Advertisement
ವಿಜಯಪುರ ಜಿಲ್ಲೆಯ ಕೆಲವೆಡೆ ರೈತರ ಜಮೀನುಗಳು ವಕ್ಫ್ ಆಸ್ತಿ ಎಂದು ನೋಟಿಸ್ ಹೋಗಿ ರುವುದು ವಿವಾದಕ್ಕೆ ಕಾರಣ ವಾಗಿದ್ದು, ರಾಜ್ಯದಲ್ಲಿ ಉಪ ಚುನಾವಣೆಯ ಸಂದರ್ಭದಲ್ಲಿ ವಿಪಕ್ಷ ಬಿಜೆಪಿ ಕೈಗೆ ಅಸ್ತ್ರವೊಂದು ಸಿಕ್ಕಂತಾಗಿದೆ.ಈ ಮಧ್ಯೆ ನೋಟಿಸ್ ಹಿಂಪಡೆ ಯಲು ಸೂಚಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಹಲವೆಡೆ ರೈತರ ಪಹಣಿಯಲ್ಲಿ ಇಂದಿಗೂ ವಕ್ಫ್ ಆಸ್ತಿ ಎಂದು ನಮೂ ದಾಗಿದ್ದು, ಇದರಿಂದ ರೈತರು ಆತಂಕ ಗೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಇಷ್ಟು ದಿನ ಲವ್ ಜೆಹಾದ್ ಬಗ್ಗೆ ಕೇಳಿದ್ದೆವು. ಈಗ ಲ್ಯಾಂಡ್ ಜೆಹಾದ್ ಆರಂಭವಾಗಿದೆ. ಇದಕ್ಕೆ ಸ್ವತಃ ಸಿಎಂ ಅವರೇ ಕುಮ್ಮಕ್ಕು ಕೊಟ್ಟಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್ ವಕ್ಫ್ ಅದಾ ಲತ್ ಆರಂಭಿಸಿದ ಬಳಿಕವೇ ಇದೆಲ್ಲ ಆರಂಭವಾಗಿದೆ. ವಕ್ಫ್ ಕಾಯ್ದೆಗೆ ಕೇಂದ್ರ ಸರಕಾರ ತಿದ್ದುಪಡಿ ತರಲು ಹೊರಟಿರುವ ಈ ಹೊತ್ತಿನಲ್ಲಿ ಇದನ್ನೆಲ್ಲ ಏಕೆ ಮಾಡಬೇಕಿತ್ತು? ಇದರ ಉದ್ದೇಶ ವೇನು? ವಕ್ಫ್ ಆಸ್ತಿ ಹೆಚ್ಚಿಸಿಕೊಳ್ಳುವ ಮೂಲಕ ಲ್ಯಾಂಡ್ ಜೆಹಾದ್ ಇವರ ಉದ್ದೇಶವಾಗಿದ್ದು, ಇದರ ವಿರುದ್ಧ ನಮ್ಮ ಹೋರಾಟ ಎಂದರು.
Related Articles
Advertisement
ಉಪಚುನಾವಣೆ ಅಸ್ತ್ರವಾಗಿದ್ದ ವಿವಾದಕೆಲವು ರೈತರಿಗೆ, ವಿಶೇಷವಾಗಿ ಉತ್ತರ ಕರ್ನಾಟಕದ ಭಾಗಗಳಲ್ಲಿ ಇರುವವರಿಗೆ ವಕ್ಫ್ ಆಸ್ತಿ ಎಂಬುದಾಗಿ ನೋಟಿಸ್ ಜಾರಿಯಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದರು. ಈ ವಿಷಯದಲ್ಲಿ ಹೆಚ್ಚು-ಕಡಿಮೆ ಒಂದು ವಾರದಿಂದ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ವಾಕ್ಸಮರ ನಡೆಯುತ್ತಿತ್ತು. ಒಂದೆಡೆ ವಿಪಕ್ಷಗಳು ಸರಕಾರದ ನಡೆಯನ್ನು “ಭೂ ಜೆಹಾದ್’ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಸಿಎಂ-ಡಿಸಿಎಂ, ಉಪಚುನಾವಣೆ ಹಿನ್ನೆಲೆಯಲ್ಲಿ ವಿಪಕ್ಷ ಬಿಜೆಪಿಯು ಉದ್ದೇಶಪೂರ್ವಕವಾಗಿ ವಿವಾದ ಸೃಷ್ಟಿಸಿ ರಾಜಕೀಯ ಮಾಡಲು ಹೊರಟಿದೆ. ಬಿಜೆಪಿ ಅವಧಿಯಲ್ಲೂ ವಕ್ಫ್ ಮಂಡಳಿಯಿಂದ ರೈತರಿಗೆ ನೋಟಿಸ್ ನೀಡಲಾಗಿತ್ತು ಎಂದು ತಿರುಗೇಟು ನೀಡಿದ್ದರು. ಉಪಚುನಾವಣೆ ಹಿನ್ನೆಲೆಯಲ್ಲಿ ಇದು ವಿಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸಿತ್ತು. ಶನಿವಾರ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಕೂಡ ಸಿಎಂ, ವಕ್ಫ್ ವಿಷಯವನ್ನು ಜೆಡಿಎಸ್ ಮತ್ತು ಬಿಜೆಪಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಈ ಮೂಲಕ ರಾಜ್ಯದಲ್ಲಿ ಶಾಂತಿ ಕದಡುವ ದುಷ್ಟ ಪ್ರಯತ್ನವನ್ನು ಆ ಪಕ್ಷಗಳು ಜಂಟಿಯಾಗಿ ಮಾಡುತ್ತಿವೆ. ಇಂತಹ ಹೀನ ಪ್ರಯತ್ನಗಳಿಗೆ ರಾಜ್ಯದ ಜನರು ಸೊಪ್ಪು ಹಾಕದಂತೆಯೂ ಮನವಿ ಮಾಡಿದರು. ಜತೆಗೆ ಅಪಪ್ರಚಾರಗಳಿಗೆ ಕಿವಿಗೊಡದಂತೆ ಕೋರಿದರು.