ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಭಗವಾನ್ ಬಾಹು ಬಲಿಯ ಮಹಾಮಸ್ತಕಾಭಿಷೇಕದ ಪ್ರಯುಕ್ತ ಜ. 5 ಮತ್ತು 6ರಂದು ರಾಜ್ಯ ಮಟ್ಟದ ಜಿನ ಭಕ್ತಿ ಗೀತೆ ಸ್ಪರ್ಧೆಯ ಮೂಡುಬಿದಿರೆ ಪದ್ಮಾವತಿ ಕಲಾ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಭಾರತೀಯ ಜೈನ್‌ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
16 ವರ್ಷ ಮೇಲ್ಪಟ್ಟವರಿಗಾಗಿ ಹಿರಿಯರ ವಿಭಾಗ ಮತ್ತು 8ರಿಂದ 15 ವರ್ಷ ವಯೋಮಿತಿಯವರಿಗಾಗಿ ಕಿರಿಯ ವಿಭಾಗಗಳಿದ್ದು 5ರಿಂದ 7 ಜನರ ತಂಡಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ವಿಭಾಗ ಮಟ್ಟದಲ್ಲಿ ಸ್ಪರ್ಧೆಗಳು ಮುಗಿದಿದ್ದು ಸೆಮಿಫೈನಲ್, ಫೈನಲ್ ಸ್ಪರ್ಧೆಗಳು ಮೂಡುಬಿದಿರೆಯಲ್ಲಿ ನಡೆಯಲಿವೆ.
ಹಿರಿಯರ ವಿಭಾಗದಲ್ಲಿ ಪ್ರಥಮ 35 ಸಾವಿರ ರೂ., ದ್ವಿತೀಯ 25 ಸಾವಿರ ರೂ., ತೃತೀಯ 15 ಸಾವಿರ ರೂ., ಕಿರಿಯರ ವಿಭಾಗದಲ್ಲಿ ಪ್ರಥಮ 15 ಸಾವಿರ ರೂ., ದ್ವಿತೀಯ 10 ಸಾವಿರ ರೂ. ಹಾಗೂ ತೃತೀಯ 5 ಸಾವಿರ ರೂ. ನಗದು ಹಾಗೂ ಟ್ರೋಫಿಯನ್ನು ನೀಡಲಾಗುವುದು.
ಡಿ. 5ರಂದು ಬೆಳಗ್ಗೆ 9.30ಕ್ಕೆ ಡಾ| ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದು ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾ ಚಾರ್ಯವರ್ಯ ಸ್ವಾಮೀಜಿ ಆಶೀ ರ್ವಚನ ನೀಡುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ. ಅಭಯಚಂದ್ರ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಭಾಗವಹಿಸುವರು. ಜೈನ್ ಮಿಲನ್‌ನ ರಾಷ್ಟ್ರೀಯ ಅಧ್ಯಕ್ಷ ಡಿ. ಸುರೇಂದ್ರ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಸುರೇಂದ್ರ ಕುಮಾರ್, ಜೈನ್‌ಮಿಲನ್ ವಲಯ 8ರ ಅಧ್ಯಕ್ಷೆ ಪುಷ್ಪರಾಜ್ ಜೈನ್, ಮೂಡುಬಿದಿರೆ ಜೈನ್ ಮಿಲನ್ ಅಧ್ಯಕ್ಷೆ ಶ್ವೇತಾ ಜೈನ್ ಭಾಗವಹಿಸಲಿದ್ದಾರೆ. ಜ. 6ರಂದು ಬೆಳಗ್ಗೆ 10ಕ್ಕೆ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದ್ದು ಮಧ್ಯಾಹ್ನ 3ಕ್ಕೆ ಡಿ. ಹಷೇìಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ಸಮಾ ರೋಪ ನಡೆಯಲಿದೆ.
ಬಾಹುಬಲಿ ಮೂರ್ತಿ ಶುಚಿತ್ವ ಕಾರ್ಯ
ಬೆಳ್ತಂಗಡಿ: ಶ್ರೀ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ಧರ್ಮಸ್ಥಳ ಸಜ್ಜಾಗುತ್ತಿದ್ದು, ಬಾಹುಬಲಿ ಮೂರ್ತಿ ಹಾಗೂ ಬ್ರಹ್ಮಸ್ತಂಭವನ್ನು ಶುಕ್ರವಾರ ಶುಚಿಗೊಳಿಸುವ ಕಾರ್ಯ ನಡೆಯಿತು. ತಾತ್ಕಾಲಿಕ ಅಟ್ಟಳಿಕೆ
ನಿರ್ಮಿಸಿ, 60ಕ್ಕೂ ಹೆಚ್ಚಿನ ಶ್ರಾವಕರು ಶುಚಿತ್ವದ ಕಾರ್ಯದಲ್ಲಿ ನಿರತರಾಗಿದ್ದರು.