Advertisement

ಇಂದು ಜಲಮಂಡಳಿ ಅದಾಲತ್‌

12:19 PM Aug 08, 2018 | Team Udayavani |

ಬೆಂಗಳೂರು: ಜಲಮಂಡಳಿಯು ಆ.8 ರಂದು ಬೆಳಗ್ಗೆ 9.30 ರಿಂದ 11 ಗಂಟೆವರೆಗೆ ಕೇಂದ್ರ-2 ಉಪವಿಭಾಗದಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕದಲ್ಲಿನ ವಿಳಂಬ, ಗೃಹಬಳಕೆ ಗೃಹೇತರ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಅದಾಲತ್‌ ಹಮ್ಮಿಕೊಂಡಿದೆ.

Advertisement

ಕೇಂದ್ರ-2 ಉಪವಿಭಾಗದ ವ್ಯಾಪ್ತಿಗೆ ಬರುವ ಹೈಗ್ರೌಂಡ್ಸ್‌ (ಎಚ್‌.ಜಿ.ಆರ್‌),ಕೋಲ್ಸ್‌ ಪಾರ್ಕ್‌ ಸೇವಾ ಠಾಣೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಮಿಲ್ಲರ್‌ ರಸ್ತೆ, ಹೈಗ್ರೌಂಡ್ಸ್‌ ಇಲ್ಲಿನ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಕಚೇರಿಯಲ್ಲಿ  ನಡೆಯುವ ಸಭೆಯಲ್ಲಿ ಭಾಗವಹಿಸಿ ಹಿರಿಯ ಅಧಿಕಾರಿಗಳಿಂದ ಪರಿಹಾರ ಪಡೆಯಬಹುದಾಗಿದೆ. ಮಾಹಿತಿಗೆ 22945191 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next