Advertisement

35 ದಿನಗಳ ಕಾತರಕ್ಕೆ ಇಂದು ಸ್ಪಷ್ಟ ಉತ್ತರ

01:49 AM May 23, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಸಂಸದರು ಯಾರಾಗಬೇಕು ಎಂಬುದಕ್ಕೆ ಮತ ದಾರರ ನೀಡಿರುವ ತೀರ್ಪು ಗುರುವಾರ ಪ್ರಕಟಗೊಳ್ಳ ಲಿದ್ದು, 35 ದಿನಗಳಿಂದ ಎದುರಾಗಿದ್ದ ರಾಜಕೀಯ ಲೆಕ್ಕಾಚಾರಗಳಿಗೆ ಸ್ಪಷ್ಟ ಉತ್ತರ ದೊರೆಯಲಿದೆ.

Advertisement

ಕ್ಷೇತ್ರದಲ್ಲಿ ಈ ಬಾರಿ ಒಟ್ಟು 13 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಎ.18ರಂದು ಮತದಾನ ನಡೆದಿತ್ತು. ಕ್ಷೇತ್ರದಲ್ಲಿ 13,43,378 ಮಂದಿ ಮತ ಚಲಾಯಿಸಿ ಶೇ.79.90ರಷ್ಟು ಮತದಾನ ದಾಖಲಾಗಿತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲೇ ಮೊದಲು ಫಲಿತಾಂಶ ಹೊರಬಿದ್ದ ಕ್ಷೇತ್ರ ದಕ್ಷಿಣ ಕನ್ನಡವಾಗಿತ್ತು. ಆದರೆ ಈ ಸಲ ಐದು ವಿವಿಪ್ಯಾಟ್ ಪೇಪರ್‌ ಸ್ಲಿಪ್‌ಗ್ಳ ಎಣಿಕೆಯನ್ನು ತಾಳೆ ಮಾಡಲಾಗುತ್ತದೆ. ಈ ಕಾರಣಕ್ಕೆ ಈ ಬಾರಿ ಫಲಿತಾಂಶ ಘೋಷಣೆಯಲ್ಲಿ ಭಾರೀ ವಿಳಂಬವಾಗುವ ಸಾಧ್ಯತೆಯಿದೆ.

ಸರ್ವ ಸಿದ್ಧತೆ

ಸುರತ್ಕಲ್ ಎನ್‌ಐಟಿಕೆಯ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆಗೆ ಸರ್ವ ಸಿದ್ಧತೆಯನ್ನು ಜಿಲ್ಲಾಡಳಿತ ಮಾಡಿದೆ. 15ರಿಂದ 18 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಮತಎಣಿಕೆಗೆ ತಲಾ 14 ಟೇಬಲ್ಗಳಂತೆ ಒಟ್ಟು 112 ಟೇಬಲ್ಗಳನ್ನು ಅಳವಡಿಸಲಾಗಿದೆ. ಮತ ಎಣಿಕೆ ಉಸ್ತುವಾರಿಗಳು, ಎಣಿಕೆ ಸಹಾಯಕರು, ಮೈಕ್ರೊ ವೀಕ್ಷಕರು ಸೇರಿದಂತೆ 560 ಸಿಬಂದಿಯಿದ್ದಾರೆ.

ಮೂರು ಹಂತಗಳಲ್ಲಿ ತಪಾಸಣೆ

Advertisement

ಮತ ಎಣಿಕೆ ಕೇಂದ್ರ ಪ್ರವೇಶಕ್ಕೆ ಮೂರು ಹಂತಗಳ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಮತ ಎಣಿಕೆ ಕೇಂದ್ರಕ್ಕೆ ಗರಿಷ್ಠ ಭದ್ರತೆ ನೀಡಲು ಹೆದ್ದಾರಿ ಸಂಚಾರದಲ್ಲಿ ಆಮೂಲಾಗ್ರ ಬದಲಾವಣೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next