Advertisement
ಮೇಷ: ವಿದ್ಯಾರ್ಥಿಗಳಿಗೆ ಮನಸ್ಸಿನ ಎಣಿಕೆಯಂತೆ ಯಶಸ್ಸಿದೆ. ಗುರುವಿನ ಪ್ರತಿಕೂಲತೆಯಿಂದ ವರ್ಗಾವಣೆಯ ಸಾಧ್ಯತೆ ಇರುತ್ತದೆ. ಸ್ಥಾನಭ್ರಂಶ ಯೋಗವಿದೆ. ಕಫ, ವಾತ ದೋಷದಿಂದ ಆರೋಗ್ಯ ಕೆಟ್ಟಿತು.
Related Articles
Advertisement
ಸಿಂಹ: ಕಾರ್ಯಕ್ಷೇತ್ರದಲ್ಲಿ ಸ್ಥಾನಮಾನವು, ಗೌರವೂ, ಪುರಸ್ಕಾರವೂ ತೋರಿಬರಲಿದೆ. ಕೆಲಸಕಾರ್ಯಗಳ ಒತ್ತಡದಿಂದ ಮನಸ್ಸಿನ ನೆಮ್ಮದಿ ಕೆಟ್ಟು ಹೋದೀತು. ದೇಹಾಯಾಸವು ತೋರಿಬಂದೀತು. ಧೈರ್ಯದಿಂದಿರಿ.
ಕನ್ಯಾ: ಉಗ್ರ ಕೋಪಿಗಳಾದರೂ ಸಮಾಧಾನಿಗಳಾಗುವರು. ಸಂಕುಚಿತ ಪ್ರವೃತ್ತಿಯವರಾದರೂ ಸಂದರ್ಭ ಬಂದಲ್ಲಿ ಯಾವ ತ್ಯಾಗಕ್ಕೂ ಸಿದ್ಧರು. ನಿಮ್ಮ ಮನಸ್ಸನ್ನು ಸ್ವತ್ಛವಾಗಿಟ್ಟುಕೊಳ್ಳಿರಿ. ಪ್ರಯಾಣ ಕಂಡುಬರಲಿದೆ.
ತುಲಾ: ಬಂದ ಅವಕಾಶವನ್ನು ಸದುಪಯೋಗಿಸಿ ಕೊಂಡಲ್ಲಿ ಹೆಚ್ಚಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳ ಬಹುದು. ಅತಿಯಾದ ಆಸೆಗಳನ್ನು ಇಟ್ಟುಕೊಳ್ಳದಿರಿ. ಅನಾವಶ್ಯಕ ಚಿಂತೆಯಿಂದ ಆರೋಗ್ಯದಲ್ಲಿ ಏರುಪೇರಾದೀತು.
ವೃಶ್ಚಿಕ: ಅಧಿಕಾರಿ ಜನರಿಂದ ಕಷ್ಟನಷ್ಟಗಳು, ಸ್ಥಾನಮಾನಗಳಿಗೆ ಹಾನಿಯಾದೀತು. ಹಿತಶತ್ರುಗಳಿಂದ ಭಾದೆ ತೋರಿಬರಲಿದೆ. ಪ್ರಯತ್ನಬಲದಿಂದಲೇ ಮುಂದುವರಿಯ ಬೇಕಾದೀತು. ಉದ್ಯೋಗ ದಲ್ಲಿ ಭಡ್ತಿ ಕಂಡುಬರಲಿದೆ.
ಧನು: ಸುಖದುಃಖ ಸಮಾನ ರೀತಿಯಲ್ಲಿರುತ್ತದೆ.ಆದರೂ ಪ್ರಯತ್ನಬಲದಿಂದ ಮುಂದುವರಿದು ಬಂದರೆಒಳ್ಳೆಯ ಫಲ ಪ್ರಾಪ್ತಿಯಾಗಲಿದೆ. ಪತ್ನಿಗೂ ಒಳ್ಳೆಯ ಕೆಲಸವು ಸಿಗಬಹುದು. ದ್ವಂದ್ವ ನೀತಿ ಬೇಡ.
ಮಕರ: ಗೃಹದಲ್ಲಿ ಸಂಭ್ರಮಕ್ಕಾಗಿ ಖರ್ಚುವೆಚ್ಚಗಳು ತೋರಿಬಂದಾವು. ಸಂತಾನಭಾಗ್ಯದ ಕುರುಹು ಕಂಡುಬರಲಿದೆ. ವೃಥಾ ತಿರುಗಾಟ ಬೇಡ. ಅಧಿಕ ಖರ್ಚು, ಆರೋಗ್ಯ ಹಾನಿಯಾದೀತು. ಎಚ್ಚರಿಕೆ ವಹಿಸುವುದು.
ಕುಂಭ: ದಾಕ್ಷಿಣ್ಯ ಪ್ರವೃತ್ತಿ ಇದ್ದರೂ ಕಠಿಣ ನಿರ್ಧಾರ ನಿಮ್ಮನ್ನು ಮುಂದು ಕೊಂಡೊಯ್ಯಲಿದೆ. ಸಾಮಾನ್ಯವಾಗಿ ಕೋಪಗೊಳ್ಳುವ ನೀವು ಅದನ್ನು ಹಿಡಿತದಲ್ಲಿಟ್ಟುಕೊಳ್ಳಿರಿ. ಅತೀ ನಿರೀಕ್ಷೆ ಮಾಡದಿರಿ. ಬೇಸರವಾದೀತು.
ಮೀನ: ಆರ್ಥಿಕವಾಗಿ ಹೆಚ್ಚಿನ ಕೊರತೆ ಇಲ್ಲದಿದ್ದರೂ ಅಧಿಕ ಖರ್ಚು ನಿಮಗೆ ದಿಗ್ಭ್ರಮೆ ಹುಟ್ಟಿಸಲಿದೆ. ಆರೋಗ್ಯ ಸ್ಥಿತಿಯಲ್ಲಿ ಏರುಪೇರುಯಿದೆ. ಮನೆಯ ಕೆಲಸಕಾರ್ಯಗಳಲ್ಲಿ ಅಡಚಣೆ ತೋರಿ ಬರುವುದು.
ಎನ್.ಎಸ್. ಭಟ್