Advertisement

ನಿಮ್ಮ ಗ್ರಹಬಲ: ಈ ರಾಶಿಯವರಿಂದು ನಿಮ್ಮ ದುಡುಕು ಬುದ್ಧಿಯನ್ನು ಹಿಡಿತದಲ್ಲಿಟ್ಟುಕೊಳ್ಳಿರಿ!

07:52 AM Jan 24, 2021 | Team Udayavani |

24-01-2021

Advertisement

ಮೇಷ: ಬಂಧುವರ್ಗದವರಿಂದ ಸಹಾಯ ಯಾಚನೆ ಕಂಡುಬರಲಿದೆ. ನಿಮಗೆ ಪ್ರಾಣ ಸಂಕಟ. ಇತ್ತಲಾಗಿ ಕೂಡಲೂ ಅಲ್ಲ ಬಿಡಲೂ ಅಲ್ಲ. ಅ ಕಾರಣವಾಗಿ ದ್ವೇಷದಿಂದ ಮಾನಸಿಕ ವ್ಯಥೆಯು ತಲೆದೋರೀತು.

ವೃಷಭ: ವೃತ್ತಿ ನಿರತರಿಗೆ ಸಂಪತ್ತು ಅಭಿವೃದ್ಧಿಯಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಣ್ಣಪುಟ್ಟ ಬದಲಾವಣೆ ಕಂಡುಬಂದರೂ ಸ್ಥಾನಮಾನಕ್ಕೆ ಕುಂದಿಲ್ಲ. ಉದ್ಯಮ ಕ್ಷೇತ್ರದಲ್ಲಿ ಋಣಭಾರ, ಸ್ಪರ್ಧಾತ್ಮಕ ಮನೋಭಾವ ಕಾಣಲಿದೆ.

ಮಿಥುನ: ಸಣ್ಣಪುಟ್ಟ ಅಡಚಣೆಯಿಂದಾಗಿ, ಕೈಗೊಂಡ ಕಾರ್ಯ ವಿಳಂಬವಾದೀತು. ಸಂತತಿ ಭಾಗ್ಯದಿಂದ ಸಂತಸವಾಗಲಿದೆ. ಚಿನ್ನಾಭರಣದ ಖರೀದಿ ನಡೆದೀತು. ಪಿತ್ತೋಷ್ಣ ಬಾಧೆಯು ಕಂಡು ಬರುವುದು.

ಕರ್ಕ: ಸಾತ್ವಿಕತೆ ಹಾಗೂ ನಿಮ್ಮ ಔದಾರ್ಯ ಗುಣಕ್ಕೆ ಪ್ರಶಂಸೆ ದೊರಕಲಿದೆ. ಆದರೂ ಖರ್ಚುವೆಚ್ಚವು ಅಧಿಕ ಕಂಡುಬರಲಿದೆ. ವಾಹನ ಖರೀದಿಗಿದು ಉತ್ತಮ ಕಾಲವಾಗಿದೆ. ಆರೋಗ್ಯದಲ್ಲಿ ಸುಧಾರಣೆ ಇದೆ.

Advertisement

ಸಿಂಹ: ಹಿರಿಯರೊಂದಿಗೆ ಗಹನವಾದ ಚರ್ಚೆ ನಡೆದೀತು. ನೀವು ನಿಮ್ಮನ್ನು ಹಲವು ಕಾರ್ಯಗಳಿಗೆ ತೊಡಗಿಸಿಕೊಂಡಿರುವುದರಿಂದ ವ್ಯವಧಾನವೇ ಇರದು. ಪ್ರತಿಭಾ ಪುರಸ್ಕಾರವು ದೊರಕಲಿದೆ. ಶುಭವಿದೆ.

ಕನ್ಯಾ: ನಿಮ್ಮ ದುಡುಕು ಬುದ್ಧಿಯನ್ನು ಹಿಡಿತದಲ್ಲಿಟ್ಟುಕೊಳ್ಳಿರಿ. ಸ್ಥಾನಮಾನಕ್ಕೆ ಚ್ಯುತಿ ಬಾರದು. ಸಹೋದ್ಯೋಗಿಗಳೊಂದಿಗೆ ಸಮಾಧಾನಚಿತ್ತದಿಂದಿರಿ. ವಿಶೇಷ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ಸಂತಸವಿದೆ.

