Advertisement

ಇಂದು ಬ್ರಹ್ಮಾವರದಲ್ಲಿ “ಉಡುಪಿ ಜಿಲ್ಲಾ  ಬಿಲ್ಲವರ ಮಹಾ ಸಮಾವೇಶ’

01:00 AM Feb 03, 2019 | Harsha Rao |

ಉಡುಪಿ: ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಫೆ. 3ರ ಮಧ್ಯಾಹ್ನ 2ರಿಂದ 5ರ ತನಕ ಉಡುಪಿ ಜಿಲ್ಲಾ ಬಿಲ್ಲವ ಮಹಾ ಸಮಾವೇಶ ನಡೆಯಲಿದೆ.

Advertisement

ಹಳದಿ ಶಾಲು-ಗುರುತು ಚೀಟಿ
30 ಸಾವಿರ ಮಂದಿಗೆ ಉಪಾಹಾರ ವ್ಯವಸ್ಥೆಗೊಳಿಸಲಾಗಿದ್ದು, ಸುಮಾರು 200ಕ್ಕೂ ಮಿಕ್ಕಿ ಯುವಕರನ್ನು ಉಪಾಹಾರ ವ್ಯವಸ್ಥೆ ನಿರ್ವಹಣೆಗೆ ನಿಯೋಜಿಸಲಾಗಿದೆ. ಸಮಾವೇಶಕ್ಕೆ ಬರುವ ಸಮಾಜದವರಿಗೆ ನೀರು ಮತ್ತು ಮಜ್ಜಿಗೆ ವ್ಯವಸ್ಥೆ ಮಾಡಲಾಗಿದ್ದು, ಇದರ ನಿರ್ವಹಣೆಗೆ 200 ಮಂದಿ ಮಹಿಳೆಯರನ್ನು ನೇಮಿಸಲಾಗಿದೆ. ಪಾರ್ಕಿಂಗ್‌ ವ್ಯವಸ್ಥೆಗೆ ಆರಕ್ಷಕರೊಂದಿಗೆ 140 ಯುವಕರನ್ನು ನೇಮಿಸಲಾಗಿದೆ. ಸಭಾಂಗಣದಲ್ಲಿ  ಸಭಿಕರಿಗೆ 25 ಸಾವಿರ ಆಸನ ವ್ಯವಸ್ಥೆಗೊಳಿಸಲಾಗಿದೆ. 1,500 ಸ್ವಯಂಸೇವಕರಿಗೆ ಹಳದಿ ಶಾಲು, ಗುರುತು ಚೀಟಿ ನೀಡಲಾಗಿದೆ. 500 ಸಂಘಟಕರಿಗೆ, 50 ಮಂದಿ ವಿಶೇಷ ಆಹ್ವಾನಿತರಿಗೆ ಗುರುತಿಗಾಗಿ ಶಾಲು ನೀಡಲಾಗುವುದು ಎಂದು ಪ್ರಚಾರ ಸಮಿತಿಯ ಅಧ್ಯಕ್ಷ ಅಶೋಕ್‌ ಪೂಜಾರಿ ಹಾರಾಡಿ ತಿಳಿಸಿದ್ದಾರೆ. 

ಸಮಾವೇಶದ ಅಧ್ಯಕ್ಷ ಬಿ.ಎನ್‌. ಶಂಕರ ಪೂಜಾರಿ, ಕಾರ್ಯಾಧ್ಯಕ್ಷ ಪ್ರವೀಣ್‌ ಎಂ. ಪೂಜಾರಿ, ಪ್ರ.ಸಂಚಾಲಕ ಅಚ್ಯುತ ಅಮೀನ್‌ ಕಲ್ಮಾಡಿ, ಸಂಚಾಲಕ ರಾಜು ಪೂಜಾರಿ ಉಪ್ಪೂರು, ಪ್ರಚಾರ ಸಮಿತಿ ಅಧ್ಯಕ್ಷ, ಬ್ರಹ್ಮಾವರ ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಅಶೋಕ್‌ ಪೂಜಾರಿ ಹಾರಾಡಿ ಹಾಗೂ ಸಮಿತಿಯ ಪದಾಧಿಕಾರಿಗಳು,  ಸದಸ್ಯರ ವಿಶೇಷ ಮುತುವರ್ಜಿಯಲ್ಲಿ  ಸಮಾವೇಶ ಜರಗಲಿದೆ.

ಬೇಡಿಕೆಗಳ ಈಡೇರಿಕೆಗೆ ಪಟ್ಟು
ಹಿಂದುಳಿದ ವರ್ಗದ ಮೀಸಲಾತ್ನಿಯನ್ನು ಪ್ರವರ್ಗ “2ಎ’ಯಿಂದ ಪ್ರವರ್ಗ 1ಕ್ಕೆ ಬದಲಾಯಿಸಬೇಕು,  ಬ್ರಹ್ಮಶ್ರೀ ನಾರಾಯಣಗುರು ಯೋಜನೆ ನಿಗಮ ಸ್ಥಾಪಿಸಬೇಕು,  ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ, ಬಿಲ್ಲವ ಜನಾಂಗದ  ಕಸುಬಾದ ಕೃಷಿ ಹಾಗೂ ಇತರ ಸೊÌàದ್ಯೋಗ ಚಟುವಟಿಕೆಗಳಿಗೆ ಬಡ್ಡಿರಹಿತ ಸಾಲ ಸೌಲಭ್ಯ ನೀಡಬೇಕು, ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಅರ್ಚಕರಿಗೆ ಮಾಸಾಶನ ಸೌಲಭ್ಯ ಹಾಗೂ ಗರೋಡಿಗಳ ಪಹಣಿ
ಪತ್ರವನ್ನು ಗರೋಡಿಗಳ ಹೆಸರಿಗೆ ಮಾರ್ಪಾಡು ಮಾಡಬೇಕು, ದೇಶದಲ್ಲಿ ಕೇವಲ ಜಾತಿ, ಸಮುದಾಯ ಹಾಗೂ ಪಂಗಡ ಆಧಾರಿತ ಮೀಸಲಾತಿ ಇದೆ, ಆದರೆ ಬಿಲ್ಲವ ಸಮುದಾಯ ಈ ಮೀಸಲಾತಿ  ಪಡೆದುಕೊಂಡಿಲ್ಲ.

ರಾಜ್ಯಾದ್ಯಂತ ಬಿಲ್ಲವ ಸಮಾಜದ ಯುವಕರು ಅತ್ಯಧಿಕ ಸಂಖ್ಯೆಯಲ್ಲಿದ್ದು, ಬೇಡಿಕೆ ಈಡೇರಿಕೆಗೆ ಯುವಕರೊಂದಿಗೆ ಮಹಿಳೆಯರು, ಯುವತಿಯರು ಕೈಜೋಡಿಸಿದ್ದಾರೆ. ಪ್ರಸ್ತುತ ಬಿಲ್ಲವ ಯುವ ಶಕ್ತಿ ಒಗ್ಗೂಡಿದ್ದು, ಬಿಲ್ಲವರ ಸಮಾಜ ಆಗ್ರಹಿಸಿದ ಪ್ರಮುಖ 3 ಬೇಡಿಕೆಗಳ ಈಡೇರಿಕೆಗೆ ನಿರಂತರ ಪ್ರಯತ್ನ ನಡೆಸಲಾಗುವುದು ಎಂದು ಅಶೋಕ್‌ ಪೂಜಾರಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next