Advertisement
ಪೌರಾಡಳಿತ ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಅವರ ಹಠಾತ್ ನಿಧನದಿಂದ ಕುಂದಗೋಳ ವಿಧಾನಸಭಾ ಕ್ಷೇತ್ರ ತೆರವುಗೊಂಡಿದ್ದರೆ, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಶಾಸಕ ಡಾ.ಉಮೇಶ್ ಜಾಧವ್ ಬಿಜೆಪಿ ಸೇರಿದ್ದರಿಂದ ಚಿಂಚೋಳಿ ಕ್ಷೇತ್ರ ತೆರವುಗೊಂಡಿತ್ತು.
Related Articles
Advertisement
ಸಾವಿರ ಚುನಾವಣಾ ಸಿಬ್ಬಂದಿ ನಿಯೋಜನೆ: ಚಿಂಚೋಳಿಯಲ್ಲಿ 265 ಮತಗಟ್ಟೆ ಸಿಬ್ಬಂದಿ, 276 ಪೊಲೀಸ್ ಸಿಬ್ಬಂದಿ, 29 ಸಾರಿಗೆ ಸಿಬ್ಬಂದಿ ಸೇರಿದಂತೆ 570 ಚುನಾವಣಾ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅದೇ ರೀತಿ, ಕುಂದಗೋಳದಲ್ಲಿ 144 ಮತಗಟ್ಟೆ ಸಿಬ್ಬಂದಿ, 120 ಪೊಲೀಸ್ ಸಿಬ್ಬಂದಿ, 92 ಸಾರಿಗೆ ಸಿಬ್ಬಂದಿ ಸೇರಿ ಒಟ್ಟು 446 ಚುನಾವಣಾ ಸಿಬ್ಬಂದಿಯನ್ನು ಮತದಾನಕ್ಕೆ ಬಳಿಸಿಕೊಳ್ಳಲಾಗುತ್ತಿದೆ.
ಎಡಗೈ ಮಧ್ಯ ಬೆರಳಿಗೆ ಶಾಯಿ: ಕುಂದಗೋಳ, ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮತದಾರರಿಗೆ ಎಡಗೈ ಮಧ್ಯ ಬೆರಳಿಗೆ ಶಾಯಿ ಹಾಕಲಾಗುವುದು. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಈ ಎರಡೂ ಕ್ಷೇತ್ರಗಳ ಜನ ಮತ ಚಲಾಯಿಸಿದ್ದಾರೆ. ಆಗ ಎಡಗೈ ಮುಖ್ಯ ಬೆರಳಿಗೆ ಶಾಯಿ ಹಾಕಲಾಗಿತ್ತು. ಅದಕ್ಕಾಗಿ, ಉಪ ಚುನಾವಣೆಯಲ್ಲಿ ಎಡಗೈ ಮಧ್ಯ ಬೆರಳಿಗೆ ಶಾಯಿ ಹಾಕಲು ನಿರ್ಧರಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ತಿಳಿಸಿದರು.