ತುಲಾ: ಬ್ಯಾಂಕ್‌ ವ್ಯವಹಾರದಲ್ಲಿ ಅಭಿಮಾನ ಭಂಗವಾಗಲಿದೆ. ವ್ಯವಹಾರದಲ್ಲಿ ಅಭಿವೃದ್ಧಿ ಕಂಡು ಬಂದೀತು. ಇಚ್ಛಿತ ಸ್ಥಾನ ಪ್ರಾಪ್ತಿಯಿಂದ ವಂಚಿತರಾಗುವ ಭಯ. ಪ್ರಯಾಣ ಕಡಿಮೆ ಮಾಡಿರಿ. ಉದರ ಸಂಬಂಧಿ ತೊಂದರೆ ಬಂದೀತು.

ವೃಶ್ಚಿಕ: ವ್ಯಾಪಾರ, ವ್ಯವಹಾರದಲ್ಲಿ ಸಮೃದ್ಧಿಯ ಕಾಲವಿದು. ಇಷ್ಟಾರ್ಥ ಸಿದ್ಧಿಗಾಗಿ ದೇವರಲ್ಲಿ ಮೊರೆ ಹೋಗಿರಿ. ನವ ವಿವಾಹಿತರಿಗೆ ಪುತ್ರಪ್ರಾಪ್ತಿ ಕಾಲವಿದು. ತಂದೆ ಮಕ್ಕಳೊಳಗೆ ಪ್ರೀತಿ ವಿಶ್ವಾಸ ಹೆಚ್ಚಲಿದೆ.

ಧನು: ಕೌಟುಂಬಿಕವಾಗಿ ಎಲ್ಲರ ವಿಶ್ವಾಸ ಗಳಿಸುವಿರಿ. ನೆಮ್ಮದಿ ಕಡಿಮೆಯಾದೀತು. ತಾಳ್ಮೆ ವಹಿಸಿರಿ. ಪ್ರೀತಿ ವಿಶ್ವಾಸದಿಂದ ಎಲ್ಲರೊಂದಿಗೆ ವ್ಯವಹರಿಸಿರಿ. ಧನಾತ್ಮಕ ಚಿಂತನೆಗಳು ಕೈಗೂಡಲಿದೆ. ಸಹನೆ ಬೇಕು.

ಮಕರ: ಋಣಭಾರದಿಂದ ಮುಗ್ಗರಿಸದಿರಿ. ಗೃಹ, ನಿವೇಶನ ಖರೀದಿಗಾಗಿ ಖರ್ಚು ಬರಲಿದೆ. ಕುಟುಂಬದಲ್ಲಿ ಕಲಹ, ವ್ಯರ್ಥ ಕಾಲಹರಣ ಮಾಡದಿರಿ. ಕಮಿಶನ್‌ ವೃತ್ತಿಯವರಿಗೆ ಆದಾಯದ ವರ್ಧನೆಯಿದೆ.

ಕುಂಭ: ಕಟ್ಟಡ ರಚನೆ ಹಾಗೂ ಅದರ ಸಾಮಾಗ್ರಿಗಳ ವ್ಯವಹಾರದವರಿಗೆ ಆದಾಯದ ವೃದ್ಧಿ ಕಾಣಿಸಲಿದೆ. ಸಂಶೋಧನಾ ಪ್ರವೃತ್ತಿಗಳಲ್ಲಿ ಜನಪ್ರಿಯತೆ ಮನ್ನಣೆ ಗಳಿಸಲಿದ್ದೀರಿ. ಗೃಹದಲ್ಲಿ ಸಂತೋಷಕೂಟವಿದ್ದೀತು.

ಮೀನ: ವೇತನ ಪರಿಷ್ಕರಣೆಗೆ ಕಾರ್ಯವಿಳಂಬ ವಾಗಲಿದೆ. ವ್ಯವಹಾರ ಯಾ ಕಾರ್ಯಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಇರುವುದು. ಆದರೂ ಹಣ ಕೈಗೆ ಬರದು. ಆಸ್ತಿ ವಿಚಾರದಲ್ಲಿ ಸಹೋದರರೊಳಗೆ ಕಲಹ ಕಂಡೀತು.

 

ಎನ್.ಎಸ್. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next