕೆಟ್ಟದ್ದನ್ನು ನೀವು ಸಮಚಿತ್ತದಿಂದ ಸ್ವೀಕರಿಸಿರಿ.

ಕನ್ಯಾ: ವಿದ್ಯಾರ್ಥಿಗಳಿಗೆ ತುಂಬಾ ಉತ್ಸಾಹ ಕಂಡು ಬಂದೀತು. ನಿಮ್ಮ ಜೀವನದಲ್ಲಿ ಪ್ರಭಾವ ಬೀರಲಿರುವ ಹಲವು ಹೊಸ ಜನರ ಪರಿಚಯದಿಂದ ಲಾಭವಾಗಲಿದೆ. ವೃತ್ತಿರಂಗದಲ್ಲಿ ಸಮಾಧಾನ, ಮಾನಸಿಕ ದೃಢತೆ ಕಾಪಾಡಿರಿ.

ತುಲಾ: ಕುಟುಂಬದವರ ಹಿತನುಡಿ, ಸಹವರ್ತಿಗಳ, ಹಿರಿಯರ ಸಕಾಲಿಕ ಪ್ರೇರಣೆ ಇಂದು ನಿಮ್ಮನ್ನು ಕಾಪಾಡಲಿದೆ. ಆರೋಗ್ಯಭಾಗ್ಯವು ಕೊಂಚ ಏರುಪೇರಾಗುವ ಸಾಧ್ಯತೆ ಇರುತ್ತದೆ. ಹಣದ ಪರಿಸ್ಥಿತಿಯಲ್ಲಿ ಸುಧಾರಣೆ.

ವೃಶ್ಚಿಕ: ದೂರ ಸಂಚಾರದ ಸಿದ್ಧತೆ ಸಂತಸ ತರಲಿದೆ. ಜೀವನದಲ್ಲಿ ಮಹತ್ತರ ಬದಲಾವಣೆ ಹಂತದಲ್ಲಿ ನೀವೀಗ ಸಾಗುವಿರಿ. ಜೀವನವನ್ನು ಬಂದ ಹಾಗೆ ಎದುರಿಸುವುದನ್ನು ನೀವಿಗ ಕಲಿಯ ಬೇಕಾಗಿ ಬಂದೀತು.

ಧನು: ನಿಮ್ಮ ಕಣ್ಣೆದುರು ಕೆಲವು ಕೆಟ್ಟ ವಿಷಯಗಳು ಜರಗಿದರೂ ಕಣ್ಮುಚ್ಚಿ ಕೂರಬೇಕಾದೀತು. ನಿರುದ್ಯೋಗಿಗಳಿಗೆ ಹಲವು ಅವಕಾಶಗಳು ಕೂಡಿ ಬರಲಿದೆ. ಹಲವು ಖರ್ಚುವೆಚ್ಚಗಳು ಕಂಡು ಬಂದರೂ ಮಿತಿ ಇರಲಿ.

ಮಕರ: ನಿಮ್ಮ ಸ್ವಂತ ಯೋಗ್ಯತೆ ಹಾಗೂ ಪ್ರಯತ್ನ ಬಲದಿಂದ ಫ‌ಲಗಳು ಗೋಚರಕ್ಕೆ ಬರಲಿವೆ. ಕಾರ್ಯರಂಗದಲ್ಲಿ ಇತರರ ಅವಶ್ಯಕತೆ ನಿಮಗೆ ಕಂಡು ಬಾರದು. ಜಡೆಯನ್ನು ಕೊಡವಿ ಮೇಲೆದ್ದರೆ ಜಯ ಗಳಿಸುವಿರಿ.

ಕುಂಭ: ವೃತ್ತಿರಂಗದಲ್ಲಿ ದಿಟ್ಟ ನಿರ್ಧಾರಗಳು, ಅವಕಾಶಗಳಲ್ಲಿ ಶೀಘ್ರ ಸ್ಪಂದನ ಅವಶ್ಯಕವಾಗಿದೆ. ಪ್ರತಿ ಸ್ಫರ್ದಿಗಳು ನಿಮ್ಮ ವೈಫ‌ಲ್ಯವನ್ನು ಸದುಪಯೋಗಿಸಿ ಕೊಂಡಾರು. ಜಾಗ್ರತೆ ವಹಿಸಿರಿ. ಆಪ್ತ ವಲಯದಲ್ಲಿ ಸ್ಥಾನ ಸಿಗಲಿದೆ.

ಮೀನ: ಹತ್ತು ಹಲವನ್ನು ಹಂಬಲಿಸಿ ಮುನ್ನುಗ್ಗದಿರಿ. ತಾತ್ಕಾಲಿಕವಾಗಿ ಅದೃಷ್ಟದ ತೆರೆಗಳು ನಿಮಗೆ ಅನುಕೂಲವಾಗಿ ತೋರಿ ಬರುವುದು. ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷಿತ ಅಭಿವೃದ್ಧಿಯು ನಿಮ್ಮ ಮುನ್ನಡೆಗೆ ಸಾಧಕವಾಗಲಿದೆ.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next