Advertisement
ಮೇಷ: ಸಾಂಸಾರಿಕವಾಗಿ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಗಮನಹರಿಸಬೇಕಾಗುತ್ತದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳ ಚಟುವಟಿಕೆಯಿಂದ ಸಂಭ್ರಮಿಸುವಂತಾದೀತು. ದಿನಾಂತ್ಯ ಕಿರು ಸಂಚಾರ ಯೋಗ.
Related Articles
Advertisement
ಸಿಂಹ: ಅನೇಕ ರೀತಿಯಲ್ಲಿ ಕಿರಿಕಿರಿಗಳು ತೋರಿಬಂದರೂ ನಿಮ್ಮ ತಾಳ್ಮೆ ಸಮಾಧಾನಗಳು ನಿಮಗೆ ಪೂರಕವಾಗುತ್ತದೆ. ಆರ್ಥಿಕವಾಗಿ ಸಮತೋಲನವನ್ನು ಕಾಯ್ದುಕೊಳ್ಳುವ ಪರಿಸ್ಥಿತಿಯು ನಿಮ್ಮದಾದೀತು. ವಿದ್ಯಾರ್ಥಿಗಳಿಗೆ ಅದೃಷ್ಟವಿದೆ.
ಕನ್ಯಾ: ವೃತ್ತಿಯಲ್ಲಿ ಆಗಾಗ ತೋರಿಬರುವ ಅಡೆತಡೆಗಳನ್ನು ಸರಿದಾರಿಗೆ ತರಬೇಕಾದೀತು. ವ್ಯಾಪಾರ, ವ್ಯವಹಾರಗಳ ಯಾವುದೇ ಒಪ್ಪಂದ, ಲೆಕ್ಕಪತ್ರಗಳ ಹೆಚ್ಚಿನ ಜಾಗ್ರತೆ ಮಾಡಿರಿ. ತಪ್ಪುಗಳು ಘಟಿಸದಂತೆ ಇರುವುದು.
ತುಲಾ: ಆರ್ಥಿಕ ಲಾಭವನ್ನು ಮಾನಸಿಕ ಸಮಾಧಾನ ವನ್ನು ಭಂಗ ಮಾಡಲಿದ್ದಾನೆ. ತಾಳ್ಮೆ ಸಮಾಧಾನದಿಂದ ಮುಂದುವರಿಯಿರಿ. ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗ ಲಾಭವಿದೆ. ಅವಿವಾಹಿತರಿಗೆ ಯೋಗ್ಯ ಸಂಬಂಧ ಬಂದೀತು.
ವೃಶ್ಚಿಕ: ಹೆಚ್ಚಿನ ಗ್ರಹಗಳ ಪತ್ರಿಕೂಲತೆ ಆಗಾಗ ತೋರಿ ಬಂದು ಮಾನಸಿಕ ಕಿರಿಕಿರಿ, ವ್ಯಾಪಾರ, ವ್ಯವಹಾರದಲ್ಲಿ ಏರುಪೇರು ಅನಿರೀಕ್ಷಿತ ರೂಪದಲ್ಲಿ ಕಂಡುಬಂದೀತು. ಅಧಿಕ ರೂಪದ ಖರ್ಚುವೆಚ್ಚಗಳಿಂದ ನಿಮಗೆ ಆತಂಕ ಬಂದೀತು.
ಧನು: ಸಾಂಸಾರಿಕ ಜೀವನವನ್ನು ಆದಷ್ಟು ತಾಳ್ಮೆ- ಸಮಾಧಾನಗಳಿಂದ ನಡೆಸಿಕೊಂಡು ಹೋಗಬೇಕಾದೀತು. ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಯಶಸ್ಸು ಸಾಧ್ಯವಿದ್ದರೂ ಅಧಿಕ ರೂಪದಲ್ಲಿ ಧನವ್ಯಯ ಕಂಡೀತು. ಶುಭವಿದೆ.
ಮಕರ: ಮಿಶ್ರಫಲಗಳಿಂದ ಶುಭ-ಅಶುಭ ಫಲಗಳನ್ನು ಹೊಂದಲಿದ್ದೀರಿ. ಕಾರ್ಯ ಕ್ಷೇತ್ರದ ಜಂಜಾಟದಿಂದ ದೂರವಿದ್ದಷ್ಟೂ ಉತ್ತಮ. ಅನಾವಶ್ಯಕವಾಗಿ ಅವಮಾನ ಪ್ರಸಂಗಗಳನ್ನು ಅನುಭವಿಸುವಿರಿ. ಬೇಸರಿಸದಿರಿ.
ಕುಂಭ: ಚಿಕ್ಕಪುಟ್ಟ ಸಮಸ್ಯೆಗಳು ಅನಾವಶ್ಯಕವಾಗಿ ಮಾನಸಿಕ ಅಸ್ಥಿರತೆ, ಉದ್ವೇಗ, ಕೋಪ-ತಾಪಗಳು ಹೆಚ್ಚಿಸಲಿವೆ. ಸಾಂಸಾರಿಕವಾಗಿ ಕಿರಿಕಿರಿಗಳು ಒಮ್ಮೊಮ್ಮೆ ಎಲ್ಲಾ ಬಿಟ್ಟು ಓಡಿ ಹೋಗೋಣ ಎಂಬಷ್ಟು ರಗಳೆಗಳನ್ನು ಸೃಷ್ಟಿಸಲಿದೆ.
ಮೀನ: ಗೃಹದಲ್ಲಿ ಸಾಂಸಾರಿಕವಾಗಿ ಹಾಗೂ ಕೌಟುಂಬಿಕವಾಗಿ ಶಾಂತಿ, ಸಮಾಧಾನ, ಸೌಹಾರ್ದಗಳೆಲ್ಲಾ ಸಾಧ್ಯವಿದೆ. ವಿದ್ಯಾರ್ಥಿವರ್ಗದವರಿಗೆ ಉದಾಸೀನತೆ ತೋರಿಬಂದರೂ ಮುನ್ನಡೆಗೆ ಅಭ್ಯಾಸಬಲ, ಪ್ರಯತ್ನ ಹಾಗೂ ಆತ್ಮವಿಶ್ವಾಸದ ಅಗತ್ಯವಿದೆ.
ಎನ್.ಎಸ್. ಭಟ್