Advertisement

ಇಂದು, ನಾಳೆ ಬಿಎಂಟಿಸಿ ಸಿಬ್ಬಂದಿಗೆ ಪರೀಕ್ಷೆ

05:35 AM Jun 21, 2020 | Lakshmi GovindaRaj |

ಬೆಂಗಳೂರು: ಬಿಎಂಟಿಸಿ ಸಿಬ್ಬಂದಿಯಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರ್‍ಯಾಂಡಮ್‌ ಟೆಸ್ಟ್‌ಗೆ ಸಂಸ್ಥೆ ಮುಂದಾ  ಗಿದೆ. ಜೂನ್‌ 21-22ರಂದು ಆಯ್ದ 20 ಘಟಕಗಳಲ್ಲಿ 50ವರ್ಷ ಮೇಲ್ಪಟ್ಟ ತಲಾ ನೂರು ಸಿಬ್ಬಂದಿಯ ಗಂಟಲು ದ್ರವ ಸಂಗ್ರಹ, ಸೋಂಕು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

Advertisement

ಬಿಬಿಎಂಪಿ ವೈದ್ಯಕೀಯ ತಂಡವು ಈ ಪರಿಕ್ಷೆ ನಡೆಸಲಿದೆ. ಅದರಲ್ಲೂ ಮೂತ್ರಪಿಂಡ, ಶ್ವಾಸಕೋಶ ಸೇರಿದಂತೆ ಗಂಭೀರ ಕಾಯಿಲೆ ಗಳಿಂದ ಬಳಲುತ್ತಿರುವವರಿಗೆ ಆದ್ಯತೆ ಮೇರೆಗೆ ಸ್ಯಾಂಪಲ್‌ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ತಪಾಸಣೆ ನಡೆಸುವ ವೈದ್ಯ ಕೀಯ ತಂಡಗಳಿಗೆ ಸುಸಜ್ಜಿತ ಕೊಠಡಿ ವ್ಯವಸ್ಥೆ ಮಾಡಬೇಕು ಮುಂ ಜಾಗ್ರತಾ ಕ್ರಮ ಪಾಲಿಸಬೇಕೆಂದು ಬಿಎಂಟಿಸಿಯ  ವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಸೂಚಿಸಿದ್ದಾರೆ.

ಎಲ್ಲೆಲ್ಲಿ ಪರೀಕ್ಷೆ? ಜೂ.21 ರಂದು ಇಂದಿರಾನಗರ, ಕೋರಮಂಗಲ, ಆರ್‌.ಆರ್‌ನಗರ, ಬನಶಂಕರಿ, ಶಾಂತಿನಗರ, ದೀಪಾಂ ಜಲಿನಗರ, ಯಶವಂತಪುರ, ಪೀಣ್ಯ, ಹೆಣ್ಣೂರು ಹಾಗೂ ಐಟಿಐ  ನಗರ. ಅದೇ ರೀತಿ, ಜೂ.22 ರಂದು ಅಂಜನಾ ಪುರ, ಶಾಂತಿನಗರ, ಕೆಂಗೈರಿ, ಸುಮ್ಮನಹಳ್ಳಿ, ಎಂ.ಎಸ್‌. ಪಾಳ್ಯ, ಯಲಹಂಕ, ಎಲೆಕ್ಟ್ರಾನಿಕ್‌ ಸಿಟಿ, ಸೂರ್ಯ ಸಿಟಿ, ಕಲ್ಯಾಣ ನಗರ ಹಾಗೂ ಆರ್‌.ಟಿ.ನಗರ ಘಟಕಗಳಲ್ಲಿ ಪರೀಕ್ಷೆ ನಡೆಯಲಿದೆ.

ಸೋಂಕು: ಶನಿವಾರ ಮತ್ತೆ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಮೂಲಕ ಪಾಸಿಟಿವ್‌ ಪ್ರಕಟರಣಗಳ ಸಂಖ್ಯೆ ಬಿಎಂಟಿಸಿಯಲ್ಲಿ 12ಕ್ಕೆ ಏರಿಕೆಯಾಗಿದೆ. ಇಂದಿರಾನಗರದಲ್ಲಿ ಮತ್ತೆ ಇಬ್ಬರು ನಿರೀಕ್ಷಕ ವರ್ಗದ ಅಧಿಕಾರಿಗಳು ಹಾಗೂ  ಅಂಜನಾಪುರ ಡಿಪೋ ದಲ್ಲೂ ಮತ್ತೂಬ್ಬ ಚಾಲಕನಲ್ಲಿ ಸೋಂಕು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next