Advertisement
ಬಿಳಿಗಿರಿರಂಗನಾಥಸ್ವಾಮಿ ದೇಗುಲ: ಖಗ್ರಾಸ ಸೂರ್ಯಗ್ರಹಣದ ನಿಮಿತ್ತ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಪ್ರಸಿದ್ಧ ಪೌರಾಣಿಕ ಬಿಳಿಗಿರಿರಂಗನಾಥಸ್ವಾಮಿ ದೇಗುಲ ಸೇರಿದಂತೆ ಪ್ರಮುಖ ದೇಗುಲಗಳಲ್ಲಿ ದೇವರ ದರ್ಶನ ಇರುವುದಿಲ್ಲ. ಬೆಳಗಿನ ಜಾವ ಧನುರ್ಮಾಸದ ಪೂಜೆ ಎಂದಿನಂತೆ ಇರಲಿದೆ. ಮುಂಜಾನೆ 5 ಗಂಟೆಯಿಂದಲೇ ಪೂಜೆಗಳು ಎಂದಿನಂತೆ ಇರಲಿದ್ದು 5.30 ನಂತರ ದೇಗುಲದ ಬಾಗಿಲು ಹಾಕಲಾಗುವುದು. ನಂತರ, ಮಧ್ಯಾಹ್ನ ಒಂದು ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಿದೆ ಎಂದು ದೇಗುಲದ ಮೂಲಗಳು ತಿಳಿಸಿವೆ.
ಉಡುಪಿ: ಕಂಕಣ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಡಿ.26ರಂದು ಉಡುಪಿ ಶ್ರೀಕೃಷ್ಣಮಠದಲ್ಲಿ ಪೂಜಾವೇಳೆಯಲ್ಲಿ ಬದಲಾವಣೆ ಮಾಡಲಾಗಿದೆ. ಅಂದು ಬೆಳಗ್ಗೆ ಧನುರ್ಮಾಸ ಪೂಜೆ ಎಂದಿನಂತೆ ನಡೆಯಲಿದೆ. ಗ್ರಹಣ ಮೋಕ್ಷದ ಬಳಿಕ 11 ಗಂಟೆಯ ಬಳಿಕ ಪಂಚಾಮೃತ ಅಭಿಷೇಕ, ಮಹಾಪೂಜೆ ನಡೆಯಲಿದೆ. ಆ ಬಳಿಕವಷ್ಟೇ ಭಕ್ತಾದಿಗಳಿಗೆ ಪ್ರಸಾದ ಭೋಜನ ನೀಡಲಾಗುವುದು ಎಂದು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಿಳಿಸಿದ್ದಾರೆ. ಶೃಂಗೇರಿಯಲ್ಲಿ ಭಕ್ತಾದಿಗಳ ಸೇವೆಗೆ ಅವಕಾಶವಿಲ್ಲ
ಶೃಂಗೇರಿ: ದಕ್ಷಿಣಾಮ್ನಾಯ ಶಾರದಾ ಪೀಠದ ಶ್ರೀ ಶಾರದಾಂಬಾ ಸನ್ನಿಧಿಯಲ್ಲಿ ಗುರುವಾರ ಪೂಜಾ ಕಾರ್ಯಗಳು ಎಂದಿನಂತೆ ನಡೆಯಲಿವೆ. ಸುಪ್ರಭಾತ ಪೂಜೆ ಸಹಿತ ದಿನನಿತ್ಯದ ಪೂಜೆಗಳು ನಡೆಯಲಿದ್ದು, ಗ್ರಹಣ ಕಾಲದಲ್ಲಿ ಭಕ್ತಾದಿಗಳ ಸೇವೆಗೆ ಅವಕಾಶವಿಲ್ಲ. ಗ್ರಹಣ ಮೋಕ್ಷದ ನಂತರ ದೇವಾಲಯ ಶುದ್ದೀಕರಿಸಿ, ಮತ್ತೆ ಪೂಜಾ ಕಾರ್ಯಗಳನ್ನು ನಡೆಸಲಾಗುತ್ತದೆ. ಗ್ರಹಣದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಡಿ.26ರ ಮಧ್ಯಾಹ್ನದ ಪ್ರಸಾದ ಸೇವೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.