Advertisement

ಇಂದಿನ ಸಾಧನೆಯೇ ಮುಂದಿನ ಯಶಸ್ಸಿನ ಗುಟ್ಟು: ಶಾಂತಾರಾಮ್‌ ಪ್ರಭು

07:25 AM Aug 22, 2017 | Harsha Rao |

ಕಾಪು : ಸತತ ಪರಿಶ್ರಮ ಮತ್ತು ಸಾಧನೆಯ ಛಲವೇ ವಿದ್ಯಾರ್ಥಿಗಳ ಯಶಸ್ಸಿನ ಮೂಲವಾಗಿದೆ. ಇಂದಿನ ಸಾಧನೆಯೇ ಮುಂದಿನ ಯಶಸ್ಸಿನ ಗುಟ್ಟು. ನಮ್ಮ ಹಿರಿಯರ ಪ್ರಾರ್ಥನೆ, ಆಶೀರ್ವಾದ ಹರಕೆಯ ಫಲದಿಂದಾಗಿ ನಮಗೆ ಇಂದಿನ ಸ್ಥಾನಮಾನ ಗೌರವಗಳು ಪ್ರಾಪ್ತಿಯಾಗುತ್ತಿವೆ ಎಂದು ನಿವೃತ್ತ ಪ್ರಾಂಶುಪಾಲ ಹೊಸನಗರ ನಿಟ್ಟೂರು ಡಾ| ಪಿ. ಶಾಂತಾರಾಮ ಪ್ರಭು ಹೇಳಿದರು.

Advertisement

ಬಂಟಕಲ್ಲು  ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಆ. 21ರಂದು ರಾಜಾಪುರ ಸಾರಸ್ವತ ಯುವ ವೃಂದದ ವತಿಯಿಂದ ಸಮಾಜ ಸಂಘಟನೆ, ಲೋಕ ಕಲ್ಯಾಣಾರ್ಥ ಏರ್ಪಡಿಸಿದ 21ನೇ ವರ್ಷದ ಸಾಮೂಹಿಕ ದುರ್ಗಾ ಹೋಮ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಗಣಪತಿ ನಾಯಕ್‌ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಪ್ರೊ| ಉಮಾವನಿತಾ ನಾಯಕ್‌, ಬಂಟಕಲ್ಲು ಮಣಿಪಾಲ ಆರ್‌ಎಸ್‌ಬಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌. ಪಾಂಡುರಂಗ ಕಾಮತ್‌ ಎಳ್ಳಾರೆ ಮುಖ್ಯ ಅತಿಥಿಗಳಾಗಿದ್ದರು.

ಭಾರತ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವಿಠಲ ನಾಯಕ್‌ ಬೆಳ್ಳೆ, ವಿಷ್ಣುಮೂರ್ತಿ ನಾಯಕ್‌ ಮುಟ್ಟಿಕಲ್ಲು, ದೇವದಾಸ್‌ ಸಾಲ್ವಣ್‌ಕಾರ್‌ ಶಿರ್ವ, ವಯೋ ನಿವೃತ್ತಿ ಹೊಂದಿದ ಹಿರಿಯ ಶಿಕ್ಷಕ ಬಿ. ಪುಂಡಲೀಕ ಮರಾಠೆ ಇವರನ್ನು ಸಮ್ಮಾನಿಸಲಾಯಿತು.

ಎಸ್‌. ಎಸ್‌. ಎಲ್‌. ಸಿ, ಮತ್ತು ಪಿ. ಯು. ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಯುವ ಸಾಧಕ ಕರ್ವಾಲು ರಾಘವೇಂದ್ರ ಪ್ರಭು ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಯುವ ವೃಂದದ ಗೌರವಾಧ್ಯಕ್ಷ ಕೆ. ಆರ್‌. ಪಾಟ್ಕರ್‌ ಪ್ರಸ್ತಾವನೆಗೈದರು. ಕಾರ್ಕಳ ಎಸ್‌ವಿಟಿ ಪ. ಪೂ. ಕಾಲೇಜಿನ ಪ್ರಾಚಾರ್ಯ ರಾಮದಾಸ್‌ ಪ್ರಭು ಸಮ್ಮಾನಪತ್ರ ವಾಚಿಸಿದರು. ಯುವ ವೃಂದದ ಅಧ್ಯಕ್ಷ ಸಂಜಯ್‌ ಆರ್‌. ನಾಯಕ್‌ ಸ್ವಾಗತಿಸಿದರು. ಉಮೇಶ ಪಾಟ್ಕರ್‌,ರûಾ ಆರ್‌ ಪ್ರಭು ಪರಿಚಯಿಸಿದರು. ಕಾರ್ಯದರ್ಶಿ ಆದರ್ಶ ಪಾಟ್ಕರ್‌ ವಂದಿಸಿದರು. ಶಿಕ್ಷಕ ದೇವದಾಸ್‌ ಪಾಟ್ಕರ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next